ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರ ಸುದ್ದಿ : ಜನಾರ್ದನ ರೆಡ್ಡಿಯಿಂದ, ಒಬಾಮವರೆಗೆ...

By Kiran B Hegde
|
Google Oneindia Kannada News

ಬೆಂಗಳೂರು, ಜ. 24 : ಕರ್ನಾಟಕದಲ್ಲಿ ಗಣಿ ದೊರೆ ಜನಾರ್ದನ ರೆಡ್ಡಿ ಜೈಲಿನಿಂದ ಹೊರಬಂದಿದ್ದು, ನವದೆಹಲಿಯಲ್ಲಿ ಗಣರಾಜ್ಯೋತ್ಸವಕ್ಕಾಗಿ ನಡೆಯುತ್ತಿರುವ ತಯಾರಿ ಕುರಿತು ಭಾರೀ ಸುದ್ದಿಯಾಗುತ್ತಿದೆ. ಆದರೆ, ಇದರ ನಡುವೆ ಸುದ್ದಿಯಾಗದ ಹಲವು ವಿಷಯಗಳು ಇವೆ.

ಅಂತಹ ಕುತೂಹಲ ಭರಿತ ಹಾಗೂ ಪ್ರಮುಖ ಸುದ್ದಿಗಳ ಕುರಿತು ಚಿತ್ರ ಸಹಿತ ವಿವರಣೆಯನ್ನು ಇಲ್ಲಿ ನೀಡಲಾಗಿದೆ.

ಶೌರ್ಯ ಪ್ರಶಸ್ತಿ ವಿಜೇತ ದೇಶದ ಹಲವು ಮಕ್ಕಳನ್ನು ಶುಕ್ರವಾರ ಸನ್ಮಾನಿಸಿದ ನರೇಂದ್ರ ಮೋದಿ ಅವರೊಂದಿಗೆ ತೆಗೆಸಿಕೊಂಡ ಫೋಟೊ ಕೂಡ ಇಲ್ಲಿದೆ.

ಶೂರ ಮಕ್ಕಳೊಂದಿಗೆ ಪ್ರಧಾನಿ

ಶೂರ ಮಕ್ಕಳೊಂದಿಗೆ ಪ್ರಧಾನಿ

ನವದೆಹಲಿಯಲ್ಲಿ 2014ನೇ ಸಾಲಿನ ಶೌರ್ಯ ಪ್ರಶಸ್ತಿ ವಿಜೇತ ಮಕ್ಕಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಫೋಟೊ ತೆಗೆಸಿಕೊಂಡರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಮನೇಕಾ ಗಾಂಧಿ.

ಬಿಡುಗಡೆಯ ಆನಂದ

ಬಿಡುಗಡೆಯ ಆನಂದ

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಮೂರು ವರ್ಷಗಳ ನಂತರ ಬಿಡುಗಡೆಯಾದ ಗಣಿ ದೊರೆ ಜನಾರ್ದನ ರೆಡ್ಡಿ ಅವರು ಜನರತ್ತೆ ಕೈ ಬೀಸಿದ್ದು ಹೀಗೆ.

ಅಮೆರಿಕ ಧ್ವಜ

ಅಮೆರಿಕ ಧ್ವಜ

ನವದೆಹಲಿಯ ಧ್ವಜಸ್ಥಂಭದ ಮೇಲೆ ಅಮೆರಿಕದ ಧ್ವಜ ಕಟ್ಟುತ್ತಿರುವ ಕಾರ್ಮಿಕ. ಪಕ್ಕದಲ್ಲಿಯೇ ಭಾರತದ ಧ್ವಜವನ್ನೂ ಕಟ್ಟಲಾಗಿದೆ.

ಅಬ್ದುಲ್ಲಾ ಶವ ಹೊತ್ತ ಅಭಿಮಾನಿಗಳು

ಅಬ್ದುಲ್ಲಾ ಶವ ಹೊತ್ತ ಅಭಿಮಾನಿಗಳು

ಸೌದಿ ಅರೇಬಿಯಾದ ದೊರೆಯಾಗಿ ಅಳಿದ್ದ ಕಿಂಗ್ ಅಬ್ದುಲ್ಲಾ ಅವರ ಶವವನ್ನು ರಿಯಾದ್‌ನ ಇಮಾಮ್ ತುರ್ಕಿ ಬಿನ್ ಅಬ್ದುಲ್ಲಾ ಮಸೀದಿಯಿಂದ ಹೊತ್ತು ತರುತ್ತಿರುವ ಅಭಿಮಾನಿಗಳು.

ಧಾರ್ಮಿಕ ಒಗ್ಗಟ್ಟು

ಧಾರ್ಮಿಕ ಒಗ್ಗಟ್ಟು

ಸೂರತ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಧರ್ಮಗಳ ಮುಖಂಡರು ಒಗ್ಗಟ್ಟು ಪ್ರದರ್ಶಿಸಿದ್ದು ಹೀಗೆ.

ಬಿಗಿ ಬಂದೋಬಸ್ತ್

ಬಿಗಿ ಬಂದೋಬಸ್ತ್

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ತಂಗಲಿರುವ ನವದೆಹಲಿಯ ಐಟಿಸಿ ಮೌರ್ಯ ಹೋಟೆಲ್ ಹೊರಭಾಗದಲ್ಲಿ ಪರಿಶೀಲನೆ ನಡೆಸುತ್ತಿರುವ ಬಾಂಬ್ ಪತ್ತೆ ದಳ.

ಮೇಕ್ ಇನ್ ಇಂಡಿಯಾ

ಮೇಕ್ ಇನ್ ಇಂಡಿಯಾ

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲಿರುವ ಮೇಕ್ ಇನ್ ಇಂಡಿಯಾ ಸಂಕೇತದ ಮಾದರಿ ಶುಕ್ರವಾರ ಅಭ್ಯಾಸ ನಡೆಸಿದಾಗ ಕಂಡುಬಂದಿದ್ದು ಹೀಗೆ.

English summary
Here are the many important news with pictures. From Janardhan Reddy to Barack Obama all are curious photos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X