ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್ ಬುಕ್ ಸ್ನೇಹ ಕೇವಲ ಹುಸಿ ಸ್ನೇಹವಂತೆ!

By Vanitha
|
Google Oneindia Kannada News

ಲಂಡನ್,ಜನವರಿ, 23: ನಿಮ್ಮ ಫೇಸ್ ಬುಕ್ ಖಾತೆಗೆ ಬರುವ ಎಲ್ಲಾ ಫ್ರೆಂಡ್ಸ್ ರಿಕ್ವೆಸ್ಟ್ ನ್ನು ಸ್ವೀಕರಿಸಿ ಸ್ನೇಹಿತರನ್ನಾಗಿ ಮಾಡಿಕೊಳ್ಳುವ ಮುನ್ನ ಕೊಂಚ ಯೋಚಿಸಿ. ಫೇಸ್ ಬುಕ್ ನಲ್ಲಿ ಸ್ನೇಹಿತರು ಹೆಚ್ಚಾದಂತೆ ಬೀಗುವ ಅಗತ್ಯವಿಲ್ಲ ಎಂದು ಅಧ್ಯಯನವೊಂದು ಎಚ್ಚರಿಸಿದೆ.

ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಪ್ರಾಧ್ಯಾಪಕರಾದ ರಾಬಿನ್ ದನಬಾರ್ ಫೇಸ್ ಬುಕ್ ಸ್ನೇಹಿತರು ಕಷ್ಟದ ಸಮಯಕ್ಕೆ ಸಹಾಯಕ್ಕೆ ಬರುವರೇ ಎಂಬ ವಿಷಯದ ಮೇಲೆ ಕೈಗೊಂಡ ಅಧ್ಯಯನದಿಂದ ಈ ನೈಜ ಸಂಗತಿ ಹೊರಬಿದ್ದಿದೆ.[ಫೇಸ್ಬುಕ್, ಟ್ವಿಟ್ಟರ್ನಿಂದ ಡೈವೋರ್ಸ್ ತಗೊಳೋದು ಹೇಗೆ?]

facebook friends are almost entirely fake according to a new study

ಫೇಸ್ ಬುಕ್ ಸ್ನೇಹಿತರು ಕೇವಲ ಸ್ನೇಹಿತರೇ ಹೊರತು ಅವರು ಕಷ್ಟಗಳಿಗೆ ಕಿವಿಗೊಡುವವರಲ್ಲ. ಏಕೆಂದರೆ ಫೇಸ್ ಬುಕ್ ಸ್ನೇಹ ಕೇವಲ ಹುಸಿ ಸ್ನೇಹ. ಇದರಲ್ಲಿ ಮೋಸಹೋಗುವುದೇ ಜಾಸ್ತಿ ಎಂದು ರಾಬಿನ್ ದನಬಾರ್ ಅವರ ಅಧ್ಯಯನದಿಂದ ದೃಢಪಟ್ಟಿದೆ.

ಸಾಮಾನ್ಯವಾಗಿ ನಿಮ್ಮ ಫೇಸ್ ಬುಕ್ ನಲ್ಲಿ ನೂರು ಮಂದಿ ಸ್ನೇಹಿತರಿದ್ದರೆ ಅದರಲ್ಲಿ ಕೇವಲ 14 ಸ್ನೇಹಿತರು ಮಾತ್ರ ನಿಮ್ಮ ಸ್ನೇಹಕ್ಕೆ ಕಿವಿಗೊಡುತ್ತಾರೆ. ಒಬ್ಬ ವ್ಯಕ್ತಿಯ ಸ್ನೇಹಿತರಲ್ಲಿ ಶೇ.27 ಮಾತ್ರ ಉತ್ತಮ ಸ್ನೇಹಿತರು ಎಂದು ತಿಳಿದು ಬಂದಿದೆ.[ಯುವತಿಯರೇ ಫೇಸ್ಬುಕ್ ನಲ್ಲಿ ಚಾಟ್ ಮಾಡೋ ಮುನ್ನ ಎಚ್ಚರ!]

ಫೇಸ್ ಬುಕ್ ನಲ್ಲಿ ಸ್ನೇಹಿತರನ್ನು ಮಾಡಿಕೊಳ್ಳುವ ಮುನ್ನ ಎರಡು ಬಾರಿ ಯೋಚಿಸಿ. ಈ ಸ್ನೇಹಿತರ ನಡುವೆ ಅವಿನಾಭಾವ ಸಂಬಂಧವಿರುವುದಿಲ್ಲ. ಕೇವಲ ನಾವು ಮಾಡುವ ಪೋಸ್ಟ್ ಗಳಿಗೆ ಲೈಕ್ ಮಾಡಿದಾಕ್ಷಣ ಅವರು ನಮ್ಮ ಆತ್ಮೀಯರಾಗುವುದಿಲ್ಲ ಎಂದು ಕಿವಿಮಾತು ಹೇಳಿದೆ.

English summary
Most of your Facebook friends don't care about you and probably wouldn't even sympathise with your problems, according to a new study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X