ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ ಪ್ರಯಾಣಿಕರನ್ನು ನಡುಗಿಸಿದ 'ಜಿಹಾದಿ ಲಂಡನ್' ವೈಫೈ!

ವಿಮಾನದೊಳಗಿನ ವೈಫೈ ಸೌಲಭ್ಯ ಬಳಸಲು ಮೊಬೈಲ್ ನಲ್ಲಿ ಹುಡುಕಾಟ ನಡೆಸಿದ ಪ್ರಯಾಣಿಕನಿಗೆ ಕಂಡಿದ್ದು ಜಿಹಾದಿ ಲಂಡನ್ ಎಂಬ ವೈಫೈ ಹೆಸರು. ತಕ್ಷಣ ವಿಮಾನ ನಿಲ್ದಾಣದ ಸಿಬ್ಬಂದಿಗೆ ಈ ಬಗ್ಗೆ ಹೇಳಲಾಗಿದ್ದರಿಂದ ವಿಮಾನದ ಪ್ರಯಾಣಿಕರೆಲ್ಲರನ್ನೂ ಕೆಳಗೆ ಇಳಿಸ

|
Google Oneindia Kannada News

ಕ್ಯಾನ್ಕನ್ (ಮೆಕ್ಸಿಕೋ), ಮೇ 26: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಬೇಕಿದ್ದ ವಿಮಾನವೊಂದರ ತನ್ನ ಆಂತರಿಕ ವೈಫೈ ನಲ್ಲಿ ಜಿಹಾದಿ ಲಂಡನ್ ಎಂಬ ಹೆಸರಿನ ವೈಫೈ ಸೌಲಭ್ಯವನ್ನು ಕಂಡ ಕೂಡಲೇ ಬೆದರಿದ ವಿಮಾನ ನಿಲ್ದಾಣದ ಸಿಬ್ಬಂದಿ ತಕ್ಷಣವೇ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಿದ ಘಟನೆ ಕ್ಯಾನ್ ಕನ್ ನಲ್ಲಿ ನಡೆದಿದೆ.

ಇಲ್ಲಿನ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೈರುತ್ಯ ದಿಕ್ಕಿನಲ್ಲಿರುವ ಗ್ಯಾಟ್ವಿಕ್ ಗೆ ಪ್ರಯಾಣ ಬೆಳೆಸಲಿದ್ದ ಥಾಮ್ಸನ್ ಕಂಪನಿಯು ಇನ್ನೇನು ಕೆಲವೇ ನಿಮಿಷಗಳಲ್ಲಿ ಹೊರಡಲಿತ್ತು.

Flight grounded after anxious passengers spot "Jihadi London" WiFi hotspot leaving passengers stranded

ಅಷ್ಟರಲ್ಲಿ, ವಿಮಾನ ಹತ್ತಿ ಕುಳಿತಿದ್ದ ಮೆಕ್ಸಿಕೋದ ಪ್ರಯಾಣಿಕನೊಬ್ಬ ತನ್ನ ಮೊಬೈಲ್ ಹೊರತೆಗೆದು ವಿಮಾನದೊಳಗಿದ್ದ ವೈಫೈ ಸೌಲಭ್ಯ ಉಪಯೋಗಿಸಲು ಸರ್ಚ್ ನೀಡಿದ್ದಾನೆ. ಆಗ, ಮೊಬೈಲ್ ತೆರೆಯ ಮೇಲೆ ಮೂಡಿಬಂದ ಆ ಕ್ಷಣಕ್ಕೆ ಲಭ್ಯವಿದ್ದ ವೈಫೈ ಸೌಲಭ್ಯಗಳ ಪಟ್ಟಿಯಲ್ಲಿ ಜಿಹಾದಿ ಲಂಡನ್ ಎಂಬದೊಂದು ಹೆಸರು ಕಾಣಿಸಿಕೊಂಡಿದೆ.

ತಕ್ಷಣ ಭಯಭೀತನಾದ ಆತ, ಇದನ್ನು ವಿಮಾನ ಸಿಬ್ಬಂದಿಯ ಗಮನಕ್ಕೆ ತಂದಿದ್ದಾನೆ. ಅವರೂ ಭಯಭೀತರಾಗಿ, ತಕ್ಷಣವೇ ಏರ್ ಕಂಟ್ರೋಲಿಂಗ್ ಅಧಿಕಾರಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣವೇ ಆ ಅಧಿಕಾರಿ, ಪ್ರಯಾಣಿಕರೆಲ್ಲರನ್ನೂ ವಿಮಾನದಿಂದ ಕೆಳಗಿಳಿಸಲು ಆದೇಶಿಸಿದ್ದಾನೆ.

ಇದರ ಪರಿಣಾಮವಾಗಿ, ಎಲ್ಲಾ ಪ್ರಯಾಣಿಕರನ್ನೂ ಕೆಳಗಿಳಿಸಲಾಗಿದೆ. ಆನಂತರ, ವಿಮಾನವನ್ನು ಸಂಪೂರ್ಣ ತಪಾಸಣೆಗೊಳಪಡಿಸಲಾಗಿದೆ. ಪ್ರಯಾಣಿಕರಿಗೆ ಬೇರೊಂದು ವಿಮಾನ ಸೌಲಭ್ಯ ನೀಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಮಾನ ನಿಲ್ದಾಣದ ಅಧಿಕಾರಿಗಳು, ಜಿಹಾದಿ ಲಂಡನ್ ವೈಫೈ ಹೆಸರಿನ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

English summary
Holidaymakers were left stranded after their flight was evacuated because of a mobile hotspot named "Jihadi London". Hundreds of travellers were due to board a Thomson flight from the Mexican tourist resort of Cancun to Gatwick Airport on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X