ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋದಿಂದ 1 ಮಿಲಿಯನ್ ಪೌಂಡ್ಸ್ ಆಗ್ರಹಿಸಿ ದೂರು

By Mahesh
|
Google Oneindia Kannada News

ಲಂಡನ್, ಅ.07: ಪ್ರಮುಖ ಐಟಿ ಸಂಸ್ಥೆ ವಿಪ್ರೋದ ಲಂಡನ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಉದ್ಯೋಗಿ ತನ್ನ ಬಾಸ್ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದಾರೆ. ಲೈಂಗಿಕ ನಿಂದನೆ, ಪಕ್ಷಪಾತ, ಸಂಬಳದಲ್ಲಿ ತಾರತಮ್ಯ ಆರೋಪ ಹೊರೆಸಿ ವಿಪ್ರೋ ಸಂಸ್ಥೆ ವಿರುದ್ಧ ಪರಿಹಾರ ರೂಪದಲ್ಲಿ 1 ಮಿಲಿಯನ್ ಪೌಂಡ್ ನೀಡುವಂತೆ ಆಗ್ರಹಿಸಿದ್ದಾರೆ.

ಬೆಂಗಳೂರು ಮೂಲದ ವಿಪ್ರೋ ಸಂಸ್ಥೆಯ ಯುಕೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಉದ್ಯೋಗಿ ತನ್ನ ಬಾಸ್ ನಿಂದ ಉಂಟಾದ ಮಾನಸಿಕ ಹಿಂಸೆ, ಅಶ್ಲೀಲ ಮಾತುಗಳನ್ನು ಸಹಿಸಿಕೊಳ್ಳಲಾಗದೆ ದೂರು ನೀಡಿದ್ದಾರೆ. ಭಾರತದ ಪುರಾಣದಲ್ಲಿ ಬರುವ ಮಾದಕ ನೃತ್ಯಗಾರ್ತಿಗೆ ನನ್ನನ್ನು ಹೋಲಿಸಿ ಮಾತನಾಡಿದ್ದಾರೆ.[ಟಿಸಿಎಸ್, ಇನ್ಫೋಸಿಸ್, ವಿಪ್ರೋಗೆ ಕಾದಿದೆ ಅಪಾಯ!]

ನನ್ನ ಉಡುಪು, ನಡೆ, ನುಡಿ ಬಗ್ಗೆ ಅವರು ನೀಡುತ್ತಿದ್ದ ಪ್ರತಿಕ್ರಿಯೆ ಕಾಮದೃಷ್ಟಿಯಿಂದ ಕೂಡಿರುತ್ತಿತ್ತು. ಪರಪುರುಷನ ಜೊತೆ ಅನೈತಿಕ ಸಂಬಂಧಕ್ಕೆ ದೂಡಲು ಬೇಕಾದ ಎಲ್ಲಾ ತಂತ್ರಗಳು ನನ್ನ ಮೇಲೆ ಪ್ರಯೋಗಿಸಲ್ಪಟ್ಟಿದೆ ಎಂದು ನೊಂದ ಮಹಿಳೆ ಲಂಡನ್ನಿನ ಉದ್ಯಮಿಗಳ ನ್ಯಾಯಮಂಡಳಿ ಮುಂದೆ ಗೋಳು ತೋಡಿಕೊಂಡಿದ್ದಾರೆ.

Indian woman employee files 1 mn pound sexual discrimination lawsuit against Wipro

2013ರಲ್ಲಿ ಸ್ಟಾಕ್ ಹೋಮ್ ಗೆ ಬಿಸಿನೆಸ್ ಟ್ರಿಪ್ ಗೆ ಬಾಸ್ ಜೊತೆ ಹೋಗಬೇಕಿತ್ತು. 54 ವರ್ಷ ವಯಸ್ಸಿನ ನಮ್ಮ ಬಾಸ್ ನನ್ನನ್ನು ನೋಡಿ 'ನಿಮ್ಮ ರೇಷ್ಮೆ ರವಿಕೆ ಚೆನ್ನಾಗಿದೆ, ಅದರೆ, ನಿಮ್ಮ ದೇಹದ ಆಕಾರಕ್ಕೆ ಇದು ತುಂಬಾ ಟೈಟಾಗಿದೆ' ಎಂದು ಕೆಟ್ಟದಾಗಿ ನಗೆಯಾಡಿದರು.

ಸಂಸ್ಥೆಯ ಮೇಲೆ ದೂರು: ಮಹಿಳೆಯರನ್ನು ಕೆಟ್ಟ ಸರಕುಗಳಂತೆ ಕಾಣುವ ಇಂಥವರ ಮೇಲೆ ಕೂಡಲೇ ಕ್ರಮ ಜರುಗಿಸಬೇಕು.ಇಂಥದ್ದೆಲ್ಲ ನಡೆಯುತ್ತಿದ್ದರೂ ಸಂಸ್ಥೆ ಸುಮ್ಮನಿದೆ. ಪುರುಷ ಉದ್ಯೋಗಿಗಳಿಗಿಂತ ನಮಗೆ ಸಂಬಳ ಕಡಿಮೆ ಸಿಗುತ್ತಿತ್ತು. ಪುರುಷರಿಗೆ 1,50,000 ಪೌಂಡ್ಸ್ ಸಿಗುತ್ತಿದ್ದರೆ, ನಮಗೆ 75,000 ಪೌಂಡ್ ವಾರ್ಷಿಕವಾಗಿ ಸಿಗುತ್ತಿತ್ತು ಎಂದು ದೂರಿದ್ದಾರೆ.[ಕಚೇರಿಗಳಲ್ಲಿ ಲೈಂಗಿಕ ಕಿರುಕುಳ, ತಗ್ಗದ ಪ್ರಮಾಣ]

ಈ ಪ್ರಕರಣದ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡದ ವಿಪ್ರೋ ಸಂಸ್ಥೆ, ನಮ್ಮಲ್ಲಿ ಲಿಂಗ ತಾರತಮ್ಯ ಇಲ್ಲ, ಯಾವುದೇ ರೀತಿಯ ಲೈಂಗಿಕಶೋಷಣೆ, ನಿಂದನೆಗೆ ಅವಕಾಶವಿಲ್ಲ, ಈ ಬಗ್ಗೆ ಕಾನೂನು ಮೂಲಕ ಉತ್ತರಿಸಲಾಗುವುದು ಎಂದಿದೆ. ಸಂಸ್ಥೆಯ ನಿಯಮಗಳನ್ನು ಮೀರಿದ ಕಾರಣ ಇಬ್ಬರನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ ಎಂದು ಕೂಡಾ ಪ್ರಕಟಣೆ ಹೊರಡಿಸಲಾಗಿದೆ. (ಪಿಟಿಐ)

English summary
An Indian woman employee at the London office of IT major Wipro has filed a 1 million pounds compensation case of sexual discrimination, unequal pay and unfair dismissal against the firm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X