ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಬೋಲಾ ರೋಗ ಗುಣವಾದರೂ 'ಸೆಕ್ಸ್' ಮಾಡುವಾಗ ಎಚ್ಚರ!

By Mahesh
|
Google Oneindia Kannada News

ವಾಷಿಂಗ್ಟನ್, ಮೇ.4: ಜಗತ್ತಿನ ಮಾರಕ ವೈರಾಣು ಎಬೋಲಾಕ್ಕೆ ತುತ್ತಾಗಿ ಚಿಕಿತ್ಸೆ ಪಡೆದು ಗುಣಮುಖರಾದವರೂ ಆತಂಕಪಡುವ ಸುದ್ದಿ ಬಂದಿದೆ. ಎಬೋಲಾ ರೋಗದಿಂದ ಗುಣಮುಖರಾದವರು 'ಸೆಕ್ಸ್' ಮಾಡುವ ಮುನ್ನ ಎಚ್ಚರವಹಿಸಿ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಎಬೋಲಾದಿಂದ ಗುಣಮುಖರಾದರೂ ವ್ಯಕ್ತಿಯ ವೀರ್ಯಾಣುವಿನಲ್ಲಿ ವೈರಾಣು ಇನ್ನೂ ಜೀವಂತ ಇರುತ್ತದೆ. ಸಂಭೋಗ ಕ್ರಿಯೆಯಲ್ಲಿ ತೊಡಗುವ ಮುನ್ನ ಕಾಂಡೋಮ್ ಬಳಸದಿದ್ದರೆ ಈ ವೈರಾಣುವಿನಿಂದ ನಿಮ್ಮ ಸಂಗಾತಿಗೆ ಸೋಂಕು ತಗುಲುತ್ತದೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.

ಸದ್ಯಕ್ಕೆ ಸಂಶೋಧನೆಯಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಎಬೋಲಾ ವೈರಾಣು ವೀರ್ಯಾಣುವಿನಲ್ಲಿ ಸುಮಾರು 3 ತಿಂಗಳುಗಳ ಕಾಲ ಜೀವಂತ ಇರುತ್ತದೆ. ಈ ಸಂದರ್ಭದಲ್ಲಿ ಸೇಫ್ ಸೆಕ್ಸ್ ವಿಧಾನ ಅನುಸರಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

Ebola survivors can transmit virus through Intercourse

ಪಶ್ಚಿಮ ಆಫ್ರಿಕಾದ ವ್ಯಕ್ತಿಯೊಬ್ಬ ಎಬೋಲಾ ರೋಗದಿಂದ ಮುಕ್ತನಾಗಿದ್ದ ಆದರೆ, ಐದು ತಿಂಗಳ ಬಳಿಕ ಆತ ಕಾಂಡೋಮ್ ಬಳಸದೆ ಸೆಕ್ಸ್ ಮಾಡಿದ ಕಾರಣ ಸೋಂಕು ಹರಡಿರುವುದು ಪತ್ತೆಯಾಗಿದೆ.

ಸೆಪ್ಟೆಂಬರ್ 2014ರಲ್ಲಿ ಎಬೋಲಾ ರೋಗದ ಲಕ್ಷಣಗಳು 46 ವರ್ಷದ ವ್ಯಕ್ತಿಗೆ ಕಾಣಿಸಿಕೊಂಡಿತ್ತು. ಕಳೆದ ಮಾರ್ಚ್ ತಿಂಗಳಿನಲ್ಲಿ ಅನಾರೋಗ್ಯ ಪೀಡಿತನಾಗಿದ್ದ. ಈತನೊಡನೆ ದೈಹಿಕ ಸಂಪರ್ಕ ಸಾಧಿಸಿದ್ದ 44 ವರ್ಷದ ಲಿಬೇರಿಯನ್ ಮಹಿಳೆಗೆ ಸೋಂಕು ಹರಡಿರುವುದು ಪತ್ತೆಯಾಗಿದೆ. ಇದೇ ಸಮಯದಲ್ಲಿ ಮತ್ತೊಬ್ಬ ಮಹಿಳೆ ಜೊತೆ ಕೂಡಾ ಈತ ಹಾಸಿಗೆ ಹಂಚಿಕೊಂಡಿದ್ದ. ಅದರೆ, ಆಕೆಗೆ ವೈರಾಣು ನೆಗಟಿವ್ ಎಂದು ವರದಿ ಬಂದಿದೆ.

ಒಟ್ಟಾರೆ, ಸೇಫ್ ಸೆಕ್ಸ್ ವಿಧಾನ ಬಳಸದಿದ್ದರೆ ಎಬೋಲಾ ವೈರಾಣು ಹರಡುವ ಸಾಧ್ಯತೆ ಇದೆ ಎನ್ನುವ ವಿಜ್ಞಾನಿಗಳು ಇನ್ನೂ ಈ ಸಂಗತಿಯನ್ನು ದೃಢಪಡಿಸಿಲ್ಲ. ಇದು ಕೂಡಾ ರೋಗ ಹರಡುವ ವಿಧಾನಗಳಲ್ಲಿ ಒಂದು ಎಂದು ಹೇಳಿದ್ದಾರೆ ಅಷ್ಟೆ. ಕೆಲ ಕಾಲ ಸುಮ್ಮನಿದ್ದ ಎಬೋಲಾ ವೈರಾಣು ಆರ್ಭಟ ಈ ರೀತಿ ಕೂಡಾ ಹರಡಬಹುದು ಎಂಬುದು ಆಂತಕಕಾರಿಯಂತೂ ಹೌದು.(ಎಎನ್ ಐ)

English summary
The Ebola virus can remain in semen for longer than previously thought, suggesting men who survive the disease should always use a condom during sexual intercourse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X