ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪೆಲಿಂಗ್ ಬೀ ಸ್ಪರ್ಧೆ ಗೆದ್ದ ಮೈಸೂರು ಮೂಲದ ಬಾಲಕಿ

|
Google Oneindia Kannada News

ವಾಷಿಂಗ್ ಟನ್, ಮೇ 29: ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಫರ್ಧೆ ಟೈ ನಲ್ಲಿ ಅಂತ್ಯವಾಗಿದೆ. ಇಂಡೋ-ಅಮೇರಿಕನ್ ವನ್ಯಾ ಶಿವಶಂಕರ್ ಮತ್ತು ಗೋಕುಲ್ ವೆಂಕಟಾಚಲಂ ವಿಜಯಿಯಾಗಿ ಹೊರಹೊಮ್ಮಿದ್ದಾರೆ.

ಸುಮಾರು 54 ವರ್ಷದ ನಂತರ ಕಳೆದ ವರ್ಷ(2014) ರಲ್ಲಿ ಸ್ಪೆಲ್ಲಿಂಗ್ ಬೀ ಟೈ ನಲ್ಲಿ ಅಂತ್ಯವಾಗಿತ್ತು. ಈ ಸಾರಿಯೂ ಇಬ್ಬರು ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ.[ಮಕ್ಕಳ ಆಂಗ್ಲ ಜ್ಞಾನ ಹೆಚ್ಚಿಸುವ 'ಸ್ಪೆಲ್ಲಿಂಗ್ ಬೀ' ಸ್ಪರ್ಧೆ]

student

ಸಹೋದರಿಯರ ಸಾಧನೆ
ಈ ಬಾರಿ ಪ್ರಶಸ್ತಿ ಪಡೆದುಕೊಂಡ ವನ್ಯಾ ಶಿವಶಂಕರ್(13) ಅಕ್ಕ ಕಾವ್ಯಾ 2009ರಲ್ಲಿ ಸ್ಪೆಲ್ಲಿಂಗ್ ಬೀ ವಿಜೇತರಾಗಿದ್ದರು. ಕಾನ್ ಸಾಸ್ ನಿವಾಸಿಯಾಗಿರುವ ವನ್ಯಾ ಅಕ್ಕನ ಸಾಧನೆಯನ್ನು ಸರಿಗಟ್ಟಿದ್ದಾಳೆ.

ವನ್ಯಾ ಮೈಸೂರು ಮೂಲದ ದಂಪತಿಯ ಪುತ್ರಿ
ವನ್ಯಾ ಶಿವಶಂಕರ್‌ ಮೈಸೂರು ಮೂಲದ ಸಂಧ್ಯಾ ಶಿವಶಂಕರ್‌ ಮತ್ತು ಮಿರ್ಲೆ ಶಿವಶಂಕರ್‌ ಅವರ ಪುತ್ರಿ. ವನ್ಯಾರ ತಾಯಿ ಸಂಧ್ಯಾ ಮೈಸೂರು ಮರಿಮಲ್ಲಪ್ಪ ಕಾಲೇಜಿನ ಹಳೆಯ ವಿದ್ಯಾರ್ಥಿನಿ. ಬೋಗಾದಿಯಲ್ಲಿ ವನ್ಯಾರ ಅಜ್ಜಿಯ ಮನೆಯಿದ್ದು, ಪ್ರತಿ ವರ್ಷ ಬರುತ್ತಾರೆ. ಅಮೆರಿಕದಲ್ಲಿ ಹುಟ್ಟಿದ್ದರೂ ವನ್ಯಾಗೆ ಕನ್ನಡ ಚೆನ್ನಾಗಿ ಬರುತ್ತೆ.

14 ವರ್ಷದ ವೆಂಕಾಟಾಚಲಂ ಸಾಧನೆ
ಅಮೆರಿಕದ ಚೆಸ್ಟರ್ ಫೀಲ್ಡ್ ನಿವಾಸಿ ಗೋಕುಲ್ ವೆಂಕಟಾಚಲಂ ಅವರಿಗೂ ಇದು ಕೊನೆಯ ಅವಕಾಶವಾಗಿತ್ತು. ಇಬ್ಬರು ಸ್ಫರ್ಧಾಳುಗಳು ಐದನೇ ಬಾರಿ ಸ್ಪೆಲ್ಲಿಂಗ್ ಬೀ ನಲ್ಲಿ ಭಾಗಿಯಾಗಿದ್ದರು.[ಸಿಬಿಎಸ್ ಇ ಕ್ಲಾಸ್ 10 ಫಲಿತಾಂಶ ಇಲ್ಲಿ ನೋಡಿ]

ವನ್ಯಾ ಶಿವಕುಮಾರ್ ತನ್ನ ಗೆಲುವನ್ನು ಆಕೆಯ ಅಜ್ಜಿಗೆ ಅರ್ಪಿಸಿದ್ದಾಳೆ. ಕಠಿಣ ಪರಿಶ್ರಮ ಈ ಸಾಧನೆಗೆ ಕಾರಣವಾಯಿತು ಎಂದು ವನ್ಯಾ ಹೇಳುತ್ತಾರೆ. ಕೊನೆಯ ಸುತ್ತು ಎಂದು ನಾನು ಮೊದಲು ಸ್ವಲ್ಪ ಆತ್ಮವಿಶ್ವಾಸ ಕಳೆದಯಕೊಂಡಿದ್ದೆ. ಆದರೆ ನಂತರ ತುರುಸಿನಿಂದ ಭಾಗವಹಿಸಿದೆ ಎಂದು ಗೋಕುಲ್ ಹೇಳಿದ್ದಾರೆ.

ಅಂತಿಮ ಸುತ್ತಿನಲ್ಲಿ ವನ್ಯಾ ಮತ್ತು ಗೋಕುಲ್ ನಡುವೆ 10 ಸುತ್ತುಗಳು ನಡೆದವು. ಆದರೆ ಅಂತಿವಾಗಿ ಒಂದೊಂದು ಶಬ್ದದ ಅರ್ಥ ವಿವರಣೆ ನೀಡಲು ಸಾಧ್ಯವಾಗದೇ ಪ್ರಶಸ್ತಿ ಹಂಚಿಕೊಂಡರು. 14 ವರ್ಷದ ಕೋಲೆ ಶಫಿರ್ ರಾಯ್ ನಂತರದ ಪ್ರಶಸ್ತಿ ಪಡೆದುಕೊಂಡರು.

English summary
The National Spelling Bee ended in a tie for a second straight year. Two Indian-Americans, Vanya Shivashankar and Gokul Venkatachalam, were named co-champions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X