ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳ, ಭಾರತ ಭೂಕಂಪ ಪೀಡಿತರಿಗೆ ಸಹಾಯವಾಣಿ

By Mahesh
|
Google Oneindia Kannada News

ನವದೆಹಲಿ, ಏ.26: ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 1800ಕ್ಕೂ ಅಧಿಕ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ನೇಪಾಳ ಹಾಗೂ ಭಾರತ ಸರ್ಕಾರದ ವತಿಯಿಂದ ಸಹಾಯವಾಣಿ ಆರಂಭಿಸಲಾಗಿದೆ.

ಶನಿವಾರ ರಿಕ್ಚರ್ ಮಾಪಕದಲ್ಲಿ 7.9 ತೀವ್ರತೆಯ ಕಂಪನವನ್ನು ಕಂಡಿದ್ದ ನೇಪಾಳದ ರಾಜಧಾನಿ ಕಾಂತಿಪುರ(ಕಠ್ಮಂಡು) ತನ್ನ ಕಾಂತಿ ಕಳೆದುಕೊಂಡಿದೆ. [80 ವರ್ಷಕ್ಕೊಮ್ಮೆ ನೇಪಾಳದಲ್ಲಿ ಭೂಕಂಪ?]

ಭಾನುವಾರ ಮುಂಜಾನೆ ಲಮ್ ಜುಂಗ್ ಪ್ರದೇಶ ಸೇರಿದಂತೆ ಹಲವೆಡೆ ಮತ್ತೆ ನಾಲ್ಕು ಬಾರಿ ಕಂಪನ ಉಂಟಾಗಿದೆ. ರಿಕ್ಚರ್ ಮಾಪಕದಲ್ಲಿ 6.6ರಷ್ಟಿದ್ದ ಕಂಪನಕ್ಕಿಂತ ಕಂಪನದ ನಂತರದ ಪರಿಣಾಮ ಜನತೆಯನ್ನು ಬೆಚ್ಚಿ ಬೀಳಿಸುತ್ತಿದೆ. ಇನ್ನೂ ಮೂರ್ನಾಲ್ಕು ದಿನ ನೇಪಾಳದ ಹಲವೆಡೆ ಭೂಮಿ ಕಂಪಿಸುವ ಸೂಚನೆ ಸಿಕ್ಕಿದೆ. [ಚಿತ್ರಸುದ್ದಿ : ಏಕೋ ಈ ಕೋಪ ಶಂಕರ, ಶಿವಶಂಕರ]

Helpline/Emergency numbers for Nepal earthquake

ಅಪಾರ ಸಾವು ನೋವು: ಭೂಕಂಪದಿಂದ ಸಾವನ್ನಪ್ಪಿದವರ ಸಂಖ್ಯೆ 1800 ದಾಟುತ್ತಿದೆ. ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.ಕಠ್ಮಂಡುವಿನ ಮನೆಗಳು ಶೇ 80ರಷ್ಟು ಹಾನಿಗೊಂಡಿವೆ. [ಚಿತ್ರಗಳಲ್ಲಿ : ನೇಪಾಳ ಭೂಕಂಪ]

ಆಪರೇಷನ್ ಮೈತ್ರಿ ಹೆಸರಿನಲ್ಲಿ ಭಾರತ ತನ್ನ ನೆರವಿನ ಹಸ್ತ ಚಾಚಿದೆ. ಮಿಗ್ ವಿಮಾನಗಳು, ಹೆಲಿಕಾಪ್ಟರ್ ಗಳು ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನಕ್ಕೆ ತೆರಳಿ ಸಂತ್ರಸ್ತರನ್ನು ಕರೆತರುತ್ತಿದೆ. ಸುಮಾರು 547 ಮಂದಿ ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ತಲುಪಿದ್ದಾರೆ,

ಭೂಕಂಪ ಪೀಡಿತರಿಗೆ ಸಹಾಯವಾಣಿ ಇಲ್ಲಿದೆ
* ನೇಪಾಳದಲ್ಲಿ ಭಾರತೀಯ ರಾಯಭಾರಿ ಕಚೇರಿ : +977 9581107021, +977 9851135141
* 24X7 ಕಂಟ್ರೋಲ್ ರೂಮ್ : +91 11 2301 2113, +91 11 2301 4104 and +91 11 2301 7905.

ಆಪರೇಷನ್ ಮೈತ್ರಿ ಹೆಸರಿನಲ್ಲಿ ಕಾರ್ಯಾಚಾರಣೆ

ಆಪರೇಷನ್ ಮೈತ್ರಿ ಹೆಸರಿನಲ್ಲಿ ಕಾರ್ಯಾಚಾರಣೆ

ಭಾರತ ಆಪರೇಷನ್ ಮೈತ್ರಿ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಆಹಾರ, ಅಗತ್ಯ ವಸ್ತು ಪೂರೈಕೆ, ವೈದ್ಯಕೀಯ ನೆರವು, ನಾಗರಿಕರ ರಕ್ಷಣೆ, ಸಂತ್ರಸ್ತರಿಗೆ ಪರಿಹಾರ ಸೇರಿದಂತೆ ಎಲ್ಲಾ ರೀತಿಯ ನೆರವನ್ನು ನೇಪಾಳಕ್ಕೆ ನೀಡುತ್ತಿದೆ.

ನಿಮ್ಮ ಸಮಸ್ಯೆಗಳನ್ನು ಇ ಮೇಲ್ ಮೂಲಕ ತಿಳಿಸಿರಿ

ನಿಮ್ಮ ಸಮಸ್ಯೆಗಳನ್ನು ಇ ಮೇಲ್ ಮೂಲಕ ತಿಳಿಸಿರಿ ಎಂದು ವಿದೇಶಾಂಗ ಸಚಿವಾಲಯ ಪ್ರಕಟಿಸಿದೆ. ಶನಿವಾರ ಕಠ್ಮಂಡುವಿನಲ್ಲಿ ಜಾಮ್ ಆಗಿದ್ದ ನೆಟ್ವರ್ಕ್ ಭಾನುವಾರ ಸ್ವಲ್ಪಮಟ್ಟಿಗೆ ಚಾಲನೆಯಲ್ಲಿದೆ.

ರಾಯಭಾರಿ ಕಚೇರಿಯಿಂದ ಸತತ ಮಾಹಿತಿ

ವಿದೇಶಾಂಗ ಸಚಿವಾಲಯ ಹಾಗೂ ರಾಯಭಾರಿ ಕಚೇರಿಯಿಂದ ಸತತ ಮಾಹಿತಿ.

24ಗಂಟೆ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಮ್

24ಗಂಟೆ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್

ಭಾರತೀಯ ರಾಯಭಾರಿ ಕಚೇರಿ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್.

ಪಶ್ಚಿಮ ಬಂಗಾಲ ರಾಜ್ಯದ ಸಹಾಯವಾಣಿ

ಪಶ್ಚಿಮ ಬಂಗಾಲ ರಾಜ್ಯದ ಸಹಾಯವಾಣಿಯನ್ನು ಪ್ರಕಟಿಸಿದ್ದು, ಭೂಕಂಪ ಪೀಡಿತ ರಾಜ್ಯಗಳು ಹೆಚ್ಚುವರಿ ಸಹಾಯವಾಣಿ ನೀಡುತ್ತಿವೆ.

ಆಂಧ್ರಪ್ರದೇಶ, ತೆಲಂಗಾಣದ ಸಹಾಯವಾಣಿ

ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ಪ್ರತ್ಯೇಕ ಸಹಾಯವಾಣಿ

ಗುಜರಾತ್, ಮಹಾರಾಷ್ಟ್ರ ರಾಜ್ಯದವರಿಗೆ

ಗುಜರಾತ್, ಮಹಾರಾಷ್ಟ್ರ ರಾಜ್ಯದವರಿಗೆ ಇರುವ ಸಹಾಯವಾಣಿ ಇಲ್ಲಿದೆ

English summary
Nepal has been hit by an earthquake of 7.9 Richter scale. Huge loss of life and property has been reported. Over 150 people are reported to be dead. Here are the helpline numbers for those who have their relatives in Nepal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X