ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆಯಲ್ಲೇ ಎಚ್ಐವಿ ಸೋಂಕು ಪರೀಕ್ಷೆ ಮಾಡಿಕೊಳ್ಳಿ

By Mahesh
|
Google Oneindia Kannada News

ಲಂಡನ್, ಏ.27: ಮಾರಕ ರೋಗ ಏಡ್ಸ್ ಗೆ ಕಾರಣವಾಗಿರುವ ಎಚ್ ಐವಿ ಸೋಂಕು ತಗುಲಿರುವ ಬಗ್ಗೆ ಪರೀಕ್ಷೆ ನಡೆಸಲು ಸರ್ಕಾರಿ ಕೇಂದ್ರಕ್ಕೆ ತೆರಳಬೇಕಾಗಿಲ್ಲ. ನಿಮ್ಮ ಮನೆಯಲ್ಲೇ ಸುಲಭವಾಗಿ ಪರೀಕ್ಷೆ ಮಾಡಿಕೊಳ್ಳಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಬ್ರಿಟನ್ನಿನಲ್ಲಿ ಸುಲಭವಾಗಿ ಎಚ್ ಐವಿ ಟೆಸ್ಟ್ ಮಾಡಿಕೊಳ್ಳುವ ಸಾಧನಗಳು ಮಾರುಕಟ್ಟೆಗೆ ಬಿಡಲಾಗಿದೆ.

ಬಯೋಶ್ಯೂರ್ ಎಚ್ ಐವಿ ಸೆಲ್ಫ್ ಟೆಸ್ಟ್ ಹೆಸರಿನ ಈ ಸಾಧನ ಬಳಸಿಕೊಂಡು ಸುಲಭ ವಿಧಾನದಲ್ಲಿ ಸೋಂಕು ಪತ್ತೆ ಮಾಡಬಹುದು ಎಂದು ವೈದ್ಯರು ಹೇಳಿದ್ದಾರೆ. ಈ ಸಾಧನದಿಂದ ಮಾಡಿದ ಪರೀಕ್ಷೆ ಶೇ 99.7ರಷ್ಟು ನಿಖರವಾಗಿ ಫಲಿತಾಂಶ ನೀಡಿದೆ ಎನ್ನಲಾಗಿದೆ.[ಯುವಕರು ಸಾಯುತ್ತಿದ್ದಾರೆ ಎಚ್ಚರಿಕೆ!]

HIV home test kit goes on sale in Britain

ಗರ್ಭಿಣಿ ಪರೀಕ್ಷೆಗಾಗಿ ಇರುವ ಸಾಧನದಂತೆ ಇದು ಕೂಡಾ ಕಾರ್ಯ ನಿರ್ವಹಿಸುತ್ತದೆ. ದೇಹದಲ್ಲಿ ಹರಿಯುವ ರಕ್ತ ಕಣಗಳಲ್ಲಿನ ಪ್ರತಿಕಾಯ(antibodies) ಗಳ ಲೆಕ್ಕಾಚಾರವನ್ನು ತಪ್ಪಿಲ್ಲದೆ ಈ ಸಾಧನೆ ತೋರಿಸುತ್ತದೆ. ಈ ಮೂಲಕ ಸೋಂಕು ಪೀಡಿತ ವ್ಯಕ್ತಿಯ ದೇಹದ ರಕ್ತ ಪರೀಕ್ಷೆ ಮೂಲಕವೇ ಸೋಂಕು ಪತ್ತೆ ಹಚ್ಚಬಹುದಾಗಿದೆ. [ಎಚ್ಐವಿ ಪೀಡಿತರ ಸಹಾಯಕ್ಕೆ 'ಸುರಕ್ಷಾ']

ಗರ್ಭ ಪರೀಕ್ಷೆಯಂತೆ ಎಚ್ ಐವಿ ಸೋಂಕು ಪರೀಕ್ಷೆ ಕೂಡಾ ಪತ್ತೆ ಹಚ್ಚಲು ಸುಮಾರು 3 ತಿಂಗಳುಗಳ ಕಾಲ ಹಿಡಿಯುತ್ತದೆ. ವೈರಾಣುಗಳ ಪರೀಕ್ಷೆ ಆರಂಭದಲ್ಲೇ ಪತ್ತೆ ಹಚ್ಚಿದರೆ ಚಿಕಿತ್ಸೆ ಸುಲಭವಾಗಲಿದೆ.

ಎಚ್ ಐವಿ ಪಾಸಿಟಿವ್ ಎಂದಾದರೆ ಎರಡು ಪರ್ಪಲ್ ರೇಖೆಗಳು ಕಾಣಿಸಿಕೊಳ್ಳಲಿದೆ. ನಂತರ ಬೇಕಾದರೆ ಹೆಚ್ಚಿನ ರಕ್ತ ಪರೀಕ್ಷೆ ಮಾಡಿಸಿಕೊಂಡು ದೃಢಪಡಿಸಿಕೊಳ್ಳಬಹುದು.(ಪಿಟಿಐ)

English summary
The first HIV self-testing kit that allows people to get a result in less than half-an-hour at home has gone on sale in the U.K.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X