ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗಳಿಗೆ ಬರೆದ ಪತ್ರದಲ್ಲಿ ಫೇಸ್‌ಬುಕ್ ಜನಕ ಹೇಳಿದ್ದೇನು?

|
Google Oneindia Kannada News

ಸ್ಯಾನ್ ಫ್ರಾನ್ಸಿಸ್ಕೊ, ಡಿಸೆಂಬರ್. 02: ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ತಂದೆಯಾಗಿದ್ದಾರೆ. ಇದೇ ಖುಷಿಯಲ್ಲಿ ತಮ್ಮ ಒಡೆತನದ ಫೇಸ್ ಬುಕ್ ನ ಶೇ. 99 ಷೇರುಗಳನ್ನು ದಾನಮಾಡುವುದಾಗಿ ಜುಕರ್ ಬರ್ಗ್ ಹೇಳಿದ್ದಾರೆ. ಅಲ್ಲದೇ ಮಗಳಿಗೆ ಒಂದು ಸುದೀರ್ಘ ಪತ್ರವನ್ನು ಬರೆದಿದ್ದಾರೆ.

ಹೆಂಡತಿ ಗರ್ಭಿಣಿಯಾಗಿದ್ದಾಗ ಬರ್ಗ್ ಹೆಣ್ಣು ಮಗುವಾಗಲಿ ಎಂದೇ ಬಯಸಿದ್ದರು. ಈಗ ಅವರ ಅಭಿಲಾಷೆ ಪೂರೈಸಿದೆ. ಹೆಂಡತಿ ಪ್ರಿಸಿಲ್ಲಾ ಚಾನ್ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.[ಹೊಸ ಜೀವದ ನಿರೀಕ್ಷೆಯಲ್ಲಿ ನಾನು, ಅವಳು ಮತ್ತು ಬೀಸ್ಟ್]

facebook

ಫೇಸ್ ಬುಕ್ ಸಂಸ್ಥಾಪಕ ಮನೆಯ ಹೊಸ ಜೀವದ ಕುರಿತಾಗಿ ಉದ್ದದ ಪತ್ರವೊಂದನ್ನು ಬರೆದಿದ್ದಾರೆ. ನನ್ನ ಮಗಳಿಗೆ ಒಂದು ಪತ್ರ ಎಂಬ ಶೀರ್ಷಿಕೆ ನೀಡಿದ್ದಾರೆ. ಪತ್ರದ ಪೂರ್ಣ ಪಾಠ ನೋಡಿ..

ಪ್ರೀತಿಯ ಮ್ಯಾಕ್ಸ್,,,
ನಿನ್ನ ಜನ್ಮದ ಸಂತಸ ವ್ಯಕ್ತಪಡಿಸಲು ನನ್ನ ಮತ್ತು ನಿನ್ನ ಅಮ್ಮನ ಬಳಿ ಶಬ್ದಗಳೇ ಇಲ್ಲ. ನಮ್ಮ ಭವಿಷ್ಯ ಇಂದು ನಿನ್ನ ಕೈಯಲ್ಲಿದೆ. ನಾವು ಇಂದು ಕಳೆಯುತ್ತಿರುವ ದಿನಗಳಿಗಿಂತೂ ಉತ್ತಮವಾದ್ದನ್ನು ನಿನಗೆ ಕಲ್ಪಿಸಿಕೊಡುತ್ತೇವೆ.

ಪ್ರಪಂಚ ಬದಲಾಗಿದೆ, ಬದಲಾಗುತ್ತಿದೆ. ಸಂವಹನ ವ್ಯಾಪಕವಾಗಿದೆ. ಬಡತನ ಮಾಯವಾಗುತ್ತಿದೆ. ಜ್ಞಾನ ಬೆಳೆಯುತ್ತಿದೆ. ಬಾಂಧವ್ಯ ಬೆಸೆಯುತ್ತಿದೆ. ಇಂಥ ಪ್ರಪಂಚದಲ್ಲಿ ಮತ್ತಷ್ಟು ಉತ್ತಮ ದಿನಗಳು ನಿನಗೆ ಸಿಗಲಿದೆ.

ಜುಕರ್ ಬರ್ಗ್ ಫೇಸ್ ಬುಕ್ ಪೇಜ್
ಪ್ರಪಂಚಕ್ಕೆ ಬಂದ ಪ್ರತಿಯೊಂದು ಜೀವಿಯೂ ಬದುಕುವ ಹಕ್ಕನ್ನು ಪಡೆದುಕೊಂಡೇ ಬರುತ್ತದೆ. ಇಂದಿನ ಪೀಳಿಗೆ ಎದುರಿಸುತ್ತಿರುವ ಸಮಸ್ಯೆಗಳನ್ನು ಯಾವ ಬಗೆಯಲ್ಲಿ ಎದುರಿಸಬೇಕು ಎಂಬ ಪಾಠವನ್ನು ನಿನಗೆ ಹೇಳಿ ಕೊಡುತ್ತೇನೆ.

ನಿನ್ನ ಆರೋಗ್ಯ ಎಂದೆಂದೂ ಕೆಡದಂತೆ ನೋಡಿಕೊಳ್ಳುತ್ತೇನೆ. ಅನೇಕ ಜನ ತಮ್ಮ ಜೀವನದ ಅರ್ಧ ಭಾಗವನ್ನು ಆರೋಗ್ಯ ಸರಿಮಾಡಿಕೊಳ್ಳುವುದರಲ್ಲಿಯೇ ಕಳೆದುಬಿಡುತ್ತಾರೆ. ನಿನಗೆ ಅಂಥ ಸ್ಥಿತಿ ಬರಲು ಬಿಡುವುದಿಲ್ಲ.

ಮಾನವ ಸಂಶೋಧನೆ ನಡೆಸಿ ಔಷಧ ಕಂಡು ಹಿಡಿದಿರಬಹುದು. ಆದರೆ ದಿನೇ ದಿನೇ ಹೊಸ ರೋಗಗಳು ಹುಟ್ಟಿಕೊಳ್ಳುತ್ತವೆ. ಆದರೆ ನಾವಿಂದು ಮುಂದಿನ 100 ವರ್ಷ ಗಮನದಲ್ಲಿ ಇಟ್ಟುಕೊಂಡು ಮಾನವ ಕುಲವನ್ನು ಕಾಪಾಡಬೇಕಿದೆ.

ಪತ್ರದಲ್ಲಿ ಜುಕರ್ ಬರ್ಗ್ ನೂರಾರು ಸಂಗತಿಗಳನ್ನು ಉಲ್ಲೇಖ ಮಾಡಿದ್ದಾರೆ. ಆರೋಗ್ಯ, ವಾಸ್ತವ, ಪರಿಸರ, ಸಮಾಜ, ಬೆಳವಣಿಗೆ, ಬದಲಾವಣೆ, ಸಂಶೋಧನೆ, ಅರ್ಥ ವ್ಯವಸ್ಥೆ, ಯುವಜನತೆ ಮತ್ತು ಅವರ ಚಿಂತನೆ ಇನ್ನು ಹಲವಾರು ವಿಚಾರಗಳನ್ನು ಇಟ್ಟುಕೊಂಡು ಮಗಳಿಗೆ ಹೊಸ ಜೀವನ ಕಲ್ಪಿಸಿಕೊಡುವುದಾಗಿ ಅಭಯ ನೀಡಿದ್ದಾರೆ.

ಪತ್ರದ ಪೂರ್ಣ ಪಾಠ

English summary
Facebook Inc. co-founder and chief executive officer Mark Zuckerberg said on Tuesday he and his wife would give 99 percent of their Facebook shares to charitable purposes. On his Facebook page, Zuckerberg posted "A letter to his new born daughter". The full Text of letter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X