ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ : ಒಂದು ತಿಂಗಳಲ್ಲಿ ಮೂವರು ಎನ್ನಾರೈಗಳ ಹತ್ಯೆ

By Mahesh
|
Google Oneindia Kannada News

ನ್ಯೂಯಾರ್ಕ್, ಮೇ 3: ದಕ್ಷಿಣ ಕರೋಲಿನಾದಲ್ಲಿ ವೃತ್ತಿ ನಿರತ ಮಹಿಳೆಯನ್ನು ದುಷ್ಕರ್ಮಿಗಳು ಕೊಂದು ಹಾಕಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಮೂರು ಬಾರಿ ಭಾರತೀಯ ಮೂಲದ ವ್ಯಕ್ತಿಗಳ ಮೇಲೆ ಹಲ್ಲೆ, ಕೊಲೆ ಯತ್ನ ನಡೆದಿದೆ.

ದರೋಡೆ ಮಾಡಲು ಬಂದಿದ್ದ ದುಷ್ಕರ್ಮಿಗಳ ಗುಂಪೊಂದು ದಕ್ಷಿಣ ಕೊರಲಿನಾದ ಬಿಪಿ ಗ್ಯಾಸ್ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಭಾರತದ ಗುಜರಾತ್ ಮೂಲದ ಮಹಿಳೆಯೊಬ್ಬಳನ್ನು ಗುಂಡಿಟ್ಟು ಹತ್ಯೆ ಮಾಡಿದೆ.

ದಕ್ಷಿಣ ಕೆರೋಲಿನಾದ ಪೌಡರ‌ಸ್ರ ವಿಲ್ಲೆಯಲ್ಲಿ ಬಿಪಿ ಗ್ಯಾಸ್ ಕಂಪೆನಿ ಸಹ ಒಡೆತನ ಪಡೆದುಕೊಂಡಿದ್ದ ಮೃದುಲಾಬೆನ್ ಪಟೇಲ್(59) ಅವರನ್ನು ಮುಖಕ್ಕೆ ಗುಂಡು ಹಾರಿಸಿ ಕೊಲ್ಲಲಾಗಿದೆ.

Indian-origin woman shot dead in South Carolina US

ಗುರುವಾರ ರಾತ್ರಿ ದುಷ್ಕರ್ಮಿಯ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದ ಮಹಿಳೆ ಮೃತಪಟ್ಟ ಸುದ್ದಿ ಭಾನುವಾರ ಸಿಕ್ಕಿದೆ. ಇದು ದರೋಡೆ ಪ್ರಕರಣ ಜನಾಂಗೀಯ ದಾಳಿಯಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳ ಪತ್ತೆಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿರುವ ಪೊಲೀಸರು ಕಂಪನಿಯ ವಿಡಿಯೋ ದೃಶ್ಯಗಳನ್ನು ಪರೀಕ್ಷಿಸುತ್ತಿದ್ದಾರೆ. ಶೂಟಿಂಗ್ ನಡೆದ ಬಳಿಕ ನೆಲದ ಮೇಲೆ ರಕ್ತಸ್ರಾವದಿಂದ ಬಳಲುತ್ತಿದ್ದ ಪಟೇಲ್ ರನ್ನು ನೋಡಿದೆ ತಕ್ಷಣ 911ಗೆ ಕರೆ ಮಾಡಿ ನೆರವು ಕೇಳಿದೆ ಎಂದು ಗ್ರಾಹಕ ಮೈಕಲ್ ವೀಟ್ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ಭಾರತೀಯ ಮೂಲದ ಸಂಜಯ್ ಪಟೇಲ್(39) ಹಾಗೂ ರಾಜೇಶ್ ಮಡಾಲ (35) ಎಂಬುವರ ಮೇಲೆ ಕಳ್ಳರ ಗುಂಪೊಂದು ಇದೇ ರೀತಿ ದಾಳಿ ನಡೆಸಿ ಹತ್ಯೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. (ಪಿಟಿಐ)

English summary
An Indian-origin woman working at a gas station died after being shot in the face in an attempted armed robbery in South Carolina, the third such incident against Indians in the US within a month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X