ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಸಂಸ್ಥೆಯ ಅಂಗಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದ ಭಾರತ

|
Google Oneindia Kannada News

ನವದೆಹಲಿ, ಏಪ್ರಿಲ್ 21 : ಭಾರತ ಹಾಗೂ ಇತರೆ 12 ಸದಸ್ಯರು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ(ECOSOC) ಅಂಗಸಂಸ್ಥೆ ಕಾರ್ಯಕ್ರಮ ಮತ್ತು ಸಮನ್ವಯ ಸಮಿತಿಗೆ (ಸಿಪಿಸಿ) ಆಯ್ಕೆಯಾಗಿವೆ.

ಸಾಮಾಜಿಕ ಮತ್ತು ಆರ್ಥಿಕ ವಿಷಯಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುವ ವಿಶ್ವಸಂಸ್ಥೆಯ ಅಂಗಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಭಾರತ ಅತ್ಯಧಿಕ ಮತಗಳೊಂದಿಗೆ ಜಯಿಸುವ ಮೂಲಕ ಸಿಪಿಸಿಗೆ ಆಯ್ಕೆಯಾಗಿದೆ.

India wins elections to two United Nations subsidiary bodies

ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ 50 ಸದಸ್ಯರ ಪೈಕಿ 49 ಸದಸ್ಯರ ಮತ ಪಡೆಯುವ ಮೂಲಕ ಭಾರತ ಕಾರ್ಯಕ್ರಮ ಮತ್ತು ಸಮನ್ವಯ ಸಮಿತಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಸೈಯದ್‌ ಅಕ್ಬರುದ್ದೀನ್ ಅವರು ಟ್ವೀಟ್ ಮಾಡಿದ್ದಾರೆ.

ಇದರೊಂದಿಗೆ ಭಾರತವು ಇತರೆ 19 ಸದಸ್ಯ ರಾಷ್ಟ್ರಗಳೊಂದಿಗೆ ಅಂತರರಾಷ್ಟ್ರೀಯ ಮಾದಕದ್ರವ್ಯ ನಿಯಂತ್ರಣ ಮಂಡಳಿಗೆ ನಾಲ್ಕು ವರ್ಷದ ಅವಧಿಗೆ ಆಯ್ಕೆಯಾಗಿದೆ.

English summary
India has won elections to two subsidiary bodies of a UN organ focussed on social and economic issues. India along with 12 other members was elected to the Committee for Programme and Coordination (CPC), a subsidiary body of the UN Economic and Social Council (ECOSOC).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X