ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2011ರ ಹತ್ಯಾಕಾಂಡ: ಈಜಿಪ್ಟ್ ಮಾಜಿ ಅಧ್ಯಕ್ಷ ಹೋಸ್ನಿ ಆರೋಪ ಮುಕ್ತ

ಆರು ವರ್ಷಗಳ ಹಿಂದೆ ಹೋಸ್ನಿ ಪದಚ್ಯುತಿಗಾಗಿ ಆಗ್ರಹಿಸಿ ದೇಶಾದ್ಯಂತ ನಡೆದಿದ್ದ 18 ದಿನಗಳ ಪ್ರತಿಭಟನಾ ರ್ಯಾಲಿಯ ವೇಳೆ ನಡೆದ ಹಿಂಸಾಚಾರದಲ್ಲಿ ಸುಮಾರು 200ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು.

|
Google Oneindia Kannada News

ಕೈರೋ, ಮಾರ್ಚ್ 3: ಆರು ವರ್ಷಗಳ ಹಿಂದಿನ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಈಜಿಪ್ಟ್ ನ ಮಾಜಿ ಅಧ್ಯಕ್ಷ ಹೋಸ್ನಿ ಮುಬಾರಕ್ ಅವರನ್ನು ಕೋರ್ಟ್ ಆಫ್ ಕಸೇಷನ್ (ಆ ದೇಶದ ಸರ್ವೋಚ್ಛ ನ್ಯಾಯಾಲಯ) ಆರೋಪ ಮುಕ್ತಗೊಳಿಸಿ ಬಿಡುಗಡೆ ಮಾಡುವಂತೆ ಆದೇಶಿಸಿದೆ.

2011ರಲ್ಲಿ ತಮ್ಮ ಸರ್ಕಾರದ ವಿರುದ್ಧ ದಂಗೆಯೆದ್ದು ತಮ್ಮ ಪದಚ್ಯುತಿಗೆ ಆಗ್ರಹಿಸಿ ಈಜಿಪ್ಟ್ ನ ಎಲ್ಲೆಲ್ಲೂ ಸುಮಾರು 18 ದಿನಗಳ ಕಾಲ ಪ್ರತಿಭಟನೆ ನಡೆದಿದ್ದವು. ಆಗ, ಪ್ರತಿಭಟನೆಯಲ್ಲಿ ನಿರತರಾಗಿದ್ದ ಸಾವಿರಾರು ಜನರ ಮೇಲೆ ನಿರ್ದಯವಾಗಿ ದಾಳಿ ನಡೆಸಲಾಗಿತ್ತು.

Egypt's Hosni Mubarak acquitted over 2011 protester deaths

ಫೆಬ್ರವರಿ 11ರಂದು ನಡೆದಿದ್ದ ಇಂಥ ದಾಳಿಯಲ್ಲಿ ಸುಮಾರು 239 ಜನರು ಹತ್ಯೆಯಾಗಿದ್ದರು. ಕೊನೆಗೂ ಜನಾಂದೋಲನಕ್ಕೆ ಮಣಿದಿದ್ದ ಹೋಸ್ನಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು. ಆದರೆ, 239 ಜನರ ಸಾವಿಗೆ ಕಾರಣರಾದ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು.

ಈ ಪ್ರಕರಣ ವಿಚಾರಣೆ ನಡೆಸುತ್ತಿದ್ದ ಕೆಳ ಹಂತದ ನ್ಯಾಯಾಲಯವು 2012ರಲ್ಲಿ ತೀರ್ಪು ನೀಡಿ ಹೋಸ್ನಿಯವರನ್ನು ದೋಷಿ ಎಂದು ತೀರ್ಮಾನಿಸಿತ್ತಲ್ಲದೆ, ಅವರಿಗೆ ಜೀವಾವಧಿ ಶಿಕ್ಷೆಯನ್ನೂ ವಿಧಿಸಿತ್ತು. ಆದರೆ, ಆ ತೀರ್ಪಿನ ವಿರುದ್ಧ ಹೋಸ್ನಿ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದರು. ಹಾಗಾಗಿ, ಸರ್ವೋಚ್ಛ ನ್ಯಾಯಾಲಯವು 2014ರಲ್ಲಿ ಈ ಪ್ರಕರಣದ ಮರು ವಿಚಾರಣೆ ನಡೆಸಲು ಮುಂದಾಯಿತು.

ಗುರುವಾರ (ಮಾರ್ಚ್ 3ರಂದು), ಈ ಪ್ರಕರಣದ ತೀರ್ಪು ನೀಡಿರುವ ಸರ್ವೋಚ್ಛ ನ್ಯಾಯಾಲಯವು 88 ವರ್ಷ ವಯಸ್ಸಿನ ಹೋಸ್ನಿಯವರನ್ನು ಆರೋಪ ಮುಕ್ತಗೊಳಿಸಿದೆ.

English summary
Egypt's former president Hosni Mubarak has been acquitted in case of conspiring in the killing of more than 200 people during the protest against him in 2011. This judgement came on thursday (March 3, 2017) by the Supreme Court of Egypt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X