ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲಿಂಗ ರತಿ ವಿರುದ್ಧ ಮತ ಚಲಾಯಿಸಿದ ಭಾರತ

|
Google Oneindia Kannada News

ವಾಷಿಂಗಟನ್, ಮಾ.25: ಸಲಿಂಗ ರತಿ ಅಪರಾಧವೇ? ಹೌದು, ಅಲ್ಲ ಎಂಬ ಅಭಿಪ್ರಾಯ ಮತ್ತು ಚರ್ಚೆಗಳು ನಡೆದುಕೊಂಡೆ ಬಂದಿವೆ. ಆದರೆ ವಿಶ್ವಸಂಸ್ಥೆಯ ಸಲಿಂಗಿ ಸಿಬ್ಬಂದಿಗೆ ನೀಡುತ್ತಿರುವ ವಿವಿಧ ಸೌಲಭ್ಯಗಳನ್ನು ಕಡಿತ ಮಾಡಬೇಕು ಎಂದು ರಷ್ಯಾ ಸಲ್ಲಿಸಿದ್ದ ಮನವಿಗೆ ವಿಶ್ವಸಂಸ್ಥೆ ಒಪ್ಪಿಗೆ ಸಿಕ್ಕಿಲ್ಲ.

ರಷ್ಯಾ ಕರಡಿನ ಪರ ಭಾರತವೂ ಮತ ಚಲಾಯಿಸಿತ್ತು. 43 ದೇಶಗಳು ಕರಡಿನ ಪರ ಮತ ಚಲಾಯಿಸಿದರೆ, 30 ರಾಷ್ಟ್ರಗಳು ವಿರುದ್ಧವಾಗಿ ಮತ ಚಲಾಯಿಸಿದ ಪರಿಣಾಮ ಮಸೂದೆ ಅಂಗೀಕಾರವಾಗಲಿಲ್ಲ. ವಿಶ್ವಸಂಸ್ಥೆಯ ಸಮಿತಿಯಲ್ಲಿ ಕರಡು ನಿರ್ಣಯ ವಿಫಲವಾಯಿತು.[ಸಲಿಂಗಕಾಮ ರೋಗ ಲಕ್ಷಣವಲ್ಲ: ಮನೋರೋಗ ವೈದ್ಯರು]

india

ಸಲಿಂಗಿ ದಂಪತಿಗಳಿಗೆ ತಾನು ನೀಡುವ ಸೌಲಭ್ಯಗಳನ್ನು ಸ್ಥಗಿತಗೊಳಿಸುವಂತೆ ವಿಶ್ವಸಂಸ್ಥೆಯನ್ನು ಒತ್ತಾಯಿಸುವ ವಿಧೇಯಕವೊಂದನ್ನು ರಷ್ಯಾ ಮಂಡಿಸಿತ್ತು. ಈ ನಿರ್ಣಯಕ್ಕೆ ಆಡಳಿತಾತ್ಮಕ ಹಾಗೂ ಆರ್ಥಿಕ ಅನುದಾನ ವಿಷಯಗಳ ಮೇಲುಸ್ತುವಾರಿ ನಡೆಸುವ ವಿಶ್ವಸಂಸ್ಥೆಯ ಮಹಾಧಿವೇಶನದ ಐದನೆಯ ಸಮಿತಿಯು ವಿರೋಧ ವ್ಯಕ್ತಪಡಿಸಿತು.[ವಿಶ್ವಸಂಸ್ಥೆಯಲ್ಲಿ ಮೋದಿ ಭಾಷಣ ಬಾಂಧವ್ಯ ಬೆಸುಗೆ]

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಕಳೆದ ಬೇಸಿಗೆಯಲ್ಲಿ ಪರಿಚಯಿಸಿರುವ ಯೋಜನೆಯು ವಿಶ್ವಸಂಸ್ಥೆಯಲ್ಲಿರುವ ಸಲಿಂಗಿ ಸಿಬ್ಬಂದಿಯನ್ನು ವಿಶ್ವಸಂಸ್ಥೆಯ ಸೌಲಭ್ಯಗಳನ್ನು ಪಡೆಯಲು ಅರ್ಹರನ್ನಾಗಿಸುತ್ತದೆ. ಭಾರತ, ಚೀನಾ, ಈಜಿಪ್ಟ್, ಇರಾನ್, ಇರಾಕ್, ಜೋರ್ಡಾನ್, ಕುವೈತ್, ಒಮಾನ್, ಪಾಕಿಸ್ತಾನ, ಕತರ್, ಸೌದಿ ಅರೇಬಿಯ ಹಾಗೂ ಯುಎಇ ರಾಷ್ಟ್ರಗಳು ರಷ್ಯಾ ವಿಧೇಯಕದ ಪರ ಮತ ಚಲಾಯಿಸಿದ್ದು, 37 ರಾಷ್ಟ್ರಗಳು ಮತದಾನದಿಂದ ಹೊರಗುಳಿದಿದ್ದವು.

English summary
India supported a Russian-drafted resolution that opposed benefits for same-sex partners of UN staff, but the resolution failed to pass in the General Assembly committee. The move comes in the wake of a growing debate in the country about decriminalising gay sex.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X