ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಜಿಟಲ್ ಡೇಟಿಂಗ್ ನಲ್ಲಿ ಹೆಣ್ಣುಮಕ್ಕಳಿಗೆ ಸಿಕ್ಕಾಪಟ್ಟೆ ಮಾನಸಿಕ ಹಿಂಸೆ

|
Google Oneindia Kannada News

ವಾಷಿಂಗ್ಟನ್ ಡಿಸಿ, ಜೂನ್ 28: ಯುವ ಸಮುದಾಯವು ಸಾಮಾಜಿಕ ಜಾಲ ತಾಣಗಳ ಮೂಲಕ ಅಥವಾ ಸಂದೇಶಗಳಲ್ಲಿ ಬೈಗುಳಗಳ ಬಳಕೆ ಮಾಡುವುದು ವಿಪರೀತ ಸಮಸ್ಯೆ ಆಗುತ್ತಿದೆ ಎಂದು ವರದಿಯೊಂದು ತಿಳಿಸಿದೆ. ಅದರ ಪ್ರಕಾರ ಯುವಕರಿಗಿಂತ ಯುವತಿಯರು ಇದರಿಂದ ಮಾನಸಿಕ ಕ್ಷೋಭೆ ಎದುರಿಸುತ್ತಿದ್ದಾರಂತೆ.

ಡಿಜಿಟಲ್ ಡೇಟಿಂಗ್ ಬಗ್ಗೆ ಹೈ ಸ್ಕೂಲ್ ನಲ್ಲಿ ಓದುತ್ತಿರುವವರ ನಡವಳಿಕೆ ಬಗ್ಗೆ ಅಮೆರಿಕದಲ್ಲಿ ಅಧ್ಯಯನ ನಡೆಸಿದಾಗ ಈ ಅಂಶ ಗೊತ್ತಾಗಿದೆ. ಮೊಬೈಲ್ ಫೋನ್ ಅಥವಾ ಇಂಟರ್ ನೆಟ್ ಅನ್ನು ಡೇಟಿಂಗ್ ಸಂಗಾತಿಯ ಶೋಷಣೆಗೆ, ನಿಯಂತ್ರಿಸುವುದಕ್ಕೆ, ಒತ್ತಡ ಹೇರುವುದಕ್ಕೆ ಅಥವಾ ಬೆದರಿಸುವುದಕ್ಕೆ ಅಂತ ಬಳಸಲಾಗುತ್ತಿದೆಯಂತೆ.

ಫೇಸ್ ಬುಕ್ ನಲ್ಲಿ ಧರ್ಮನಿಂದನೆ ಮಾಡಿದ ವ್ಯಕ್ತಿಗೆ ಪಾಕ್ ನಲ್ಲಿ ಗಲ್ಲುಫೇಸ್ ಬುಕ್ ನಲ್ಲಿ ಧರ್ಮನಿಂದನೆ ಮಾಡಿದ ವ್ಯಕ್ತಿಗೆ ಪಾಕ್ ನಲ್ಲಿ ಗಲ್ಲು

ಇಂಥ ಸನ್ನಿವೇಶದಲ್ಲಿ ಹೆಣ್ಣುಮಕ್ಕಳು ಹೆಚ್ಚು ವಿಚಲಿತರಾಗುತ್ತಾರೆ ಎಂಬುದು ತಿಳಿದುಬಂದಿದೆ. "ಡಿಜಿಟಲ್ ಡೇಟಿಂಗ್ ಸಂದರ್ಭದಲ್ಲಿನ ಬೈಗುಳಗಳು ಯುವ ಸಮುದಾಯಕ್ಕೆ ತೀರಾ ಅಪಾಯಕಾರಿ, ಅದರಿಂದ ಹೆಚ್ಚು ತೊಂದರೆಗೆ ಒಳಗಾಗುತ್ತಿರುವುದು ಹೆಣ್ಣುಮಕ್ಕಳು" ಎಂದು ಸಂಶೋಧಕರು ಬಹಿರಂಗ ಪಡಿಸಿದ್ದಾರೆ.

Social Media

ಈ ಅಧ್ಯಯನದಲ್ಲಿ ಭಾಗಿಯಾಗಿದ್ದವರು ದಿನಕ್ಕೆ ಕನಿಷ್ಠ ಐವತ್ತೊಂದು ಸಂದೇಶ ಕಳಿಸುವಂಥವರು ಹಾಗೂ ವಾರದಲ್ಲಿ ಸರಾಸರಿ ಇಪ್ಪತ್ತೆರಡು ಗಂಟೆ ಕಾಲ ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುವವರಾಗಿದ್ದರು. ಆ ಪೈಕಿ ಬಹುತೇಕರು ಸಂದೇಶಗಳನ್ನು ಕಳಿಸುತ್ತಿದ್ದದ್ದು ಅವರ ಸದ್ಯದ ಅಥವಾ ತೀರಾ ಇತ್ತಿಚಿನ ಡೇಟಿಂಗ್ ಸಂಗಾತಿಗೆ.

ನಿಮ್ಮ ಡೇಟಿಂಗ್ ಸಂಗಾತಿ ಜತೆಗೆ ಎದುರಿಸುತ್ತಿದ್ದ ಮುಖ್ಯ ಸಮಸ್ಯೆ ಏನು ಎಂಬ ಪ್ರಶ್ನೆಗೆ, ನಗ್ನ ಚಿತ್ರಗಳನ್ನು ಕಳಿಸುವಂತೆ ಒತ್ತಾಯಿಸುತ್ತಿದ್ದರು ಎಂಬ ಉತ್ತರವನ್ನು ಹೆಣ್ಣುಮಕ್ಕಳು ಕೊಟ್ಟಿದ್ದಾರೆ.

English summary
With usage of social media or texting as a means of abuse becoming a growing problem among teenagers, a new study has found that girls may be suffering more severe emotional consequences than boys.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X