ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಬಾಮಾ ವಾಪಸ್ ಹೋದ ಮೇಲೆ ದಾಳಿ ನಡೆಸಬಹುದೇ?

By ವಿಕ್ಕಿ ನಂಜಪ್ಪ
|
Google Oneindia Kannada News

ಬರಾಕ್ ಒಬಾಮಾ ಭಾರತಕ್ಕೆ ಬಂದಾಗ ಯಾವುದೇ ಭಯೋತ್ಪಾದಕ ದಾಳಿ ನಡೆಸಿದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಪಾಕಿಸ್ತಾನಕ್ಕೆ ಅಮೆರಿಕ ಎಚ್ಚರಿಕೆ ರವಾನಿಸಿದೆ. ಅಮೆರಿಕದ ಈ ಸಂದೇಶ ಒಬಾಮಾ ಭಾರತದಿಂದ ವಾಪಸ್ ತೆರಳಿದ ಮೇಲೆ ದಾಳಿ ನಡೆಸಬಹುದೇ ಪ್ರಶ್ನೆಯನ್ನೂ ಹುಟ್ಟುಹಾಕಿದೆ.

ಭಾರತಕ್ಕೆ ಇದುವರೆಗೆ ಅಮೆರಿಕದ ಹಲವು ಅಧ್ಯಕ್ಷರು ಭೇಟಿ ನೀಡಿದ್ದಾರೆ. ಬರುವಾಗ ಕಠಿಣ ಮಾತುಗಳನ್ನಾಡುತ್ತಲೇ ಬರುತ್ತಾರೆ. ಆದರೆ, ಯಾವುದೂ ವಾಸ್ತವದಲ್ಲಿ ಜಾರಿಗೆ ಬರುವುದಿಲ್ಲ. [ಎನ್ ಕೌಂಟರ್ ಗೆ ಉಗ್ರರು ಬಲಿ]

ಭಾರತದ ದೂರು ವ್ಯರ್ಥ : ಗಡಿಯಾಚೆಗಿನ ಭಯೋತ್ಪಾದನೆಯಿಂದ ಭಾರತ ಹಲವು ವರ್ಷಗಳಿಂದ ನರಳುತ್ತಿದೆ. ಪಾಕ್ ಭೂಮಿಯಿಂದ ಭಯೋತ್ಪಾದನೆ ನಡೆಯುತ್ತಿದೆ ಎಂದು ಭಾರತ ಹಲವು ಬಾರಿ ದೂರು ನೀಡಿದೆ. ಆದರೆ, ಯಾವುದೇ ಪರಿಣಾಮ ಬೀರಿಲ್ಲ.

ಅಮೆರಿಕ ತನ್ನ ದ್ರೋಣ್ ವಿಮಾನಗಳನ್ನು ಭಾರೀ ಪ್ರಮಾಣದಲ್ಲಿ ಉಪಯೋಗಿಸಿ ಭಯೋತ್ಪಾದಕರ ಸದ್ದಡಗಿಸುವಲ್ಲಿ ಯಶಸ್ವಿಯಾಗಿದೆ. ಭಾರತಕ್ಕೆ ಬೇಕಾಗಿರುವ ಹಫೀಜ್ ಸಯೀದ್ ಹಾಗೂ ಸಾಜಿರ್ ಮಿರ್ ಅವರನ್ನು ಮಟ್ಟಹಾಕಲು ಕೂಡ ಅಮೆರಿಕ ಸಹಾಯ ಮಾಡಬಹುದು. ಆದರೆ, ಈ ಕುರಿತು ಮನಸ್ಸು ಮಾಡುತ್ತಿಲ್ಲ. [ಕೋಸ್ಟ್ ಗಾರ್ಡ್ ಕಣ್ಣಿಗೆ ಪಾಕ್ ದೋಣಿ ಬಿದ್ದಿದ್ದು ಹೇಗೆ?]

obama

ಸಹಾಯಧನಕ್ಕೆ ಸಮರ್ಥನೆ : ಅಮೆರಿಕ ಪ್ರತಿವರ್ಷ ಪಾಕಿಸ್ತಾನಕ್ಕೆ ನೀಡುತ್ತಿರುವ ಸಹಾಯಧನವನ್ನು ಭಾರತ ಪ್ರಶ್ನಿಸಿದೆ. ಪಾಕಿಸ್ತಾನಕ್ಕೆ ನೀಡುತ್ತಿರುವ ಸೈನಿಕ ಸಹಾಯ ಭಾರತದ ವಿರುದ್ಧದ ಹೋರಾಟಕ್ಕೆ ವಿನಿಯೋಗವಾಗುತ್ತಿದೆ ಎಂದು ಭಾರತ ತಿಳಿಸಿದೆ.

ಆದರೆ, ಅಮೆರಿಕ ಇದಕ್ಕೆ ಕಿವಿಗೊಟ್ಟಿಲ್ಲ. ಈ ನಂತರವೂ ಪಾಕಿಸ್ತಾನ ಸೈನ್ಯಕ್ಕೆ 280 ಮಿಲಿಯನ್ ಡಾಲರ್ ಸಹಾಯಧನ ನೀಡಿದೆ. ಉಗ್ರರ ವಿರುದ್ಧ ಹೋರಾಡಲು ಪಾಕಿಸ್ತಾನಕ್ಕೆ ಸಹಾಯ ನೀಡುವ ಅಗತ್ಯವಿದೆ ಎಂದು ಅದು ವಾದಿಸಿದೆ. ಆದರೆ, ಭಾರತದ ಹಿತವನ್ನು ಗಮನದಲ್ಲಿಟ್ಟುಕೊಂಡು ನಾಗರಿಕ ಸಹಾಯಧನವನ್ನು ಕಡಿಮೆ ಮಾಡಿದೆ. [ಉಗ್ರರು ಬಲಿ]

ಭಾರತದ ಸಂಸತ್ತಿನ ಮೇಲೆ ನಡೆದ ದಾಳಿ ಪಾಕಿಸ್ತಾನದಿಂದಲೇ ಆಗಿದ್ದು ಎಂಬುದಕ್ಕೆ ಅಮೆರಿಕ ಸಾಕ್ಷ್ಯ ಕೇಳಿತ್ತು. ಭಾರತ ಯಾವುದೇ ಪ್ರತಿಕ್ರಿಯೆ ನೀಡದಂತೆ ತಡೆದಿತ್ತು. ಆದರೆ, 9/11 ರ ದಾಳಿಗೆ ಯಾವುದೇ ಸಾಕ್ಷ್ಯ ನೀಡದೆ ಅಲ್ ಖೈದಾ ಮೇಲೆ ಮುಗಿಬಿದ್ದಿತ್ತು.

ಅಫ್ಘಾನಿಸ್ತಾನಕ್ಕೆ ಪಾಕ್ ತರಬೇತಿ : ತನ್ನ ಅಧ್ಯಕ್ಷ ಭಾರತಕ್ಕೆ ಬಂದಾಗ ದಾಳಿ ನಡೆಸದಂತೆ ಅಮೆರಿಕ ಎಚ್ಚರಿಕೆ ನೀಡಿದ್ದರೂ, ಶಾಶ್ವತವಾಗಿ ಭಯೋತ್ಪಾದನೆ ನಿಲ್ಲಿಸುವಂತೆ ಸೂಚನೆ ನೀಡಿಲ್ಲ. ಅಲ್ಲದೆ, ಅಫ್ಘಾನಿಸ್ತಾನ ಪೊಲೀಸ್ ಹಾಗೂ ಸೈನ್ಯಕ್ಕೆ ಪಾಕಿಸ್ತಾನ ತರಬೇತಿ ನೀಡುವ ನಿರೀಕ್ಷೆ ಇದೆ. ಈ ಬೆಳವಣಿಗೆ ಭಾರತಕ್ಕೆ ಅಪಾಯಕಾರಿ. [ಅಫ್ಘಾನ್ ಮೂಲಕ ಪಾಕ್ ಮೇಲೆ ದಾಳಿ!]

ಪಾಕಿಸ್ತಾನವು 2014ರಲ್ಲಿ 540 ಬಾರಿ ಗಡಿಯಲ್ಲಿ ಯುದ್ಧವಿರಾಮವನ್ನು ಪಾಕಿಸ್ತಾನ ಉಲ್ಲಂಘಿಸಿದೆ. ಇದು ಕಳೆದ ದಶಕದಲ್ಲಿಯೇ ಅತ್ಯಂತ ಹೆಚ್ಚಿನದ್ದು. 2013ರಲ್ಲಿ ಈ ಸಂಖ್ಯೆ 148 ಇತ್ತು. ಇದಕ್ಕಿಂತ ಮೊದಲು ವರ್ಷಕ್ಕೆ ನೂರರ ಗಡಿ ದಾಟುತ್ತಿರಲಿಲ್ಲ. ಆದರೆ, ಈ ಕುರಿತು ಅಮೆರಿಕ ಜಾಣ ಮೌನ ವಹಿಸಿದೆ.

English summary
What did the United States of America mean when it told Pakistan to ensure that there is no cross border terror incident during the visit by President Barack Obama to India?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X