ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆತ್ಮಹತ್ಯೆ ತಡೆಗೆ ಫೇಸ್ ಬುಕ್ ನಿಂದ ಹೊಸ ತಂತ್ರಜ್ಞಾನ

ವಿಶ್ವದಾದ್ಯಂತ ಫೇಸ್ ಬುಕ್ ನಲ್ಲಿ ಪ್ರತಿ 40 ಸೆಕೆಂಡಿಗೆ ಒಬ್ಬರಂತೆ ಆತ್ಮಹತ್ಯೆ ವೀಡಿಯೊ ಅಪ್ಲೋಡ್ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಫೇಸ್ ಬುಕ್ ಇದನ್ನು ತಡೆಯಲು ಮುಂದಾಗಿದೆ.

|
Google Oneindia Kannada News

ನವದೆಹಲಿ, ಮಾರ್ಚ್ 2: ಇತ್ತೀಚೆಗೆ, ಆತ್ಮಹತ್ಯೆಯನ್ನೂ ಲೈವ್ ವೀಡಿಯೋ ಮೂಲಕ ಖ್ಯಾತ ಜಾಲತಾಣವಾದ ಫೇಸ್ ಬುಕ್ ನಲ್ಲಿ ಹಾಕುವ ಕೆಟ್ಟ ಸಂಪ್ರದಾಯವನ್ನು ಇಂದಿನ ಯುವ ಸಮೂಹ ಪಾಲಿಸುತ್ತಿರುವುದನ್ನು ಗಂಭೀರವಾಗಿ ತೆಗೆದುಕೊಂಡಿರುವ ಫೇಸ್ ಬುಕ್ ಸಂಸ್ಥೆಯು ಇದನ್ನು ತಡೆಗಟ್ಟಲು ನೆರವಾಗುವ ಹೊಸ ತಂತ್ರಜ್ಞಾನವನ್ನು ಶೀಘ್ರದಲ್ಲೇ ಪರಿಚಯಿಸಲು ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚಿನ ವರ್ಷಗಳಲ್ಲಿ ಫೇಸ್ ಬುಕ್ ನಲ್ಲಿ ಆತ್ಮಹತ್ಯೆಯ ವೀಡಿಯೊ ಅಪ್ ಲೋಡ್ ಮಾಡುವ ಪರಿಪಾಠ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಇದನ್ನು ಖುದ್ದು ಅಧ್ಯಯನ ಮಾಡಿರುವ ಫೇಸ್ ಬುಕ್ ಸಂಸ್ಥೆ, ಪ್ರತಿ 40 ಸೆಕೆಂಡಿಗೆ ಒಬ್ಬರು ಆತ್ಮಹತ್ಯೆ ವೀಡಿಯೊ ಅಪ್ಲೋಡ್ ಮಾಡಿರುವುದಾಗಿ ಹೇಳಿದೆ. ಅಲ್ಲದೆ, ಹೀಗೆ ಆತ್ಮಹತ್ಯೆಗೆ ಗುರಿಯಾಗುತ್ತಿರುವವರು ಸುಮಾರು 15ರಿಂದ 29 ವರ್ಷದೊಳಗಿನ ವ್ಯಕ್ತಿಗಳೆಂದೂ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.[ಜಿಯೋ ಧಮಾಕಾ..! 'ಫ್ರೈಮ್ ಆಫರ್' ಮೂಲಕ ಹೊಸ ಕೊಡುಗೆ ಘೋಷಣೆ]

Facebook integrates AI-based tool for suicide prevention

ಹಾಗಾಗಿ, ಇಂಥದ್ದೊಂದು ಕೆಟ್ಟ ಸಂಸ್ಕೃತಿಯನ್ನು ತಡೆಯಲು ಸಂಸ್ಥೆಯು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ, ಹಲವಾರು ಮನೋಶಾಸ್ತ್ರಜ್ಞರ ಸಲಹೆಗಳನ್ನು ಪಡೆದಿರುವ ಸಂಸ್ಥೆ, ಹಾಗೂ ಸೇವ್ ಡಾಟ್ ಆರ್ಗ್ ಎಂಬ ಸಂಸ್ಥೆಯೊಡನೆ ಸೇರಿ ಫೇಸ್ ಬುಕ್, ಈ ಹೊಸತೊಂದು ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಟೂಲ್ ಅನ್ನು ಪರಿಚಯಿಸಲಿದೆ. ಇದನ್ನು ಎಲ್ಲಾ ಫೇಸ್ ಬುಕ್ ಆ್ಯಪ್ ಗಳಲ್ಲೂ ತೊಡಗಿಸಲಾಗುತ್ತದೆ.

ಈ ಕೃತಕ ಬುದ್ಧಿಮತ್ತೆಯು, ಎರಡು ಬಗೆಯಲ್ಲಿ ಕೆಲಸ ಮಾಡಬಲ್ಲದು. ಇವುಗಳಲ್ಲೊಂದು ಬಗೆಯಲ್ಲಿ, ಫೇಸ್ ಬುಕ್ ನಲ್ಲಿ ಲೈವ್ ವೀಡಿಯೋ ಮಾಡುವ ವ್ಯಕ್ತಿಯ ಚಲನ ವಲನಗಳನ್ನು ಗಮನಿಸುವ ಮೂಲಕ ತಕ್ಷಣವೇ ಫೇಸ್ ಬುಕ್ ಸಂಸ್ಥೆಯಡಿ ಕಾರ್ಯ ನಿರ್ವಹಿಸುವ ಆತ್ಮಹತ್ಯಾ ತಡೆ ದಳಕ್ಕೆ ಸಂದೇಶ ರವಾನಿಸುತ್ತದೆ.[ಕೊಳಕು ನೋಟು ಸ್ವೀಕರಿಸದ ಬ್ಯಾಂಕುಗಳಿಗೆ ದಂಡ: ಆರ್ ಬಿಐ]

ಮತ್ತೊಂದು ಬಗೆಯಲ್ಲಿ, ಯಾವುದೇ ಒಬ್ಬ ವ್ಯಕ್ತಿಯ ಆತ್ಮಹತ್ಯೆಯ ವೀಡಿಯೋವನ್ನು ಲೈವ್ ಆಗಿ ನೋಡುವ ಅವಕಾಶ ಸಿಗುವ ಆತನ ಸ್ನೇಹಿತರು ತಕ್ಷಣವೇ ಜಾಗೃತರಾಗಿ ತಮ್ಮ ಸಹವರ್ತಿಗಳಿಗೆ ಅಥವಾ ಆ ವ್ಯಕ್ಯಿಯ ಹತ್ತಿರದ ಸಂಬಂಧಿಗಳಿಗೆ, ಸ್ನೇಹಿತರಿಗೆ ಎಚ್ಚರಿಕೆ ಸಂದೇಶ ಕಳುಹಿಸಬಹುದು. ಇದಕ್ಕೆ ಸೂಕ್ತವಾದ ಆಪ್ಷನ್ ಗಳನ್ನು ಲೈವ್ ವೀಡಿಯೋ ನೋಡುಗರಿಗೆ ಫೇಸ್ ಬುಕ್ ನ ಕೃತಕ ಬುದ್ಧಿಮತ್ತೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

English summary
Renowned social media site Face book has announced that it will be launching a new kind of Artificial Intelligent tool via its app, which will help to prevent the on going bad culture of telecasting live suicide videos using facebook by youths worldwide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X