ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಮೂಲದ ಮಹಿಳೆ ಟ್ವಿಟರ್ ಸಿಇಓ ಆಗ್ತಾರಾ?

By Vanitha
|
Google Oneindia Kannada News

ಲಂಡನ್, ಸೆಪ್ಟೆಂಬರ್, 05 : ಸಾಮಾಜಿಕ ಜಾಲತಾಣದ ಸಾಲಿನಲ್ಲಿ ಫೇಸ್ ಬುಕ್ ನಂತರದ ಸ್ಥಾನ ಟ್ವಿಟರ್ ಗೆ ಸಲ್ಲುತ್ತದೆ. ಇದೀಗ ಟ್ವಿಟರ್ ನ ಸಿಇಓ ಆಯ್ಕೆ ಪ್ರಕ್ರಿಯೆ ಶುರುವಾಗಿದ್ದು, ಇದಕ್ಕೆ ಭಾರತೀಯ ಮೂಲದ ಮಹಿಳೆ ಹೆಸರು ಕೇಳಿ ಬರುತ್ತಿದೆ.

ಹೌದು ಜಗತ್ತಿನ ಟ್ವಿಟರ್ ಗೆ ಭಾರತೀಯ ಮೂಲದ ಪದ್ಮಶ್ರೀ ವಾರಿಯರ್ ಅವರನ್ನು ನೂತನ ಸಿಇಓ ಆಗಿ ಆಯ್ಕೆ ಮಾಡುವ ಕುರಿತಾಗಿ ಚರ್ಚೆ ನಡೆಯುತ್ತಿದ್ದು, ಇವರು ಸಿಇಓ ಅಧಿಕಾರ ಪಡೆಯಲು ಸ್ಪರ್ಧೆಗಿಳಿದಿದ್ದಾರೆ.[ಅಮೆರಿಕಾ ಪ್ರಶಸ್ತಿ ಪಡೆದ ಬೆಂಗಳೂರು ಮೂಲದ ಶಿಕ್ಷಕಿ]

Is Twitter all set to welcome Indian-origin Padmasree Warrior as its CEO?

ಟ್ವಿಟರ್ ನಿರ್ವಹಣೆ ಜವಾಬ್ದಾರಿಯನ್ನು ಮಹಿಳೆಗೆ ವಹಿಸುವುದಾಗಿ ಇದೇ ಮೊದಲ ಬಾರಿ ಚರ್ಚೆ ನಡೆದಿದ್ದು. ಪದ್ಮಶ್ರೀ ಅವರು ಆಯ್ಕೆಯಾದಲ್ಲಿ ಈ ಮೂಲಕ ಫೇಸ್ ಬುಕ್ ಹೊರತು ಪಡಿಸಿ ಜಗತ್ತಿನ ಮೂರು ಟೆಕ್ ಕಂಪನಿಗಳಿಗೆ ಭಾರತೀಯರೇ ಸಾರಥ್ಯ ವಹಿಸಿದಂತಾಗುತ್ತದೆ.

ಸದ್ಯ ಗೂಗಲ್ ಸುಂದರ್ ಪಿಚೈ ಮತ್ತು ಮೈಕ್ರೋಸಾಪ್ಟ್ ಗೆ ಸತ್ಯ ನಾಡೆಲ್ಲಾ ಅವರು ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಪದ್ಮಶ್ರೀ ಅವರನ್ನು ನೇಮಿಸಿದ್ದಲ್ಲಿ ಐಟಿ ಕಂಪನಿ ಸಿಸ್ಕೋದಲ್ಲಿ ಸಿಇಓ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಪದ್ಮಶ್ರೀ ಅವರು ಮೂಲತಃ ಆಂಧ್ರ ಪ್ರದೇಶದ ವಿಜಯವಾಡದವರಾದ ಇವರು ದೆಹಲಿಯ ಐಐಟಿ ಸಂಸ್ಥೆಯಿಂದ ರಸಾಯನ ಶಾಸ್ರ್ತವಿಷಯದಲ್ಲಿ ಎಂಜಿನಿಯರಿಂಗ್ ಪದವಿ ಗಳಿಸಿದ್ದಾರೆ. ಬಳಿಕ ಮೊಟರೋಲಾ ಕಂಪನಿಯ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ತಮ್ಮ ವೃತ್ತಿ ಬದುಕು ಆರಂಭಿಸಿದ್ದಾರೆ.

2008 ರಲ್ಲಿ ನೆಟ್ ವರ್ಕಿಂಗ್ ಎಕ್ವಿಪ್ ಮೆಂಟ್ ಮ್ಯಾನುಫ್ಯಾಕ್ಚರರ್ ಸಿಸ್ಕೊ ಸಿಸ್ಟಮ್ ಗೆ ಸೇರಿದ ಇವರು ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ಮತ್ತು ಸೀನಿಯರ್ ವೈಸ್ ಪ್ರೆಸಿಡೆಂಟ್ ಆಗಿ ಕಾರ್ಯನಿರ್ವಹಿಸಿದ್ದಾರೆ.

English summary
Is Twitter all set to welcome Indian-origin Padmasree Warrior as its CEO?. Some officials has selects padmasree name from the CEO selection process.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X