ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್ 19ರಂದು ಭೂಮಿ ಸಮೀಪ ಹಾದು ಹೋಗಲಿದೆ ಕ್ಷುದ್ರ ಗ್ರಹ

ಕ್ಷುದ್ರ ಗ್ರಹವೊಂದು ಏಪ್ರಿಲ್ 9ರಂದು ಭೂಮಿಯ ಸಮೀಪದಿಂದ ಹಾದು ಹೋಗಲಿದ್ದು ಯಾವುದೇ ಅಪಾಯ ಇಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದಕ್ಕೆ 2014JO25 ಎಂದು ಹೆಸರಿಟ್ಟಿದ್ದು, 2014ರಲ್ಲಿ ಮೊದಲಿಗೆ ವಿಜ್ಞಾನಿಗಳ ಕಣ್ಣಿಗೆ ಕಾಣಿಸಿಕೊಂಡಿತ್ತು.

By Sachhidananda Acharya
|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 10: ಭೂಮಿಯ ಸಮೀಪದಿಂದ ದೊಡ್ಡ ಗಾತ್ರದ ಕ್ಷುದ್ರ ಗ್ರಹವೊಂದು ಇದೇ ಏಪ್ರಿಲ್ 19ರಂದು ಹಾದು ಹೋಗಲಿದೆ. ಈ ಮಾಹಿತಿಯನ್ನು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ನೀಡಿದೆ.

ಇದು ಭೂಮಿಯ ಸಮೀಪದಿಂದ ಹಾದು ಹೋಗಲಿದ್ದು ಯಾವುದೇ ಅಪಾಯ ಇಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದಕ್ಕೆ 2014 JO25 ಎಂದು ಹೆಸರಿಟ್ಟಿದ್ದು, 2014ರಲ್ಲಿ ಮೊದಲ ಬಾರಿಗೆ ವಿಜ್ಞಾನಿಗಳ ಕಣ್ಣಿಗೆ ಕಾಣಿಸಿಕೊಂಡಿತ್ತು.

Huge asteroid is just pass by earth on April 9

ಈ ಕ್ಷುದ್ರ ಗ್ರಹ ಎಷ್ಟು ಸಮೀಪ ಹಾದುಹೋಗಲಿದೆ ಎಂದರೆ ಮುಂದಿನ 480 ವರ್ಷ ಇಷ್ಟು ಸಮೀಪದಲ್ಲಿ ಯಾವುದೇ ಕ್ಷುದ್ರ ಗ್ರಹ ಹಾದುಹೋಗುವುದಿಲ್ಲ. ಇದಲ್ಲದೇ ಮುಂದಿನ 10 ವರ್ಷ ಇಷ್ಟು ದೊಡ್ಡ ಮತ್ಯಾವ ಕ್ಷುದ್ರ ಗ್ರಹವೂ ಭೂಮಿಗೆ ಸಮೀಪಕ್ಕೆ ಬರುತ್ತಿಲ್ಲ.

ಈ ಕ್ಷುದ್ರ ಗ್ರಹವು ಸುಮಾರು 2 ಕಿಮೀಗಿಂತ ಹೆಚ್ಚು ಅಗಲ ಹೊಂದಿದ್ದು, ಸುಮಾರು 18 ಲಕ್ಷ ದೂರದ ಸುರಕ್ಷಿತ ಅಂತರದಲ್ಲಿ ಭೂಮಿಯನ್ನು ಹಾದು ಹೋಗಲಿದೆ ಎಂದು ಅಂದಾಜು ಮಾಡಿದ್ದಾರೆ. ಇದೇ ರೀತಿಯಲ್ಲಿ 2003 BD44 1999 CU3 ಎಂಬ ಇನ್ನೆರಡು ಕ್ಷುದ್ರ ಗ್ರಹಗಳೂ ಭೂಮಿಯ ಸಂಮೀಪದಲ್ಲಿ ಸದ್ಯದಲ್ಲೇ ಹಾದು ಹೋಗಲಿವೆ. ಆದರೆ ಇದ್ಯಾವುದೂ 2014 JO25 ದೊಡ್ಡ ಗಾತ್ರದಲ್ಲಿ ಇಲ್ಲ ಎಂಬುದು ವಿಜ್ಞಾನಿಗಳ ಹೇಳಿಕೆ.

English summary
Huge asteroid is just pass by earth on April 9. Astronomers says that it is potentially hazardous, but there's nothing to worry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X