ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾಕ್ ಮೇಲಿನ ವೀಸಾ ನಿರ್ಬಂಧ ತೆರವು : ಡೊನಾಲ್ಡ್ ಟ್ರಂಪ್

ಯುಎಸ್ ಕಾಂಗ್ರೆಸ್ಸಿನಲ್ಲಿ ಇದೇ ಮೊದಲ ಬಾರಿಗೆ ಭಾಷಣ ಮಾಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಾನ್ಸಾಸ್ ಶೂಟಿಂಗ್, ವಲಸೆ ನೀತಿ, ಉದ್ಯೋಗ, ಆರೋಗ್ಯ ಇನ್ನಿತರ ವಿಷಯಗಳ ಬಗ್ಗೆ ಮಾತನಾಡಿದರು.

By Mahesh
|
Google Oneindia Kannada News

ವಾಷಿಂಗ್ಟನ್,ಮಾರ್ಚ್ 01: ಯುಎಸ್ ಕಾಂಗ್ರೆಸ್ಸಿನಲ್ಲಿ ಇದೇ ಮೊದಲ ಬಾರಿಗೆ ಭಾಷಣ ಮಾಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಾನ್ಸಾಸ್ ಶೂಟಿಂಗ್, ವಲಸೆ ನೀತಿ, ಉದ್ಯೋಗ, ಆರೋಗ್ಯ ಇನ್ನಿತರ ವಿಷಯಗಳ ಬಗ್ಗೆ ಮಾತನಾಡಿದರು.

ಕಾನ್ಸಾಸ್ ಶೂಟಿಂಗನ್ನು ಕಟುವಾಗಿ ಖಂಡಿಸಿದ ಟ್ರಂಪ್, ನಾವು ಎಂಥಾ ಪರಿಸ್ಥಿತಿಯಲ್ಲೂ ಒಗ್ಗಟ್ಟಾಗಿ ನಿಂತು ದುಷ್ಟಶಕ್ತಿಗಳನ್ನು ಎದುರಿಸುವ ದೇಶದಲ್ಲಿದ್ದೇವೆ ಎಂಬುದನ್ನು ಮರೆಯುವುದು ಬೇಡ ಎಂದರು.

Donald Trump first speech highlights in US Congress highlights

* ಈಗ ಜಾರಿಯಲ್ಲಿರುವ ವಲಸೆ ನೀತಿಯಿಂದ ಅರ್ಹತೆ ಆಧಾರದ ನೀತಿಯನ್ನು ಅಳವಡಿಸಿಕೊಂಡರೆ ಅನೇಕ ಲಾಭಗಳಿವೆ.
* ಲಕ್ಷಾಂತರ ಉದ್ಯೋಗವನ್ನು ಮತ್ತೆ ಸೃಷ್ಟಿಸುವುದು ನಮ್ಮ ಸರ್ಕಾರದ ಉದ್ದೇಶ.
* ನಾನು ಅಮೆರಿಕದ ಅಧ್ಯಕ್ಷ, ವಿಶ್ವಕ್ಕೆ ಅಧ್ಯಕ್ಷನಲ್ಲ. ಅಮೆರಿಕ ಮೊದಲು.
* ಈಗಿನ ವಲಸೆ ನೀತಿ ಆಧಾರಿತ ವ್ಯವಸ್ಥೆ ಬಡ ಕಾರ್ಮಿಕರನ್ನು ರಕ್ಷಿಸುವುದು ಮಾತ್ರವಲ್ಲದೆ ತೆರಿಗೆದಾರರ ಮೇಲೆ ಅತೀವ ಒತ್ತಡ ಹಾಕುತ್ತದೆ.
* ಅಮೆರಿಕದ ಬಡ ಮತ್ತು ಮಧ್ಯಮ ವರ್ಗದವರಿಗೆ ಉದ್ಯೋಗ ಕಲ್ಪಿಸುವುದರಿಂದ ಸಾಧ್ಯ.
* ಭಾರತದ ಐಟಿ ವೃತ್ತಿಪರರು ಸೇರಿದಂತೆ ವಿದೇಶಿ ವೃತ್ತಿಪರರು ಅಮೆರಿಕಕ್ಕೆ ಎಚ್-1ಬಿ ವೀಸಾದಡಿ ಬರುತ್ತಾರೆ.
* ಅಮೆರಿಕಕ್ಕೆ ಬರುವ ಕೌಶಲ್ಯವುಳ್ಳವರ ಪೈಕಿ ಭಾರತೀಯರ ಸಂಖ್ಯೆಯೇ ಹೆಚ್ಚು.
* ವಿಜ್ಞಾನಿಗಳು, ವೈದ್ಯರು, ಇಂಜಿನಿಯರ್ ಮತ್ತು ಇತರ ಅತಿ ಕುಶಲ ವೃತ್ತಿಪರರು ಇಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ.

* ರಿಪಬ್ಲಿಕನ್ನರೇ, ಡೊಮಾಕ್ರಾಟಿಕ್ಸ್ ಹಾಗೂ ಕಾಂಗ್ರೆಸ್ಸಿಗರೆ ಎಲ್ಲೂ ಒಟ್ಟಿಗೆ ಸೇರಿ ಅಮೆರಕವನ್ನು ಒಬಾಮಾಕೇರ್ ನಿಂದ ರಕ್ಷಿಸೋಣ.

English summary
US President Donald Trump on Tuesday in his first speech to the Congress recalled the attack on the Jewish cemetery and the shooting incident in Kansas and said,Am here to deliver a message of unity and strength
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X