ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರಲ್ಲಿ ಬಾಂಬ್ ಸ್ಪೋಟ, ಗ್ರೀಸ್ ಮಾಜಿ ಪ್ರಧಾನಿಗೆ ಗಾಯ

ಗ್ರೀಸ್ ಮಾಜಿ ಪ್ರಧಾನಿಯ ಕಾರಿನಲ್ಲೇ ಬಾಂಬ್ ಸ್ಪೋಟಿಸಿದೆ. ಘಟನೆಯಲ್ಲಿ ಮಾಜಿ ಪ್ರಧಾನಿ ಹಾಗೂ ರಾಷ್ಟ್ರೀಯ ಬ್ಯಾಂಕ್ ನ ಮಾಜಿ ಅಧ್ಯಕ್ಷರೂ ಆಗಿರುವ ಲೂಕಾಸ್ ಪಪಡೆಮೋಸ್ ಗಾಯಗೊಂಡಿದ್ದಾರೆ. ಅವರನ್ನು ಅಥೆನ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.

By Sachhidananda Acharya
|
Google Oneindia Kannada News

ಅಥೆನ್ಸ್, ಮೇ 25: ಗ್ರೀಸ್ ಮಾಜಿ ಪ್ರಧಾನಿಯ ಕಾರಿನಲ್ಲೇ ಬಾಂಬ್ ಸ್ಪೋಟಿಸಿದೆ. ಘಟನೆಯಲ್ಲಿ ಮಾಜಿ ಪ್ರಧಾನಿ ಹಾಗೂ ರಾಷ್ಟ್ರೀಯ ಬ್ಯಾಂಕ್ ನ ಮಾಜಿ ಅಧ್ಯಕ್ಷರೂ ಆಗಿರುವ ಲೂಕಾಸ್ ಪಪಡೆಮೋಸ್ ಗಾಯಗೊಂಡಿದ್ದಾರೆ. ಅವರನ್ನು ಅಥೆನ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.

Former Greek PM Lucas Papademos injured in explosion

ಮಾಜಿ ಪ್ರಧಾನಿಯ ಕಾರಿನಲ್ಲಿ ಸ್ಪೋಟಕ ಸಾಧನವನ್ನು ಇಡಲಾಗಿತ್ತು. ಕೇಂದ್ರ ಅಥೆನ್ಸ್ ನ ರಸ್ತೆಯಲ್ಲಿ ತೆರಳುವಾಗ ಈ ಬಾಂಬ್ ಸ್ಪೋಟಗೊಂಡಿದ್ದರಿಂದ ಅವರಿಗೂ ಅವರ ಕಾರು ಚಾಲಕನಿಗೂ ಗಾಯಗಳಾಗಿವೆ. ಇಬ್ಬರನ್ನೂ ಕೇಂದ್ರ ಅಥೆನ್ಸ್ ನ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪಪಡಮೋಸ್ 2011ರ ನವೆಂಬರಿನಲ್ಲಿ ಕೆಲ ತಿಂಗಳ ಅವಧಿಗೆ ಗ್ರೀಕ್ ದೇಶದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದರು. ಅವರು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಅಧ್ಯಕ್ಷರಾಗಿಯೂ ಒಂದಷ್ಟು ಅವಧಿಗೆ ನೇಮಕವಾಗಿದ್ದರು.

ಭೀಕರ ಮ್ಯಾಂಚೆಸ್ಟರ್ ಬಾಂಬ್ ಸ್ಪೋಟ ಹಾಗೂ ಜಕಾರ್ತ ಸ್ಪೋಟಗಳ ನಂತರ ಇದೀಗ ಗ್ರೀಸ್ ಮಾಜಿ ಪ್ರಧಾನಿಯ ಕಾರಿನಲ್ಲೇ ಬಾಂಬ್ ಸ್ಪೋಟಿಸಿದೆ.

English summary
Former Greek Prime Minister Lucas Papademos wounded after an explosive device went off inside his car in Athens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X