ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ವೇತಭವನಕ್ಕೆ ನುಗ್ಗಿ ಒಬಾಮಾ ರುಂಡ ಚೆಂಡಾಡುತ್ತೇವೆ: ಐಎಸ್ಐಎಸ್

By Mahesh
|
Google Oneindia Kannada News

ವಾಷಿಂಗ್ಟನ್, ಜ.29: ಭಾರತ ಪ್ರವಾಸ ಮುಗಿಸಿ ಸೌದಿ ಅರೇಬಿಯಾಕ್ಕೆ ತೆರಳಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಮತ್ತೊಮ್ಮೆ ಇರಾಕಿ ಉಗ್ರ ಸಂಘಟನೆಗೆ ಎಚ್ಚರಿಕೆ ಸಂದೇಶ ಕಳಿಸಿದೆ. 'ಅಮೆರಿಕವನ್ನು ಮುಸ್ಲಿಂ ರಾಷ್ಟ್ರವಾಗಿ ಪರಿವರ್ತಿಸು ಇಲ್ಲದಿದ್ದರೆ ಶ್ವೇತಭವನಕ್ಕೆ ನುಗ್ಗಿ ನಿನ್ನ ರುಂಡ ಚೆಂಡಾಡುತ್ತೇವೆ'ಎಂದು ಉಗ್ರರು ಹೂಂಕರಿಸಿದ್ದಾರೆ.

ಅಮೆರಿಕವನ್ನು ಮುಸ್ಲಿಂ ಸಾಮ್ರಾಜ್ಯವನ್ನಾಗಿ ಮಾಡಬೇಕಿದೆ. ನಂತರ ಫ್ರಾನ್ಸ್, ಬೆಲ್ಜಿಯಮ್, ಕುರ್ಡ್ಸ್ ಸೇರಿದಂತೆ ಜಿಹಾದಿಗಳ ಮೇಲೆ ಸಮರ ಸಾರಿರುವ ಎಲ್ಲಾ ರಾಷ್ಟ್ರಗಳ ಮೇಲೂ ದಾಳಿ ನಡೆಸಲಾಗುವುದು ಎಂದು ಐಎಸ್‌ಐಎಸ್ ಸಂಘಟನೆ ಮೂಲಭೂತವಾದಿಗಳು ಹೊಸದಾಗಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಈ ಮೇಲಿನಂತೆ ಘೋಷಿಸಲಾಗಿದೆ.[ಭಾರತದಲ್ಲಿ ಐಎಸ್ಐಎಸ್ ನಿಷೇಧ ಅಗತ್ಯವಿಲ್ಲವೇ?]

"ಏಯ್ ಒಬಾಮಾ... ಪ್ರತಿ ಬಾರಿ ನೀನು ಕ್ಷಿಪಣಿ ಬಳಸಿದಾಗ ನಿನ್ನ ಸೈನಿಕ ಪಡೆಯ ರುಂಡಗಳನ್ನು ಉತ್ತರವಾಗಿ ಕಳಿಸುತ್ತೇವೆ" ಎಂದು ಎಚ್ಚರಿಕೆ ನೀಡಿದ್ದಾರೆ. ಐಎಸ್ಐಎಸ್ ವಿರುದ್ಧ ನಿಂತಿರುವ ಇರಾಕಿ ಖುರ್ದೀಷ್ ನಾಯಕ ಮಸುದ್ ಬರಾಜಾನಿಗೆ ಎಚ್ಚರಿಕೆ ತಟ್ಟುವಂತೆ ಸಂದೇಶ ರೂಪಿಸಲಾಗಿದೆ.

ISIS threatens to behead Obama

ಮೆಸೂಲ್ ನಗರದ ಶಾಂತಿ ಕದಡಿ, ಬಾಂಬ್ ದಾಳಿ ನಡೆಸಿ ನಾಶ ಮಾಡಿರುವ ಚಿತ್ರವನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಇನ್ನೂ ಭೀಕರವೆಂದರೆ, ಸೆರೆ ಸಿಕ್ಕ ವಿದೇಶಿ ಸೈನಿಕರು, ಪತ್ರಕರ್ತರ ನೂರಾರು ಜನರ ಹರ್ಷೋದ್ಘಾರಗಳ ನಡುವೆ ಶಿರಚ್ಛೇದ ಮಾಡುತ್ತಿರುವ ಚಿತ್ರಗಳಿವೆ. [ಐಎಸ್ಐಎಸ್ ಸರ್ವನಾಶಕ್ಕೆ ಸಿದ್ಧರಾಗಿ: ಒಬಾಮಾ ಕರೆ]

ಮುಖವಾಡ ಧರಿಸಿರುವ ಐಎಸ್‌ಐಎಸ್ ಉಗ್ರನೊಬ್ಬ ಮುಂದೆ ತಾವು ಅಮೆರಿಕ, ಫ್ರಾನ್ಸ್, ಬೆಲ್ಜಿಯಂ, ಖುರ್ದ್ಸ್ ಹಾಗೂ ಇತರ ದೇಶಗಳ ಮೇಲೆ ವಿಧ್ವಂಸಕಾರಿ ದಾಳಿ ನಡೆಸುವುದಾಗಿ ಘೋಷಿಸಿದ್ದಾನೆ. [ಉಗ್ರರಿಗೆ ಪಾಕ್ ಸುರಕ್ಷಿತ ಸ್ವರ್ಗ : ಇದು ಸಹಿಸಲಸಾಧ್ಯ]

ಈ ಹಿಂದೆ ಒತ್ತೆಯಾಳುಗಳಾಗಿಟ್ಟುಕೊಂಡಿದ್ದ ಜೇಮ್ಸ್ ಫೋಲಿ, ಡೇವಿಡ್ ಹೈನ್ಸ್, ಅಲೆನ್ ಹೆನ್ನಿಂಗ್ ಹಾಗೂ ಇತ್ತೀಚೆಗೆ ಜಪಾನಿ ಒತ್ತೆಯಾಳು ಹರೂನಾಯುಕಾನಾ ಅವರ ಶಿರಚ್ಛೇದದ ಚಿತ್ರಣಗಳೂ ವಿಡಿಯೋದಲ್ಲಿವೆ. ಈ ಹಿಂದೆ ಶಿರಚ್ಛೇದ ವಿಡಿಯೋ ಕಂಡು ಕೆಂಡಾಮಂಡಲವಾಗಿದ್ದ ಬರಾಕ್ ಒಬಾಮಾ, ಉಗ್ರರನ್ನು ಸದೆಬಡಿಯುವಂತೆ ಅಮೆರಿಕದ ಸೈನಿಕರಿಗೆ ಕರೆ ನೀಡಿದ್ದರು. ಭಾರತ ಪ್ರವಾಸದಲ್ಲೂ ಭಯೋತ್ಪಾದನೆ ವಿರುದ್ಧ ಸಮರ ಸಾರಿರುವುದಾಗಿ ಘೋಷಿಸಿದ್ದರು.

English summary
In its latest video, ISIS has threatened to behead Barack Obama and convert US into a Muslim province.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X