ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಗಿಂತ 4 ಪಾಯಿಂಟ್ ಮುಂದಿದ್ದಾರೆ ಹಿಲರಿ ಕ್ಲಿಂಟನ್

ರಿಯಲ್ ಎಸ್ಟೇಟ್ ವ್ಯವಹಾರದ, ಕೋಟ್ಯಧಿಪತಿ ಉದ್ಯಮಿ ಆ ನಂತರ ಹಿಲರಿಗೆ ನೀಡುತ್ತಿರುವ ಸ್ಪರ್ಧೆ ಕುತೂಹಲಿಗಳನ್ನು ಕುರ್ಚಿ ತುದಿಗೆ ಕೂರುವಂತೆ ಮಾಡಿದೆ. ಹಾಗೆ ನೋಡಿದರೆ ಡೊನಾಲ್ಡ್ ಟ್ರಂಪ್ ರಾಜಕೀಯ ಪ್ರವೇಶಿಸಿ ಬರೀ ಹದಿನೆಂಟು ತಿಂಗಳಷ್ಟೇ ಆಗಿದೆ.

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ವಾಷಿಂಗ್ಟನ್, ನವೆಂಬರ್ 7: ಇಡೀ ಜಗತ್ತು ಉಸಿರು ಬಿಗಿ ಹಿಡಿದು ನೋಡುತ್ತಿರುವ ದಿನಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ನವೆಂಬರ್ 8ರಂದು ಗೊತ್ತಾಗುತ್ತದೆ. ಅಧ್ಯಕ್ಷ ಗಾದಿಯು ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಗೋ ಅಥವಾ ರಿಪಬ್ಲಿಕನ್ ನ ಡೊನಾಲ್ಡ್ ಟ್ರಂಪ್ ಗೋ ಎಂಬುದು ಇತ್ಯರ್ಥ ಆಗಿಬಿಡುತ್ತದೆ.

ಫಲಿತಾಂಶಕ್ಕೆ ಒಂದು ದಿನ ಬಾಕಿಯಿರುವಂತೆ ಸಮೀಕ್ಷೆ ಪ್ರಕಾರ ಹಿಲರಿ ಕ್ಲಿಂಟನ್ ಅವರು ಡೊನಾಲ್ಡ್ ಟ್ರಂಪ್ ಗಿಂತ ನಾಲ್ಕು ಪಾಯಿಂಟ್ ನಿಂದ ಮುಂದಿದ್ದಾರೆ. ಜುಲೈನಲ್ಲಿ ಮೇಲಿಂದ ಮೇಲೆ ನಡೆದ ಸಮಾವೇಶದಲ್ಲಿ ಒಂದು ಪರ್ಸೆಂಟ್ ನಿಂದ ಹನ್ನೆರಡು ಪರ್ಸೆಂಟ್ ವರೆಗೆ ಮುನ್ನಡೆ ಕಾಯ್ದುಕೊಂಡಿದ್ದರು ಹಿಲರಿ ಕ್ಲಿಂಟನ್.[ಅಮೆರಿಕಾ ಅಧ್ಯಕ್ಷ ಚುನಾವಣೆಯಲ್ಲಿ ಯಾರಿಗೆ ಜಯ? ಮಂಗ ನುಡಿದ ಭವಿಷ್ಯ]

Trump-Hillary

ಆದರೆ, ರಿಯಲ್ ಎಸ್ಟೇಟ್ ವ್ಯವಹಾರದ, ಕೋಟ್ಯಧಿಪತಿ ಉದ್ಯಮಿ ಆ ನಂತರ ಆಕೆಗೆ ನೀಡುತ್ತಿರುವ ಸ್ಪರ್ಧೆ ಕುತೂಹಲಿಗಳನ್ನು ಕುರ್ಚಿ ತುದಿಗೆ ಕೂರುವಂತೆ ಮಾಡಿದೆ. ಹಾಗೆ ನೋಡಿದರೆ ಹಿಲರಿ ಅನುಭವಿ ರಾಜಕಾರಣಿ. ಡೊನಾಲ್ಡ್ ಟ್ರಂಪ್ ರಾಜಕೀಯ ಪ್ರವೇಶಿಸಿ ಬರೀ ಹದಿನೆಂಟು ತಿಂಗಳಷ್ಟೇ ಆಗಿದೆ.[ಸೀಕ್ರೇಟ್ ಸರ್ವರ್ ನಿಂದ ರಷ್ಯಾದೊಂದಿಗೆ ಟ್ರಂಪ್ ಸಂಪರ್ಕ]

ಸೋಮವಾರ ವಾಲ್ ಸ್ಟ್ರೀಟ್ ಜರ್ನಲ್/ಎನ್ ಬಿಸಿ ನ್ಯೂಸ್ ಬಿಡುಗಡೆ ಮಾಡಿರುವ ಸಮೀಕ್ಷೆ ಪ್ರಕಾರ ಶೇ 44ರಷ್ಟು ಮತದಾರರು 69 ವರ್ಷದ ಹಿಲರಿ ಕ್ಲಿಂಟನ್ ಅವರನ್ನು ಬೆಂಬಲಿಸಿದ್ದರೆ, ಶೇ 40ರಷ್ಟು ಬೆಂಬಲ ಡೊನಾಲ್ಡ್ ಟ್ರಂಪ್ ಗೆ ದೊರೆತಿದೆ. ಇನ್ನು ಆರರಷ್ಟು ಬೆಂಬಲ ಲಿಬರ್ಟಿ ಪಕ್ಷದ ಅಭ್ಯರ್ಥಿ ಗ್ಯಾರಿ ಜಾನ್ಸನ್ ಹಾಗೂ ಶೇ 2ರಷ್ತು ಬೆಂಬಲ ಗ್ರೀನ್ ಪಾರ್ಟಿಯ ಜಿಲ್ ಸ್ಟೇನ್ ಗೆ ದೊರೆತಿದೆ.[ಹಿಲರಿ ಗೆದ್ದರೆ ಪಾಕಿಸ್ತಾನಕ್ಕೆ ಕಾಶ್ಮೀರ ಕೊಡಿಸುತ್ತಾರಂತೆ!]

ಅಕ್ಟೋಬರ್ ಮಧ್ಯದಲ್ಲಿ ನಡೆಸಿದ ಸಮೀಕ್ಷೆಯಲ್ಲಿ 11 ಪಾಯಿಂಟ್ ನಿಂದ ಮುಂದಿದ್ದರು ಹಿಲರಿ. ಕಳೆದ ವಾರ ಎಫ್ ಬಿಐ ಆಕೆಯ ಇ ಮೇಲ್ ಹಗರಣದ ಮರು ತನಿಖೆ ಆರಂಭಿಸುವ ಬಗ್ಗೆ ಹೇಳಿಕೆ ನೀಡಿದ ಮೇಲೆ 7 ಪಾಯಿಂಟ್ ಕುಸಿಯಿತು. ಟ್ರಂಪ್ ಜನಪ್ರಿಯತೆ ಹೆಚ್ಚಾಯಿತು.[ಅಮೆರಿಕಾ ಅಧ್ಯಕ್ಷೀಯ ಚುನಾವಣೆ - ಯಾರು ಗೆಲ್ತಾರೆ?]

ನವೆಂಬರ್ 3ರಿಂದ 5ರವರೆಗೆ 1282 ಸಂಭವನೀಯ ಮತದಾರರನ್ನು ಮಾತನಾಡಿಸಿ, ಸಮೀಕ್ಷೆ ನಡೆಸಲಾಗಿತ್ತು. ಏನೇ ಆದರೂ ಶೇ 2.73ರಷ್ಟೇ ವ್ಯತ್ಯಾಸದಲ್ಲಿ ಆಗಬಹುದು ಎಂಬ ನಿರೀಕ್ಷೆಯಿದೆ.

English summary
America presidential election Democratic nominee Hillary Clinton leads her Republican rival Donald Trump by four percentage points, a latest national opinion poll said on Sunday, two days ahead of the crucial US general elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X