ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲೋರಿಡಾದತ್ತ ಧಾವಿಸಿದ ಚಂಡಮಾರುತ, 63 ಲಕ್ಷ ಜನರ ಸ್ಥಳಾಂತರ

By Sachhidananda Acharya
|
Google Oneindia Kannada News

ಫ್ಲೋರಿಡಾ, ಸೆಪ್ಟೆಂಬರ್ 10: ಕೆರಿಬಿಯನ್ ದ್ವೀಪಗಳಲ್ಲಿ 35ಕ್ಕೂ ಹೆಚ್ಚು ಜನರನ್ನು ಬಲಿ ಪಡೆದು ಇದೀಗ ಭೀಕರ ಚಂಡಮಾರುತ 'ಇರ್ಮಾ' ಅಮೆರಿಕಾದ ಫ್ಲೋರಿಡಾ ರಾಜ್ಯದತ್ತ ಧಾವಿಸಿದೆ.

ಗಂಟೆಗೆ 209 ಕಿಲೋಮೀಟರ್ ವೇಗದಲ್ಲಿ ಇರ್ಮಾ ಚಂಡಮಾರುತ ಫ್ಲೋರಿಡಾದತ್ತ ಧಾವಿಸುತ್ತಿದ್ದು ರಾಜ್ಯದ ಮೂರನೇ ಒಂದು ಭಾಗ ಜನರನ್ನು ಸ್ಥಳಾಂತರಿರುವಂತೆ ಸೂಚನೆ ನೀಡಲಾಗಿದೆ. ಒಟ್ಟು 63 ಲಕ್ಷ ಜನರು ಚಂಡ ಮಾರುತದಿಂದ ಸ್ಥಳಾಂತರವಾಗಿದ್ದಾರೆ.

Hurricane Irma regains Category 4 force; Indian missions set up helpline

ಕೀ ವೆಸ್ಟ್ ಕರಾವಳಿಯಿಂದ 140 ಕಿಲೋಮೀಟರ್ ದೂರದಲ್ಲಿ ಚಂಡಮಾರುತವಿದ್ದು ಇನ್ನೇನು ಫ್ಲೋರಿಡಾಗೆ ಅಪ್ಪಳಿಸಲಿದೆ. ಇರ್ಮಾದಿಂದಾಗಿ ಫ್ಲೋರಿಡಾದ 1,70,000 ಮನೆಗಳು ಮತ್ತು ಉದ್ಯಮಗಳು ವಿದ್ಯುತ್ ಕಡಿತ ಉಂಟಾಗಿದೆ.

ಈಗಾಗಲೇ ಹೆಚ್ಚಿನ ಜನರು ಫ್ಲೋರಿಡಾದ ಮಿಯಾಮಿ ಮತ್ತು ಟಂಪಾ ನಗರಗಳಿಂದ ಸುರಕ್ಷಿತ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ . ಇನ್ನು ಕೆಲವು ಜನರು ಮನೆಗಳಲ್ಲೇ ಬಾಕಿ ಉಳಿದಿದ್ದು, ಇನ್ನು ಸುರಕ್ಷಿತ ಪ್ರದೇಶಗಳಿಗೆ ತೆರಳುವುದು ಅಸಾಧ್ಯ ಎಂದು ಅಮೆರಿಕಾದ ಅಧಿಕಾರಿಗಳು ಹೇಳಿದ್ದಾರೆ.

ಚಂಡಮಾರುತ ಭೀತಿಯಲ್ಲಿ ಭಾರತೀಯರು

ಫ್ಲೋರಿಡಾದಲ್ಲಿ ಸುಮಾರು 1,20,000 ಭಾರತೀಯರು ನೆಲೆಸಿದ್ದು ಇವರಲ್ಲಿ ಸಾವಿರಾರು ಜನರು ಚಂಡಮಾರುತಕ್ಕೆ ಗುರಿಯಾಗಲಿರುವ ಮಿಯಾಮಿ ನಗರದಲ್ಲಿದ್ದಾರೆ. ಇವರಿಗಾಗಿ ಭಾರತೀಯ ಧೂತಾವಾಸ ಕಚೇರಿ ಸಹಾಯವಾಣಿ ತೆರೆದಿದೆ.

Hurricane Irma regains Category 4 force; Indian missions set up helpline

ಸಹಾಯವಾಣಿ ಸಂಖ್ಯೆ 202-258-8819 ಮತ್ತು 14044052567, 1678179393 ಸಂಖ್ಯೆಗಳನ್ನು ತುರ್ತು ಸಂದರ್ಭದಲ್ಲಿ ಸಂಪರ್ಕಿಸಬಹುದು.

ಇನ್ನು ಭಾರತೀಯ ಧೂತಾವಾಸ ಕಚೇರಿಯೂ ಸಹಾಯವಾಣಿ ಸಂಖ್ಯೆ 1876 833 4500 ಮತ್ತು 1876 564 1378 ಬಿಡುಗಡೆ ಮಾಡಿದೆ. ಇದಲ್ಲದೆ [email protected] ಮತ್ತು [email protected] ಗೆ ಇಮೇಲ್ ಕೂಡಾ ಮಾಡಬಹುದು.

English summary
Millions of people, including thousands of Indian-Americans, in Florida braced for Hurricane Irma as it regained strength as a Category 4 storm and aimed towards the coastal US state with wind speed of 210 km per hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X