ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಡುಗಿದ ಹಿಂದೂಕುಷ್ ಪರ್ವತ, ಜಮ್ಮು ಕಾಶ್ಮೀರದಲ್ಲೂ ಭೂಕಂಪ

|
Google Oneindia Kannada News

ನವದೆಹಲಿ, ನವೆಂಬರ್. 23: ಸರಿಯಾಗಿ ಒಂದು ತಿಂಗಳ ನಂತರ ಹಿಂದೂಕುಷ್ ಪರ್ವತ ಭಾಗದಲ್ಲಿ ಭೂಮಿ ಕಂಪಿಸಿದೆ. ಪಾಕಿಸ್ತಾನ ಮತ್ತು ಅಪಘಾನಿಸ್ತಾನದ ಗಡಿ ಪ್ರದೇಶ ಹಿಂದೂಕುಷ್ ಪರ್ವತದಲ್ಲಿ ಭಾನುವಾರ ತಡರಾತ್ರಿ ಭೂಕಂಪನವಾಗಿದೆ.

ರಾಜಧಾನಿ ನವದೆಹಲಿ ಮತ್ತು ಜಮ್ಮು ಕಾಶ್ಮೀರದ ಭಾಗದಲ್ಲಿಯೂ ಭೂಮಿ ನಡುಗಿದೆ. ರಿಕ್ಟರ್ ಮಾಪಕದಲ್ಲಿ 6 ಕಂಪನ ದಾಖಲಾಗಿದ್ದು ಸಾವು-ನೋವಿನ ವರದಿಯಾಗಿಲ್ಲ.[ಪಾಕಿಸ್ತಾನದಲ್ಲಿ ಭಾರೀ ಭೂಕಂಪ, ಉತ್ತರ ಭಾರತ ಗಡಗಡ]

Earthquake in Afghanistan, tremors hit North India

ಅಕ್ಟೋಬರ್ 26 ರಂದು ಹಿಂದೂಕುಷ್ ಭಾಗದಲ್ಲಿ ಭೂಮಿ ಕಂಪಿಸಿತ್ತು. ಪಾಕಿಸ್ತಾನದ ಲಾಹೋರ್ ಸೇರಿದಂತೆ ಹಲವೆಡೆ ಭೂಕಂಪನವಾಗಿದ್ದು ಉತ್ತರ ಭಾರತದ ರಾಜ್ಯಗಳ ಮೇಲೆಯೂ ಪರಿಣಾಮ ಉಂಟುಮಾಡಿದೆ. ಅಪಘಾನಿಸ್ತಾನ ಮತ್ತು ತಜಕಿಸ್ತಾನದ ಗಡಿ ಭಾಗದಲ್ಲಿ ಭೂಕಂಪನದ ಕೇಂದ್ರ ದಾಖಲಾಗಿದೆ.[ಬೆಂಗಳೂರು ಭೂಕಂಪದ ಆತಂಕದಿಂದ ಮುಕ್ತವಲ್ಲ!]

ಹಿಂದೂಕುಷ್ ಪರ್ವತ ಎಲ್ಲಿದೆ? ಪಾಕಿಸ್ತಾನ ಮತ್ತು ಅಪಘಾನಿಸ್ತಾನದ ಗಡಿ ಪ್ರದೇಶದಲ್ಲಿ ಹಿಂದೂಕುಷ್ ಪರ್ವತವಿದೆ. ಅಪಘಾನಿಸ್ತಾದ ವ್ಯಾಪ್ತಿಗೆ ಸೇರುವ ಪರ್ವತ ಶ್ರೇಣಿಯಲ್ಲಿ ಆಗಾಗ ಭೂಮಿ ಕಂಪಿಸುತ್ತಲೇ ಇರುತ್ತದೆ. ಆದರೆ ಈ ಸಾರಿ ನಡುಗಿರುವ ಭೂಮಿ ಆತಂಕ ಹೆಚ್ಚಿಸಿದೆ.

English summary
A powerful earthquake measuring 6 on the Richter scale, with epicentre in Hindu Kush region of Afghanistan, struck parts of North India late on Sunday, Nov 22. According to the National Seismological Department, Ministry of Earth Sciences, the earthquake had its epicentre in Hindu Kush region of Afghanistan and measured 6 on the Richter scale.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X