ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಸೀನಿಯರ್ ಬುಷ್ ಮತ್ತೆ ಆಸ್ಪತ್ರೆಗೆ ದಾಖಲು

By Kiran B Hegde
|
Google Oneindia Kannada News

ಹೌಸ್ಟನ್ (ಅಮೆರಿಕ), ಡಿ. 24: ಅಮೆರಿಕದ ಮಾಜಿ ಅಧ್ಯಕ್ಷ ಎಚ್.ಡಬ್ಲ್ಯೂ. ಬುಷ್ ಅವರನ್ನು ಮತ್ತೆ ಹೌಸ್ಟನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಷ್ ಅವರು ಉಸಿರಾಟದ ತೊಂದರೆ ಎದುರಿಸುತ್ತಿದ್ದಾರೆಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.

ಪ್ರಸ್ತುತ 90ನೇ ವಸಂತದಲ್ಲಿರುವ ಬುಷ್ ಅವರನ್ನು ಎರಡು ವರ್ಷಗಳ ಹಿಂದೆ ಇದೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಮಾರು ಎರಡು ತಿಂಗಳ ಕಾಲ ಇಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. 2013ರ ಜನವರಿ ತಿಂಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಪಾರ್ಕಿನ್‌ಸನ್ಸ್ ಮಾದರಿಯ ರೋಗದಿಂದ ಬಳಲುತ್ತಿರುವ ಅವರು ತಮ್ಮೆರಡೂ ಕಾಲುಗಳ ನಿಯಂತ್ರಣ ಕಳೆದುಕೊಂಡಿದ್ದಾರೆ. ಸಂಚರಿಸಲು ಗಾಲಿ ಕುರ್ಚಿಯನ್ನು ಆಧರಿಸಿದ್ದಾರೆ. [ಒಬಾಮಾಗಾಗಿ ವ್ರತಭಂಗ ಮಾಡಲೊಪ್ಪದ ಮೋದಿ]

bush

ಪ್ರಸ್ತುತ ಹವಾಯಿ ದ್ವೀಪದಲ್ಲಿ ರಜಾ ದಿನಗಳನ್ನು ಆನಂದಿಸುತ್ತಿರುವ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಒಬಾಮಾ ಹಾಗೂ ಮಿಷೆಲ್ ಇಬ್ಬರೂ ಮಾಜಿ ಅಧ್ಯಕ್ಷ ಬುಷ್ ಅವರಿಗೆ ಶುಭ ಹಾರೈಕೆ ಕಳುಹಿಸಿದ್ದಾರೆ ಎಂದು ಶ್ವೇತ ಭವನದ ಅಧಿಕಾರಿಗಳು ತಿಳಿಸಿದ್ದಾರೆ.

ಯಾರು ಈ ಬುಷ್? : ಭಯೋತ್ಪಾದನೆ ವಿರುದ್ಧ ನಿರ್ಣಾಯಕ ಸಮರ ಸಾರಿದ ಜಾರ್ಜ್ ಡಬ್ಲ್ಯೂ. ಬುಷ್ ಜಗತ್ತಿನಲ್ಲಿ ಎಲ್ಲರಿಗೂ ಗೊತ್ತು. ಅವರ ತಂದೆಯೇ ಪ್ರಸ್ತುತ ಆಸ್ಪತ್ರೆಗೆ ದಾಖಲಾಗಿರುವ ಎಚ್.ಡಬ್ಲ್ಯೂ. ಬುಷ್. ಅಮೆರಿಕದಲ್ಲಿ ಸೀನಿಯರ್ ಬುಷ್ ಎಂದೇ ಜನಪ್ರಿಯರಾಗಿದ್ದಾರೆ. [ಅಮೆರಿಕದಲ್ಲಿ ಮೋದಿಯ ಆ ದಿನಗಳು]

ರೊನಾಲ್ಡ್ ರೇಗಾನ್ ಅವರ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದರು. ನಂತರ ಅಮೆರಿಕದ 41ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆದರೆ, ಅವರ ಎರಡನೇ ಅವಧಿಗಾಗಿ ನಡೆದ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಬಿಲ್ ಕ್ಲಿಂಟನ್ ಎದುರು ಸೋಲನುಭವಿಸಿದ್ದರು.

bush

ರಾಜಕೀಯಕ್ಕೆ ಬರುವ ಮೊದಲು ನೌಕಾ ಸೇನೆಯಲ್ಲಿದ್ದ ಎಚ್.ಡಬ್ಲ್ಯೂ. ಬುಷ್ ದ್ವಿತೀಯ ಜಾಗತಿಕ ಮಹಾಯುದ್ಧದಲ್ಲಿ ಹೋರಾಡಿದ ಅನುಭವ ಹೊಂದಿದ್ದಾರೆ. ಅಲ್ಲದೆ, ಅವರೊಬ್ಬ ಅತ್ಯುತ್ತಮ ಸ್ಕೈಡೈವರ್ ಕೂಡ ಹೌದು. [ಮೋದಿಗೆ ಅಮೆರಿಕದಲ್ಲಿ ಅದ್ದೂರಿ ಸ್ವಾಗತ]

ಚೀನಾದಲ್ಲಿ ಅಮೆರಿಕದ ರಾಯಭಾರಿಯಾಗಿ ಹಾಗೂ ವಿಶ್ವವಿಖ್ಯಾತ ಗೂಢಚಾರ ಸಂಸ್ಥೆ ಸಿಐಎ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಹೆಗ್ಗಳಿಕೆ ಹೊಂದಿದ್ದಾರೆ.

English summary
Former US President George H.W. Bush was admitted to a Houston hospital Tuesday evening after experiencing a shortness of breath. He is suffering from a form of Parkinson's disease. He can no longer use his legs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X