ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್‌ಏಷಿಯಾ ನಾಪತ್ತೆಯಾದಲ್ಲಿ ತೇಲುತ್ತಿವೆ ಶವಗಳು

By Nagaraju
|
Google Oneindia Kannada News

ಇಂಡೋನೇಷಿಯಾ, ಡಿ. 30: ಏರ್‌ಏಷಿಯಾ ವಿಮಾನ ನಾಪತ್ತೆಯಾದ ಸ್ಥಳದ ಕೆಳಗಿನ ಸಮುದ್ರ ಪ್ರದೇಶದಲ್ಲಿ ಹಲವು ಶವಗಳು ತೇಲುತ್ತಿರುವುದು ಕಂಡುಬಂದಿದೆ ಎಂದು ವಿಮಾನಕ್ಕಾಗಿ ಹುಡುಕುತ್ತಿರುವ ಇಂಡೋನೇಷಿಯಾ ನೌಕಾದಳ ಹೇಳಿದೆ.

ಸಮುದ್ರದಲ್ಲಿ ತೇಲುತ್ತಿರುವ ಊದಿಕೊಂಡಿರುವ ಶವವೊಂದನ್ನು ಸ್ಥಳೀಯ ಟಿವಿ ಚಾನಲ್‌ನಲ್ಲಿ ತೋರಿಸಲಾಗಿದೆ. ಈ ಶವವನ್ನು ಇಂಡೋನೇಷಿಯಾದ ನೌಕಾದಳದ ಹಡಗಿಗೆ ತರಲಾಗಿದೆ. ಈ ಶವದ ಮೇಲೆ ಲೈಫ್ ಜಾಕೆಟ್ ಕೂಡ ಇರಲಿಲ್ಲ ಎಂದು ನ್ಯಾಶನಲ್ ಸರ್ಚ್ ಆ್ಯಂಡ್ ರೆಸ್ಕ್ಯೂ ನಿರ್ದೇಶಕ ಎಸ್.ಬಿ. ಸುಪ್ರಿಯದಿ ಹೇಳಿದ್ದಾರೆ. [ಏರ್ ಏಷಿಯಾ ವಿಮಾನ ಜಾವಾ ಸಮುದ್ರದಲ್ಲಿ ಪತನ?]

ನೌಕಾದಳದ ವಕ್ತಾರ ಮನಹನ್ ಈ ವರದಿಯನ್ನು ದೃಢಪಡಿಸಿದ್ದಾರೆ. ಅನೇಕ ದೇಹಗಳು ಸಮುದ್ರದಲ್ಲಿ ತೇಲುತ್ತಿರುವುದು ಕಂಡುಬಂದಿವೆ ಎಂದು ತಿಳಿಸಿದ್ದಾರೆ.

plane

ವಸ್ತುಗಳೂ ತೇಲುತ್ತಿವೆ: ಕೇಂದ್ರ ಕಲಿಮಂತನ್ ಪ್ರದೇಶದ ಪಾಂಗ್‌ಕಲನ್ ಬನ್ ದ್ವೀಪದಿಂದ 190 ಕಿ.ಮೀ. ದೂರದಲ್ಲಿ ಹಲವು ವಸ್ತುಗಳು ಪತ್ತೆಯಾಗಿವೆ ಎಂದು ಇಂಡೋನೇಷಿಯಾ ನೌಕಾದಳ ಖಚಿತಪಡಿಸಿದೆ. [ಪಪ್ಪಾ ದಯವಿಟ್ಟು ಮನೆಗೆ ಬಾ : ಮಗಳ ಆರ್ತನಾದ]

ಪತ್ತೆಯಾದ ವಸ್ತುಗಳು ಅತ್ಯಂತ ಚಿಕ್ಕದಾಗಿದ್ದು ಕಿತ್ತಳೆ, ಬಿಳಿ, ಕಂದು ಹಾಗೂ ಕಪ್ಪು ಬಣ್ಣದಲ್ಲಿವೆ. ಈ ಕುರಿತು ಹೆಚ್ಚಿನ ವಿವರ ಸಂಗ್ರಹಿಸಲು ತಂಡವೊಂದನ್ನು ಕಳುಹಿಸಲಾಗಿದೆ ಎಂದು ನೌಕಾ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಟ್ವೀಟ್‌ಗಳಲ್ಲಿ ಸಮುದ್ರದಲ್ಲಿ ತೇಲುತ್ತಿದೆ ಎನ್ನಲಾದ ವಸ್ತುಗಳ ಛಾಯಾಚಿತ್ರಗಳು ಹರಿದಾಡುತ್ತಿವೆ.

ಸೋಮವಾರ ದ್ವೀಪವೊಂದರಲ್ಲಿ ಹೊಗೆ ಪತ್ತೆಯಾಗಿತ್ತು. ಆದ್ದರಿಂದ ಕಲಿಮಂತನ್ ದ್ವೀಪದ ಸುತ್ತಲಿನ ಸಮುದ್ರದ ಜೊತೆಗೆ ಇತರ ದ್ವೀಪಗಳಲ್ಲಿಯೂ ವಿಮಾನದ ಅವಶೇಷಗಳಿಗಾಗಿ ಹುಡುಕಾಟ ಆರಂಭವಾಗಿದೆ. [162 ಪ್ರಯಾಣಿಕರಿದ್ದ ಏರ್ ಏಷ್ಯಾ ವಿಮಾನ ನಾಪತ್ತೆ]

ಇಂಡೋನೇಷಿಯಾ ಜೊತೆಗೆ ಸಿಂಗಪುರ, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಮಲೇಷಿಯಾ ದೇಶಗಳೂ ಹುಡುಕಾಟದಲ್ಲಿ ಕೈಜೋಡಿಸಿವೆ.

body

ಇಂಡೋನೇಷಿಯಾದಿಂದ ಸಿಂಗಪುರಕ್ಕೆ ತೆರಳುತ್ತಿದ್ದ ಏರ್‌‌ಏಷ್ಯಾ ವಿಮಾನ ಪೂರ್ವ ಜಾವಾ ಪ್ರಾಂತ್ಯದಲ್ಲಿ ರಾಡಾರ್ ಸಂಪರ್ಕ ಕಡಿದುಕೊಂಡಿತ್ತು. ಇದರಲ್ಲಿ 162 ಪ್ರಯಾಣಿಕರಿದ್ದರು.

English summary
Indonesian officials Tuesday confirmed they have seen several bodies floating in waters near where the AirAsia was missing. They have recovered one body without life jacket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X