ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಸ್ಐಎಸ್ ಧಾಳಿಯ ಭೀತಿಯಲ್ಲಿ ಭಾರತ

By Vanitha
|
Google Oneindia Kannada News

ವಾಷಿಂಗ್ಟನ್, ಜುಲೈ, 30 : ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಸಿರಿಯಾ (ಐಎಸ್ಐಎಸ್) ಉಗ್ರ ಸಂಘಟನೆ ಭಾರತದ ಮೇಲೆ ದಾಳಿ ನಡೆಸಲು ಭಾರಿ ಯೋಜನೆ ರೂಪಿಸಿದೆ.

ಕರ್ನಾಟಕ ಸೇರಿದಂತೆ ದೇಶದ 10 ರಾಜ್ಯಗಳಲ್ಲಿ ಐಎಸ್ಐಎಸ್ ಬೆಂಬಲಿತ ಉಗ್ರರ ಬೆರು ವ್ಯಾಪಿಸಿರುವುದು ಬಯಲಾಗಿ, ಕಾಶ್ಮೀರದಲ್ಲಿ ಇಸ್ಲಾಮಿಕ್ ಉಗ್ರ ಧ್ವಜ ಹಾರಾಡಿದ ಬೆನ್ನಲ್ಲೇ ಈ ಮಾಹಿತಿ ಬಹಿರಂಗವಾಗಿದೆ.[ದೇಶಾದ್ಯಂತ ದಾಳಿ ಮಾಡಲು ಐಎಸ್ಐಎಸ್ ಸಂಚು ರೂಪಿಸಿತ್ತೆ?]

ISIS laying the sketch assault on India

ಭಾರತವನ್ನೇಕೆ ಗುರಿ ಮಾಡಲಾಗಿದೆ?
ಭಾರತದಲ್ಲಿ ದಾಳಿ ನಡೆಸಿ ಶಾಂತಿ ಕದಡುವ ಮೂಲಕ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಂಡು, ಮೊದಲು ಅಮೆರಿಕಕ್ಕೆ ಪ್ರಚೋದನೆ ನೀಡುವುದು. ಅಕಸ್ಮಾತ್ ಅಮೆರಿಕಾ ತನ್ನ ಮಿತ್ರ ರಾಷ್ಟ್ರಗಳೊಂದಿಗೆ ದಾಳಿ ನಡೆಸಿದ್ದಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಉಗ್ರರೆಲ್ಲಾ ಒಂದಾಗಿ ಅಂತಿಮ ಯುದ್ಧ ನಡೆಸುತ್ತೇವೆ ಎಂದು ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.

ಐಎಸ್ಐಎಸ್ ಉಗ್ರರ ಸಂಚಿನ ಕುರಿತಾಗಿ ಯಾವುದೇ ಪುರಾವೆಗಳು ಲಭ್ಯವಿಲ್ಲ ಎಂದು ಭಾರತದ ಗುಪ್ತಚರ ವಿಭಾಗದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ ಅಫ್ಘಾನಿಸ್ಥಾನದಲ್ಲಿ ಉಗ್ರರ ಸುಳಿವು ಸಿಕ್ಕಿರುವುದರಿಂದ ಅಮೆರಿಕಾವು ಪರಿಸ್ಥಿತಿ ಕುರಿತು ಗಮನ ಹರಿಸಿದೆ.

ಪಾಕ್ ಪ್ರಜೆಯೊಬ್ಬನ ಬಳಿ ಇದ್ದ 32 ಪುಟಗಳ ಉರ್ದು ದಾಖಲೆಯನ್ನು ಅಮೆರಿಕನ್ ಮೀಡಿಯಾ ಸಂಸ್ಥೆ ಕಲೆಹಾಕಿತ್ತು. ಇದನ್ನು ಆಧರಿಸಿ ಅಮೆರಿಕದ 'ಯುಎಸ್ಎ ಟುಡೇ' ಪತ್ರಿಕೆ ಪ್ರಕಟಿಸಿರುವ ತನಿಖಾ ವರದಿಯಿಂದ ಈ ಮಾಹಿತಿ ಲಭ್ಯವಾಗಿದೆ. ಈ ವರದಿ ಪ್ರಕಾರ ಅಮೆರಿಕಾದ ಮೇಲೂ ದಾಳಿ ನಡೆಸಲು ಸ್ಕೆಚ್ ಹಾಕಿರುವ ಉಗ್ರರು ಇದಕ್ಕಾಗಿ ಮೊದಲು ಭಾರತವನ್ನು ಗುರಿಯಾಗಿಸಿ ಈ ದುಷ್ಕೃತ್ಯ ಎಸಗಲು ಮುಂದಾಗಿದೆ.

ಮುಲ್ಲಾಉಮರ್ ಸಾವು
ಲಂಡನ್: ಅಫ್ಘಾನಿಸ್ತಾನದ ಕುಖ್ಯಾತ ಉಗ್ರ ಸಂಘಟನೆ ತಾಲಿಬಾನ್ ಮುಖಂಡ 2 ತಿಂಗಳ ಹಿಂದೆಯೇ ಮೃತಪಟ್ಟಿದ್ದಾನೆ ಎಂದು ಬಿಬಿಸಿ ವರದಿ ಮಾಡಿದೆ. ಆದರೆ ಇದಕ್ಕೆ ಸರಿಯಾದ ಸಾಕ್ಷ್ಯಧಾರಗಳು ದೊರೆಯದ ಕಾರಣ ಬಿಬಿಸಿ ವರದಿಯನ್ನು ತಾಲಿಬಾನ್ ತಳ್ಳಿಹಾಕಿದೆ.

English summary
ISIS laying the sketch assault on India. America newspaper USA today have revealed this report through the investigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X