ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹ್ಯಾಕರ್‌ಗಳಿಂದ 2 ವರ್ಷದಲ್ಲಿ 6,200 ಕೋಟಿ ರು. ದರೋಡೆ!

By Kiran B Hegde
|
Google Oneindia Kannada News

ನ್ಯೂಯಾರ್ಕ್, ಫೆ. 16: ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಹ್ಯಾಕರ್‌ಗಳು ಜಗತ್ತಿನಾದ್ಯಂತ ಎರಡು ವರ್ಷದಲ್ಲಿ ದರೋಡೆ ಮಾಡಿದ ಮೊತ್ತದ ಒಂದು ಬಿಲಿಯನ್ ಡಾಲರ್! ಅಂದರೆ ಸುಮಾರು 6,200 ಕೋಟಿ ರುಪಾಯಿ.

ಹೌದು, ಈ ಆತಂಕಕಾರಿ ಮಾಹಿತಿ ಬಹಿರಂಗಪಡಿಸಿರುವುದು ರಷ್ಯಾ ಮೂಲದ ಸೈಬರ್ ಸೆಕ್ಯುರಿಟಿ ಸಂಸ್ಥೆ Kaspersky Lab. ಕಂಪನಿಯ ವರದಿ ಪ್ರಕಾರ ಹ್ಯಾಕರ್‌ಗಳು 2013ರಿಂದ ಈಚೆಗೆ ಸುಮಾರು 30 ದೇಶಗಳ 100 ಬ್ಯಾಂಕ್‌ಗಳಲ್ಲಿ ಹ್ಯಾಕ್ ಮಾಡಿ ದರೋಡೆ ನಡೆಸಿದೆ.

hack

ಹ್ಯಾಕರ್‌ಗಳು ಮೊದಲು ಫಿಶಿಂಗ್ ಯೋಜನೆ ಹಾಗೂ ಇತರ ಮಾರ್ಗಗಳಿಂದ ಬ್ಯಾಂಕ್‌ಗಳ ಕಂಪ್ಯೂಟರ್ ಪ್ರವೇಶಿಸುತ್ತಾರೆ. ನಂತರ ಸುಮಾರು ಒಂದು ತಿಂಗಳವರೆಗೆ ಬ್ಯಾಂಕ್ ಜೊತೆ ವ್ಯವಹರಿಸುತ್ತಾರೆ. ಈ ಸಮಯದಲ್ಲಿ ಯಾವುದೇ ಕೈಚಳಕ ತೋರುವುದಿಲ್ಲ. ಆದರೆ, ಕಂಪ್ಯೂಟರ್‌ಗಳ ಸ್ಕ್ರೀನ್ ಶಾಟ್ ಹಾಗೂ ಕಂಪ್ಯೂಟರ್ ಉಪಯೋಗಿಸುವ ಉದ್ಯೋಗಿಯ ವಿಡಿಯೋ ಕೂಡ ಸಂಗ್ರಹಿಸುತ್ತಾರೆ.

ಬ್ಯಾಂಕ್‌ನ ವ್ಯವಹಾರ ಶೈಲಿಯನ್ನು ಸರಿಯಾಗಿ ಅರಿತುಕೊಂಡ ನಂತರ ತಮ್ಮ ಕೈಚಳಕ ಆರಂಭಿಸುತ್ತಾರೆ. ಸುಳ್ಳು ಖಾತೆಗಳನ್ನು ಸೃಷ್ಟಿಸಿ ಅದಕ್ಕೆ ಮತ್ತೊಬ್ಬರ ಖಾತೆಯಿಂದ ಹಣ ವರ್ಗಾಯಿಸುತ್ತಾರೆ.

ಸುಮಾರು 10 ಮಿಲಿಯನ್ ಡಾಲರ್‌ನಷ್ಟು ಹಣವನ್ನು ಕದ್ದ ನಂತರ ಹ್ಯಾಕರ್‌ಗಳು ಕೈಚಳಕ ನಿಲ್ಲಿಸಿ ಬೇರೊಂದು ಬ್ಯಾಂಕ್‌ಗೆ ತೆರಳುತ್ತಾರೆ ಎಂದು Kaspersky Lab ತನ್ನ ವರದಿಯಲ್ಲಿ ತಿಳಿಸಿದೆ. ಕಂಪನಿಯು ಈ ವರದಿಯನ್ನು ಮೆಕ್ಸಿಕೋದ ಕ್ಯಾನ್‌ಕನ್‌ನಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಮಂಡಿಸಿದೆ.

English summary
A hacking ring has stolen up to $1 billion from banks around the world. A cybersecurity firm Kaspersky Lab says in a report. The report is presented Monday at a security conference in Cancun, Mexico.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X