ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಸಂಜಾತ ನೀಲ್ ಮುಖರ್ಜಿ ಕೈತಪ್ಪಿದ ಬೂಕರ್

|
Google Oneindia Kannada News

ಲಂಡನ್, ಅ. 15 : ಪ್ರತಿಷ್ಠಿತ ಮ್ಯಾನ್ ಬೂಕರ್ ಪ್ರಶಸ್ತಿ ಭಾರತೀಯ ಮೂಲದ ಲೇಖಕ ನೀಲ್‌ ಮುಖರ್ಜಿ ಕೈ ತಪ್ಪಿದೆ. ನಾಮಕರಣಗೊಂಡಿದ್ದ ಮುಖರ್ಜಿ ಕೃತಿ 'ದಿ ಲೈವ್ಸ್‌ ಆಫ್‌ ಅದರ್ಸ್‌' ಅಂತಿಮ ಸ್ಪರ್ಧೆಯಲ್ಲಿ ತೀರ್ಪುಗಾರರ ಮನ ಗೆಲ್ಲುವಲ್ಲಿ ವಿಫಲವಾಗಿದೆ.

ಬೂಕರ್‌ ಪ್ರಶಸ್ತಿ ಆಸ್ಟ್ರೇಲಿಯಾದ ಲೇಖಕ ರಿಚರ್ಡ್ ಪಾಲಾಗಿದೆ. ಯುದ್ಧ ಕಾಲದ ಕೆಟ್ಟ ಸನ್ನಿವೇಶಗಳು ಮತ್ತು ಅದರ ನಂತರದ ಘೋರ ಪರಿಣಾಮಗಳ ಕುರಿತು ಬರೆದ ಪುಸ್ತಕಕ್ಕೆ ಬೂಕರ್‌ ದೊರೆತಿದೆ. ಮಂಗಳವಾರ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು ಭಾರತ ಮೂಲದ ಮುಖರ್ಜಿ ನಿರಾಸೆ ಅನುಭವಿಸಿದ್ದಾರೆ.[ಪ್ರಶಸ್ತಿ ಹಾದಿಯಲ್ಲಿ ಭಾರತ ಮೂಲದ ಲೇಖಕ]

booker

ಎರಡನೇ ಮಹಾಯುದ್ಧದ ನಂತರದ ಸನ್ನಿವೇಶಗಳನ್ನು ರಿಚರ್ಡ್ ತಮ್ಮ ತಂದೆಯ ಅನುಭವದ ಸಹಾಯದಿಂದ ಚಿತ್ರಿಸಿದ್ದರು. 53 ವರ್ಷದ ರಿಚರ್ಡ್‌ ಪ್ಲಾಗ್ನಂ ವಿರಚಿತ 'ದಿ ನ್ಯಾರೋ ರೋಡ್‌ ಟು ದಿ ಡೀಪ್‌ ನಾರ್ತ್‌' ಪ್ರಶಸ್ತಿ ಗಳಿಸಿಕೊಂಡಿದೆ.

1960ನೇ ಇಸವಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಚಾಲ್ತಿಯಲ್ಲಿದ್ದ ನಕ್ಸಲಿಸಂ ಕತೆ ಆಧಾರಿತ ಕೃತಿ 'ದಿ ಲೈವ್ಸ್‌ ಆಫ್‌ ಅದರ್ಸ್‌' 2014ರ ಬೂಕರ್‌ಗೆ ನಾಮನಿರ್ದೇಶನಗೊಂಡಿತ್ತು. 2013ರಲ್ಲಿ ದಿವಗಂತ ಯು.ಆರ್.ಅನಂತಮೂರ್ತಿ ನಾಮನಿರ್ದೇಶನಗೊಂಡಿದ್ದರು. ಕಳೆದ ಮೇ ತಿಂಗಳಲ್ಲಿ ಪ್ರಕಟವಾದ ಪುಸ್ತಕ ಬಹಳಷ್ಟು ಜನರಿಗೆ ಇಷ್ಟವಾಗಿತ್ತು. ಅಲ್ಲದೇ ಬೂಕರ್‌ ತೀರ್ಪುಗಾರರು ಮುಖರ್ಜಿ ಕೃತಿ ಬಗ್ಗೆ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಇದೀಗ ಪ್ರಶಸ್ತಿ ಕೈ ತಪ್ಪಿದೆ.[ಯು.ಆರ್.ಅನಂತಮೂರ್ತಿ ಕೈ ತಪ್ಪಿದ ಬೂಕರ್ ಪ್ರಶಸ್ತಿ]

ಏನಿದು ಪ್ರಶಸ್ತಿ?
ಮ್ಯಾನ್ ಬೂಕರ್ ಇಂಟರ್ ನ್ಯಾಷನಲ್ ಪ್ರಶಸ್ತಿಯನ್ನು ವಿಶ್ವದ ಯಾವುದೇ ದೇಶದ, ಇಂಗ್ಲೀಷ್ ಭಾಷೆ ತರ್ಜುಮೆಗೆ ಲಭ್ಯವಿರುವ ಯಾವುದೇ ಭಾಷೆಯ ಕೃತಿಗೆ ನೀಡಲಾಗುತ್ತದೆ. 2005ರಿಂದ ಈ ಪ್ರಶಸ್ತಿಯನ್ನು ಪ್ರತಿ 2 ವರ್ಷಕ್ಕೊಮ್ಮೆ ನೀಡಲಾಗುತ್ತಿದೆ. ಪ್ರಶಸ್ತಿಯೂ 51 ಲಕ್ಷ ರೂ. ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.

English summary
Australian writer Richard Flanagan won the Booker Prize on Tuesday with a visceral book about wartime brutality and its aftermath - a novel the head of the judging team said was as powerful as a kick in the stomach. Indian-origin writer Neel Mukherjee’s ‘The Lives of Others' not able to got award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X