ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ವರ್ಷದ ಹಸುಳೆ ಆಯ್ಲನ್ ಕುರ್ದಿ Rest In Peace

By Mahesh
|
Google Oneindia Kannada News

ಡಮಾಸ್ಕಸ್, ಸೆ. 04: ಟರ್ಕಿ ದೇಶದ ಸಮುದ್ರ ತೀರದಲ್ಲಿ ಬುಧವಾರ ಪತ್ತೆಯಾಗಿದ್ದ ಮೂರು ವರ್ಷದ ಹಸುಳೆಯ ಅಂತಿಮ ಸಂಸ್ಕಾರ ಶುಕ್ರವಾರ ನೆರವೇರಿಸಲಾಗಿದೆ. ಇಡೀ ವಿಶ್ವದ ಗಮನ ಸೆಳೆದ ಈ ಹಸುಳೆಯ ಶವದ ಚಿತ್ರ ಜಾಗತಿಕವಾಗಿ ಆಕ್ರೋಶ, ಆಘಾತ, ವಿಷಾದ, ನೋವು, ಸಂತಾಪವನ್ನು ತರಿಸಿತ್ತು.

ಸಿರಿಯಾದ ಆಂತರಿಕ ಯುದ್ಧದಿಂದ ಭಯಗೊಂಡು ವಲಸೆ ಹೊರಟ ಕುಟುಂಬಕ್ಕೆ ಸೇರಿದ್ದ ಮೂರು ವರ್ಷದ ಮಗು ಆಯ್ಲನ್ ಕುರ್ದಿ ಕಳೆದ ಮೂರು ದಿನಗಳಿಂದ ಇಡೀ ವಿಶ್ವ ಗಮನ ಸೆಳೆದಿದ್ದ. ವಲಸೆ ಹೋಗುವ ಸಂದರ್ಭದಲ್ಲಿ ಆಯ್ಲನ್ ಇದ್ದ ದೋಣಿ ಸಮುದ್ರದಲ್ಲಿ ಮುಳುಗಡೆಯಾಗಿತ್ತು. ಈ ದುರ್ಘಟನೆಯಲ್ಲಿ ಮಗುವಿನ ತಾಯಿ ರೆಹಾನ್ ಹಾಗೂ ಐದು ವರ್ಷದ ಸಹೋದರ ಗಾಲಿಬ್ ಎಂಬವರು ಕೂಡ ಮೃತಪಟ್ಟಿದ್ದರು.

ಆಂತರಿಕ ಯುದ್ಧಗ್ರಸ್ತ ಸಿರಿಯದಿಂದ ವಲಸೆ ಹೊರಟಿದ್ದ ಕುಟುಂಬವೊಂದಕ್ಕೆ ಈ ಮಗು ಸೇರಿದೆ. ಈ ಹಸುಳೆಯನ್ನು ಆಯ್ಲನ್ ಕುರ್ದಿ ಎಂದು ಗುರುತಿಸಲಾಗಿದೆ. ಈ ಕುಟುಂಬ ಪ್ರಯಾಣಿಸುತ್ತಿದ್ದ ದೋಣಿ ಸಮುದ್ರದಲ್ಲಿ ಮುಳುಗಿದ್ದು, ಮಗುವಿನ ತಾಯಿ ರೆಹಾನ್ ಹಾಗೂ ಐದು ವರ್ಷದ ಸಹೋದರ ಗಾಲಿಬ್ ಎಂಬವರು ಕೂಡ ಮೃತಪಟ್ಟಿದ್ದರು.

Drowned Syrian toddler laid to rest,

ಟರ್ಕಿಯ ಪ್ರವಾಸಿ ಪಟ್ಟಣ ಬೊರ್ಡಮ್ ಸಮೀಪದ ಮುಗ್ಲ ಪ್ರಾಂತ್ಯದ ಸಮುದ್ರ ತೀರವೊಂದರಲ್ಲಿ ಬುಧವಾರ ಬೋರಲು ಬಿದ್ದ ಸ್ಥಿತಿಯಲ್ಲಿ ಆಯ್ಲನ್ ಶವ ಪತ್ತೆಯಾಗಿತ್ತು. ಕೆಂಬಣ್ಣದ ಟೀ-ಶರ್ಟ್ ಮತ್ತು ನೀಲಿ ಚಡ್ಡಿಯನ್ನುಧರಿಸಿದ್ದ ಮಗುವಿನ ಶವದ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ವಿಶ್ವದ ಹಲವು ದೇಶಗಳ ದಿನಪತ್ರಿಕೆಗಳ ಮುಖಪುಟದಲ್ಲಿ ಅಯ್ಲನ್ ಕಾಣಿಸಿಕೊಂಡಿದ್ದ. ಹಲವರ ಕಣ್ಣು ಒದ್ದೆ ಮಾಡಿದ್ದ.

ಗ್ರೀಸ್‌ನ ದ್ವೀಪ ಕೊಸ್‌ಗೆ ತಲುಪುವ ಪ್ರಯತ್ನದಲ್ಲಿ ಆಯ್ಲನ್ ಸೇರಿದಂತೆ ಐವರು ಮಕ್ಕಳು ಹಾಗೂ ಒಟ್ಟು 12 ಮಂದಿ ಸಿರಿಯ ವಲಸಿಗರು ಬುಧವಾರ ಮೃತಪಟ್ಟಿದ್ದಾರೆ ಎಂದು ಬಿಬಿಸಿ ವರದಿ ಮಾಡಿತ್ತು. ಎರಡು ದೋಣಿಗಳಲ್ಲಿದ್ದ 23 ಜನರ ಪೈಕಿ ಕೇವಲ ಒಂಬತ್ತು ಮಂದಿ ಮಾತ್ರ ಪ್ರಾಣಾಪಾಯದಿಂದ ಪಾರಾಗಿದ್ದರು.

ಮಗುವನ್ನು ಕಳೆದುಕೊಂಡು ಬದುಕಿ ಉಳಿದವರ ಪೈಕಿ ಆಯ್ಲನ್‌ನ ತಂದೆ ಅಬ್ದುಲ್ಲಾ ಕುರ್ದಿ ನನ್ನ ಕೈಯಿಂದ ಅಯ್ಲನ್ ಯಾವಾಗ ಜಾರಿ ನೀರು ಪಾಲಾದನೋ ನನಗೆ ತಿಳಿಯದಾಯಿತು ಎಂದು ಕಣ್ಣೀರಿಡುತ್ತಾರೆ.

ಆಯ್ಲನ್ ಮತ್ತು ಆತನ ಕುಟುಂಬ ಸದಸ್ಯರು ಐಸಿಸ್ ಉಗ್ರಗಾಮಿಗಳ ದಾಳಿಯಿಂದ ತಪ್ಪಿಸಿಕೊಂಡು ಸಿರಿಯದ ಕೊಬಾನೆ ಪಟ್ಟಣದಿಂದ ಟರ್ಕಿಗೆ ಪರಾರಿಯಾಗಿದ್ದರು. ಕೆನಡಾದಲ್ಲಿ ರಾಜಕೀಯ ಆಶ್ರಯ ಕೋರಿದ್ದ ಈ ಕುಟುಂಬ, ಗ್ರೀಸ್‌ಗೆ ಪ್ರಯಾಣ ಕೈಗೊಳ್ಳಲು ಪ್ರಯತ್ನಿಸಿತ್ತು.

English summary
A Syrian toddler Aylan Kurdi whose lifeless body was found on a Turkish beach was laid to rest on Friday along with his brother and mother in their hometown of Kobane.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X