ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ : ಹಿಲರಿ vs ಟ್ರಂಪ್ ಚರ್ಚೆ ಮುಖ್ಯಾಂಶ

By Mahesh
|
Google Oneindia Kannada News

ನ್ಯೂಯಾರ್ಕ್, ಸೆ. 27: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸರಿ ಸುಮಾರು 6 ವಾರಕ್ಕೂ ಮುನ್ನ ಮೊದಲ ಬಾರಿಗೆ ಪ್ರಮುಖ ಸ್ಪರ್ಧಿಗಳಾದ ಹಿಲರಿ ಕ್ಲಿಂಟನ್ ಹಾಗೂ ಡೋನಾಲ್ಡ್ ಟ್ರಂಪ್ ನಡುವೆ ಮುಖಾಮುಖಿಯಾಗಿದೆ. ಸುಮಾರು 90 ನಿಮಿಷದ ಚರ್ಚೆಯನ್ನು 10 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ ದಾಖಲೆ ಸೃಷ್ಟಿಯಾಗಿದೆ.

ನ್ಯೂಯಾರ್ಕಿನ ಹಂಪ್ ಸ್ಟೀಡ್ ನ ಹಾಫ್ ಸ್ಟಾ ವಿವಿಯಲ್ಲಿ ನಡೆದ ಈ ಸಾರ್ವಜನಿಕ ಚರ್ಚಾಕೂಟವನ್ನು ಎಬಿಸಿ ನ್ಯೂಸ್ ನ ಲೆಸ್ಟರ್ ಹಾಲ್ಟ್ ನಡೆಸಿಕೊಟ್ಟರು.

Hillary Clinton, Donald Trump face to face for the first presidential debate

ಅಧ್ಯಕ್ಷೀಯ ಅಭ್ಯರ್ಥಿಗಳ ಈ ಮೊದಲ ಸಾರ್ವಜನಿಕ ಚರ್ಚೆಯನ್ನು ಅಮೆರಿಕದ ವಾಹಿನಿಗಳಲ್ಲಿ ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ 6.30ಕ್ಕೆ ನೇರ ಪ್ರಸಾರ ಮಾಡಿದ್ದವು. 1980ರಲ್ಲಿ ಜಿಮ್ಮಿ ಕಾರ್ಟರ್(ಡೆಮಾಕ್ರಾಟಿಕ್ ಅಭ್ಯರ್ಥಿ) ಹಾಗೂ ರೊನಾಲ್ಡ್ ರೇಗನ್ (ರಿಪಬಲಿಕನ್ ಅಭ್ಯರ್ಥಿ) ನಡುವಿನ ಚರ್ಚೆಯನ್ನು ಸುಮಾರು 8 ಕೋಟಿ ಅಮೆರಿಕನ್ನರು ವೀಕ್ಷಿಸಿದ್ದು ದಾಖಲೆಯಾಗಿತ್ತು.

68 ವರ್ಷ ವಯಸ್ಸಿನ ಹಿಲರಿ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮೊದಲ ಮಹಿಳಾ ಅಭ್ಯರ್ಥಿಯಾಗಿದ್ದು ಅವರ ಎತ್ತರ 5 ಅಡಿ 4 ಇಂಚು, ಪ್ರತಿಸ್ಪರ್ಧಿ ಟ್ರಂಪ್ 6 ಅಡಿ 2 ಇಂಚು ಎತ್ತರವಿದ್ದಾರೆ. ಇಬ್ಬರನ್ನು ವೇದಿಕೆಯಲ್ಲಿ ಒಂದೇ ಎತ್ತರದಲ್ಲಿ ಕಾಣುವಂತೆ ಮಾಡಲಾಗಿತ್ತು.

ಹಿಂದೂ ಸಮುದಾಯವನ್ನು ಹೊಗಳಿದ ಟ್ರಂಪ್: ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಗೆ ಗ್ರಾಸವಾಗುವ ಟ್ರಂಪ್ ಈ ಹಿಂದೆ ಭಾರತದ ಬಿಪಿಒ ವಿರುದ್ಧ ಕೂಡಾ ಕಿಡಿಕಾರಿದ್ದರು. ಆದರೆ, ಈಗ ಹಿಂದೂ ಸಮುದಾಯವನ್ನು ಹೊಗಳಿದ್ದಾರೆ.

ಹಿಂದೂ ಸಮುದಾಯವು ವಿಶ್ವದ ನಾಗರಿಕತೆಗೆ ಹಾಗೂ ಅಮೆರಿಕದ ಸಾಂಸ್ಕೃತಿಕ ಕ್ಷೇತ್ರಕ್ಕೆ ವಿಶೇಷವಾದ ಕೊಡುಗೆ ನೀಡಿದೆ ಎಂದಿದ್ದಾರೆ. ನ್ಯೂಜೆರ್ಸಿಯ ಪಿಎನ್‍ಸಿ ಆರ್ಟ್ ಸೆಂಟರ್ ನಲ್ಲಿ ನಡೆಯಲಿರುವ ರಿಪಬ್ಲಿಕನ್ ಹಿಂದೂ ಒಕ್ಕೂಟ ಸಭೆಯಲ್ಲಿ ಭಾಗವಹಿಸಲು ಎದುರು ನೋಡುತ್ತಿದ್ದೇನೆ ಎಂದು ಟ್ರಂಪ್ ವಿಡಿಯೋ ಮೆಸೇಜ್ ಮೂಲಕ ತಿಳಿಸಿದ್ದಾರೆ.

ಪೂರ್ವ ಸಮೀಕ್ಷೆಗಳ ವರದಿ: ಆನ್ ಲೈನ್ ಸಮೀಕ್ಷೆಯಲ್ಲಿ ಪಾಲ್ಗೊಂಡ ಮತದಾರರು ಟ್ರಂಪ್ ಹಾಗೂ ಹಿಲರಿ ನಡುವೆ ಆರಂಭದಲ್ಲಿ ಇದ್ದ ಅಂತರವನ್ನು ಕಡಿಮೆ ಮಾಡಿದ್ದಾರೆ. ಹಿಲರಿ ಪರ ಶೇ 41 ಮಂದಿ ಇದ್ದರೆ, ಟ್ರಂಪ್ ಪರ ಶೇ 40 ಮಂದಿ ಇದ್ದಾರೆ. ಹೀಗಾಗಿ ಭಾರಿ ಕುತೂಹಲ ಉಂಟಾಗಿದೆ.

English summary
Hillary Clinton and Donald Trump begin the first presidential debate of the 2016 general election at Hofstra University New York.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X