ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್ ಮುನ್ನಡೆ

By Prithviraj
|
Google Oneindia Kannada News

ವಾಷಿಂಗ್ಟನ್, ನವೆಂಬರ್, 2: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಪ್ರಥಮ ಬಾರಿಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರಿಗಿಂತ ಶೇ.1ರಷ್ಟು ಮುನ್ನಡೆ ಕಾಯ್ದುಕೊಂಡಿದ್ದಾರೆ.

ಚುನಾವಣೆಗೆ ಕೇವಲ ಒಂದು ವಾರ ಇರುವ ಬೆನ್ನಲ್ಲೇ ನಡೆದ ಸಮೀಕ್ಷೆಯಲ್ಲಿ ಟ್ರಂಪ್ ಅವರು ಮುನ್ನಡೆ ಕಾಯ್ದುಕೊಂಡಿರುವುದು ಹೊಸ ಚರ್ಚೆಗೆ ಎಡೆಮಾಡಿಕೊಟ್ಟಿದೆ.[ಚುನಾವಣೆ ರದ್ದು ಮಾಡಿ, ನಾನೇ ಅಧ್ಯಕ್ಷ ಎಂದು ಘೋಷಿಸಿ: ಟ್ರಂಪ್]

Donald Trump leads Clinton by one point: Poll

ಹಿಲರಿ ಅವರಿಗಿಂತ ಮುನ್ನಡೆ ಸಾಧಿಸುವ ಸಲುವಾಗಿ ಟ್ರಂಪ್ ಅವರು ಚುನಾವಣಾ ಪ್ರಚಾರದಲ್ಲಿ ಅತ್ಯಂತ ತೀವ್ರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಕಳೆದ ಎರಡು ವಾರಗಳಲ್ಲಿ ಚುನಾವಣಾ ಪ್ರಚಾರ ಜಾಹೀರಾತುಗಳಿಗಾಗಿ ಒಟ್ಟು ಮೂರು ಮಿಲಿಯನ್ ಅಮೆರಿಕ್ ಡಾಲರ್ಸ್ ವೆಚ್ಚಿಸಿದ್ದಾರೆ.[ಖಾಸಗಿ ಇ-ಮೇಲ್ ಬಳಕೆ: ಎಫ್ ಬಿಐ ತನಿಖೆಗೆ ಹಿಲರಿ ಆಕ್ಷೇಪ]

ಎಬಿಸಿನ್ಯೂಸ್ ಮತ್ತು ವಾಷಿಂಗ್ಟನ್ ಪೋಸ್ಟ್ ನಡೆಸಿದ ಸಮೀಕ್ಷೆಯಲ್ಲಿ ಟ್ರಂಪ್ ಅವರು ಶೇ.46ರಷ್ಟು ಮತಗಳನ್ನು ಹಾಗೂ ಹಿಲರಿ ಅವರು ಶೇ 45ರಷ್ಟು ಮತಗಳನ್ನು ಪಡೆದಿದ್ದು, ಶೆ.1ರಷ್ಟು ಮತಗಳನ್ನು ಪಡೆಯುವ ಮೂಲಕ ಟ್ರಂಪ್ ಮುನ್ನಡೆ ಕಾಯ್ದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಇತರೆ ಸಮೀಕ್ಷೆಗಳ ಪ್ರಕಾರ ಹಿಲರಿಗೆ ಮುನ್ನಡೆ....

ಎಲ್ಲಾ ಸಮೀಕ್ಷೆಗಳು ಸರಾಸರಿ ಕೈಗೊಂಡಿರುವ 'ರಿಯಲ್ ಕ್ಲಿಯರ್ ಪಾಲಿಟಿಕ್ಸ್' ಪ್ರಕಾರ ಹಿಲರಿ ಅವರು ಡೊನಾಲ್ಡ್ ಟ್ರಪ್ ಗಿಂತ ಶೇ.3.1 ರಷ್ಟು ಮುನ್ನಡೆಯಲ್ಲಿದ್ದಾರೆ.

Donald Trump leads Clinton by one point: Poll

ಒಂದು ತಿಂಗಳ ಹಿಂದೆ ಹಿಲರಿ ಅವರು ಟ್ರಂಪ್ ಗಿಂಗ ಶೆ.16.5ರಷ್ಟು ಮುನ್ನಡೆ ಹೊಂದಿದ್ದರು. ಚುನಾವಣೆ ಹೊಸ್ತಿಲಲ್ಲಿರುವ ಸಂದರ್ಭದಲ್ಲಿ ಹಿಲರಿ ಅವರು ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದ್ದು, ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಯಾರು ನೇಮಕ ಆಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

English summary
A week before the US presidential elections, Republican nominee Donald Trump has taken a slender lead of one percentage point against his Democratic rival Hillary Clinton for the first time since May in a major national tracking poll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X