ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಗತ್ ಸಿಂಗ್ ಜನ್ಮಸ್ಥಳ ರಕ್ಷಿಸಿಡುತ್ತೇವೆ: ಪಾಕಿಸ್ತಾನ

By Srinath
|
Google Oneindia Kannada News

ಲಾಹೋರ್, ಫೆ.13- ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತು ಹುತಾತ್ಮರಾದವರು. ಅವರ ಜನ್ಮ ಸ್ಥಳವನ್ನು ರಕ್ಷಿಸಿಡುತ್ತೇವೆ ಎಂದು ಪಾಕಿಸ್ತಾನ ತಿಳಿಸಿದೆ.

ಬ್ರಿಟೀಷರು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರನ್ನು ಸುಖದೇವ್ ಮತ್ತು ರಾಜಗುರು ಅವರ ಜತೆಗೆ 87 ವರ್ಷದ ಹಿಂದೆ ಗಲ್ಲಿಗೇರಿಸಿದ್ದರು. ಲಾಹೋರ್ ಪಿತೂರಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ 1931ರ ಮಾರ್ಚ್ 23ರಂದು ನೇಣಿಗೇರಿಸಿದ್ದರು.

Freedom fighter Bhagat Singh birth place will be preserved Pakistan

ಭಗತ್ ಸಿಂಗ್ ಅವರು ಪಾಕಿಸ್ತಾನದ ಪಂಜಾಬಿನ ಜರನವಾಲಾ ತಾಲೂಕಿನಲ್ಲಿ 1907 ರಲ್ಲಿ ಜನಿಸಿದ್ದರು. ವರದಿಯ ಪ್ರಕಾರ ಬಂಗಾಯ್ ಗ್ರಾಮದಲ್ಲಿರುವ ಚಾಕ್ ನಂಬರ್ 105 ಜಿಬಿನಲ್ಲಿ ಭಗತ್ ಸಿಂಗ್ ಅವರ ಜನ್ಮಸ್ಥಳವಿದ್ದು, ಅದನ್ನು ಪಾರಂಪರಿಕ ಸ್ಥಳವಾಗಿ ಸಂರಕ್ಷಿಸುವುದಾಗಿ ಪಾಕಿಸ್ತಾನ ಹೇಳಿದೆ.

ಫೈಸಲಾಬಾದಿನ ಜಿಲ್ಲಾಡಳಿತ ಈ ಸಂಬಂಧ ನಿರ್ಣಯ ತೆಗೆದುಕೊಂಡಿದೆ. ಈ ಚಾರಿತ್ರಿಕ ಸ್ಥಳದ ಸಂಶೋಧನೆ ಮತ್ತು ಸಂರಕ್ಷಣೆಗಾಗಿ ಜಿಲ್ಲಾಡಳಿತವು ಲೈಲಪುರ ಪಾರಂಪರಿಕ ಫಂಡೇಶನ್ ಅನ್ನು ಸಹ ಸ್ಥಾಪಿಸಿದೆ. ಭಗತ್ ಸಿಂಗ್ ಜನ್ಮಸ್ಥಳದಲ್ಲಿ ಅವರ ಕುಟುಂಬಕ್ಕೆ ಸೇರಿದ ಕೆಲವು ವಸ್ತುಗಳು ಇನ್ನೂ ಅಲ್ಲಿವೆ.

ಭಗತ್ ಸಿಂಗ್ ಅವರ ತಾಯಿ ಬಳಸುತ್ತಿದ್ದ ನೂಲು ಸುತ್ತವ ಚರಕ ಇನ್ನೂ ಈ ಸ್ಥಳದಲ್ಲಿದೆ. ತಾಮ್ರದ ದೊಡ್ಡ ಪಾತ್ರೆ, 2 ಮರದ ಪೆಟ್ಟಿಗೆಗಳು ಮತ್ತು ಸ್ಟೀಲ್ ಪಾತ್ರೆ ಸಹ ಅಲ್ಲಿದೆ. ಪ್ರಸ್ತುತ, ಭಗತ್ ಸಿಂಗ್ ಮನೆಯು ವಕೀಲರಾದ ಮೊಹಮದ್ ಇಕ್ಬಾಲ್ ವಿರ್ಕ್ ಅವರ ಅಧೀನದಲ್ಲಿದೆ. ಮೊಹಮದ್ ಅವರ ಕುಟಂಬವೇ ಈ ವಸ್ತುಗಳನ್ನು ಇದುವರೆಗೂ ಸಂರಕ್ಷಿಸಿಟ್ಟಿರುವುದು.

ಪಾಕಿಸ್ತಾನವು ಭಗತ್ ಸಿಂಗ್ ಅವರ ಜನ್ಮಸ್ಥಳವನ್ನು ಸಂರಕ್ಷಿಸುವುದಷ್ಟೇ ಅಲ್ಲ, ಈ ಜಾಗದ ಸುತ್ತಮುತ್ತ ಇರುವ 45 ಚಾರಿತ್ರಿಕ ಕಟ್ಟಡಗಳನ್ನು ಸಹ ನವೀಕರಣಗೊಳಿಸಲು ಬದ್ಧತೆ ತೋರಿದೆ.

UNESCO ಜತೆಗೂಡಿ ಭಾರತವೂ ಸಹ ಈ ಸಂರಕ್ಷಣೆ ಕಾರ್ಯದಲ್ಲಿ ತೊಡಗಬೇಕು ಎಂದು ಸೋದರಳಿಯ ಜಗಮೋಹನ್ ಸಿಂಗ್ ಮನವಿ ಮಾಡಿದ್ದಾರೆ. ಜಗಮೋಹನ್ ಲೂಧಿಯಾನಾದಲ್ಲಿದ್ದಾರೆ. ಇಷ್ಟು ವರ್ಷಗಳಾದರೂ ಭಗತ್ ಸಿಂಗ್ ಜನ್ಮಸ್ಥಳವನ್ನು ಕಾಪಾಡಿಕೊಂಡು ಬಂದಿರುವ ವಕೀಲ ಮೊಹಮದ್ ಕುಟುಂಬವನ್ನು ಅಭಿನಂದಿಸಬೇಕು. ಇದು ಇಬ್ಬರಿಗೂ ಸೇರಿದ ಪರಂಪರೆ, ಹೋರಾಟ ಮತ್ತು ಚರಿತ್ರೆಯ ಪ್ರತೀಕವಾಗಿದೆ ಎಂದು ಜಗಮೋಹನ್ ಹೇಳಿದ್ದಾರೆ.

English summary
Freedom fighter Bhagat Singh birth place will be preserved Pakistan. The freedom fighter Bhagat Singh, who sacrificed his life for the independence of India, was born in 1907 in Jaranwala Tehsil, Punjab. According to a report, Pakistan is all set to preserve freedom fighter Bhagat Singh's birthplace at Chak No 105 GB in Bangay village as a heritage site. The decision has been taken by the Faisalabad district administration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X