ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಸ್ ಐಎಸ್ ನಿಂದ ಇಂಗ್ಲೆಂಡ್ ದಾಳಿಯ ಮೃತ್ಯು ಕೇಕೆ ಸಂದೇಶ

ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನಲ್ಲಿ ಸೋಮವಾರ ನಡೆದ ಬಾಂಬ್ ಸ್ಫೋಟದ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತಿಲ್ಲ. ಆದರೆ ಈ ದಾಳಿ ನಂತರ ಆ ಸಂಘಟನೆ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮ ಆಚರಿಸುತ್ತಿದ್ದಾರೆ

By ವಿಕಾಸ್ ನಂಜಪ್ಪ
|
Google Oneindia Kannada News

ಎಲ್ಲರನ್ನೂ ಕೊಲ್ಲಿ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಇದು ಐಎಸ್ ಐಎಸ್ ಉಗ್ರ ಸಂಘಟನೆ ಬಗ್ಗೆ ಒಲವು ಹೊಂದಿರುವವರು ರವಾನಿಸುತ್ತಿರುವ ಸಂದೇಶ. ಮ್ಯಾಂಚೆಸ್ಟರ್ ಅರೇನಾದಲ್ಲಿ ಬಾಂಬ್ ಸ್ಫೋಟವಾಗಿ ಹತ್ತೊಂಬತ್ತು ಮಂದಿ ಮೃತಪಟ್ಟ ನಂತರ ಇಂಥದ್ದೊಂದು ಸಂದೇಶ ಹರಿದಾಡುತ್ತಿದೆ.

ಪಾಪ್ ಸಂಗೀತ ಕಾರ್ಯಕ್ರಮ ನಡೆದಿದ್ದ ಮ್ಯಾಂಚೆಸ್ಟರ್ ಅರೇನಾದಲ್ಲಿ ಹಲವು ಬಾಂಬ್ ಸ್ಫೋಟವಾಗಿತ್ತು. ಇದು ಆತ್ಮಹತ್ಯಾ ಬಾಂಬರ್ ದಾಳಿ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ದಾಳಿಯ ಹೊಣೆಯನ್ನು ಅಧಿಕೃತವಾಗಿ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲವಾದರೂ ಐಎಸ್ ಐಎಸ್ ನವರು ದಾಳಿಯ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.[ಮ್ಯಾಂಚೆಸ್ಟರ್ ಅರೇನಾದಲ್ಲಿ ಬಾಂಬ್ ಸ್ಫೋಟ, ಕನಿಷ್ಠ 19 ಮಂದಿ ಸಾವು]

ISIS handles celebrate Manchester blasts with

ಎಲ್ಲೆಡೆಯೂ ಕೊಲ್ಲಿ- ಬ್ರಿಟನ್, ಇಂಗ್ಲೆಂಡ್, ಮ್ಯಾಂಚೆಸ್ಟರ್, ಯುಕೆ, ಲಂಡನ್ ಎಂಬ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ. ಮತ್ತೊಂದು ಸಂದೇಶದಲ್ಲಿ- ಅವರನ್ನು ಕಂಡಲ್ಲೆಲ್ಲ ಕೊಲ್ಲಿ. ಅವರಲ್ಲಿ ಭಯ ಹುಟ್ಟಿಸಿ. ಓ ಮುವಾಹಿದ್, ಕಾಫಿರ್ ರನ್ನು ಎದುರಿಸಿ, ಅಲ್ಲಾ ನಿಮ್ಮಿಂದ ಏನನ್ನು ಅಪೇಕ್ಷಿಸುತ್ತಾನೋ ಅದನ್ನು ಮಾಡಿ ಎಂಬ ಮತ್ತೊಂದು ಸಂದೇಶ ಕೂಡ ಕಾಣಿಸಿದೆ.

English summary
Kill him everywhere was the message put out by some handles sympathetic towards the ISIS following the blast at Manchester Arena in which 19 persons have died. Multiple explosions rocked a concert at the Manchester Arena and the police are suspecting the role of a suicide bomber.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X