ಮಹಿಳೆಗೆ ಅಶ್ಲೀಲ ಸಂದೇಶ ಕಳಿಸಿದ ಮಾಜಿ ಕ್ರಿಕೆಟರ್

Posted By:
Subscribe to Oneindia Kannada

ಇಸ್ಲಾಮಾಬಾದ್, ಆಗಸ್ಟ್ 02:ತೆಹ್ರಿಕ್ ಇ ಇನ್ಸಾಫ್ ಪಕ್ಷದ ಮುಖ್ಯಸ್ಥ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ತಮ್ಮದೇ ಪಕ್ಷದ ಮಹಿಳಾ ನಾಯಕಿಗೆ ಆಕ್ಷೇಪಾರ್ಹ, ಆಶ್ಲೀಲ ಸಂದೇಶ ಕಳಿಸಿದ ಆರೋಪ ಹೊತ್ತುಕೊಂಡಿದೆ.

ಇಮ್ರಾನ್ ಖಾನ್ ಅವರಿಂದ 2013 ರ ಅಕ್ಟೋಬರ್ ನಲ್ಲಿ ಮೊದಲ ಸಂದೇಶವನ್ನು ಸ್ವೀಕರಿಸಿದ್ದೇನೆ ಎಂದು ಆಯೇಷಾ ಗುಲಾಲೈ ಎಂಬ ಮಹಿಳೆ ಇದೀಗ ದೂರಿದ್ದಾಳೆ.

Imran Khan Accused Of Sending 'Obscene' SMSes To Women Party Leaders

ಇಮ್ರಾನ್ ಖಾನ್ ತಮ್ಮ ಬ್ಲಾಕ್ ಬೆರ್ರಿ ಸೆಟ್ ನಿಂದ ಅಸಮರ್ಪಕವಾದ ಮೆಸೇಜ್ ಮಾಡಿದ್ದಾರೆ. ಅದನ್ನು ಪರಿಶೀಲಿಸಿದಲ್ಲಿ ಎಲ್ಲವೂ ಗೊತ್ತಾಗಲಿದೆ. ಪಕ್ಷ ಸೇರಿದಾಗಿನಿಂದ ಇಮ್ರಾನ್ ಖಾನ್ ಇದೇ ರೀತಿ ಮಾಡುತ್ತಿದ್ದಾರೆ. ನನ್ನಂತೆಯೇ ಇನ್ನೂ ಹಲವು ಮಹಿಳೆಯರಿಗೆ ಈ ರೀತಿ ಸಂದೇಶಾ ರವಾನಿಸಿದ್ದಾರೆ.ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾಳೆ.

ಇಮ್ರಾನ್ ಖಾನ್ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ಪ್ರತಿಭಾನ್ವಿತರನ್ನು ಕಂಡರೆ ಆಗುವುದಿಲ್ಲ ಎಂದು ಹೇಳಿದ್ದಾರೆ.
ತೆಹ್ರಿಕ್ ಇ ಇನ್ಸಾಫ್ (ಪಿಟಿಐ) ನಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ದಕ್ಷಿಣ ವಜಿರಿಸ್ತಾನದ ಬುಡಕಟ್ಟು ಪ್ರದೇಶದ ಮೂಲದ ನಾಯಕಿ ಆಯೇಷಾ ಆರೋಪಿಸಿದ್ದಾರೆ. ಆದರೆ, ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್ಎನ್) ಸೇರಲು ಆಯೇಷಾಗೆ ಆಫರ್ ಬಂದಿದೆ. ಹೀಗಾಗಿ ಇಮ್ರಾನ್ ಹಾಗೂ ಪಿಟಿಐ ವಿರುದ್ಧ ಆರೋಪಿಸುತ್ತಿದ್ದಾರೆ ಎಂದು ಪಿಟಿಐ ವಕ್ತಾರ ಫಹದ್ ಚೌಧರಿ ಪ್ರತಿಕ್ರಿಯಿಸಿದ್ದಾರೆ. (ಪಿಟಿಐ)

BJP Leader Kissing A Woman In A Moving Bus In Maharashtra Viral Video

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ayesha Gulalai, who hails from South Waziristan tribal region, in a press conference alleged that "honour" of women affiliated with Pakistan Tehreek-e-Insaf (PTI) was not safe.
Please Wait while comments are loading...