ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

22 ವರ್ಷದಿಂದ ಗಟಾರಿನಲ್ಲೇ ಜೀವನ ನಡೆಸುತ್ತಿರುವ ವೃದ್ಧ ದಂಪತಿ

ಒಂದಾನೊಂದು ಕಾಲದಲ್ಲಿ ಪೇಮಿಸಿ ಮದುವೆಯಾಗಿ ತಮ್ಮ ಬಂಧುಗಳಿಂದ ತ್ಯಜಿಸಲ್ಪಟ್ಟ ಈ ಪ್ರೇಮಿಗಳು ಪುಟ್ಟ ಗಟಾರಿನಲ್ಲಿ ಸಂಸಾರ ಹೂಡಿ ಬದುಕು ಕಟ್ಟಿಕೊಂಡಿರುವುದು ಒಂದು ಧನ್ಯತಾ ಭಾವವನ್ನು ಮೂಡಿಸದಿರದು.

|
Google Oneindia Kannada News

ಬೊಗೊಟಾ, ಫೆಬ್ರವರಿ 7: 'ಅಂಗೈಯ್ಯಗಲ ಜಾಗ ಸಾಕು ಹಾಯಾಗಿರೋಕೆ' ಅನ್ನೋ ಮಾತಿಗೆ ಕೊಲಂಬಿಯಾದ ಈ ವೃದ್ಧ ದಂಪತಿ ಸಾಕ್ಷೀಭೂತರು. ಕಳೆದ 22 ವರ್ಷಗಳಿಂದ ಮೆಡಿಲಿನ್ ಪ್ರಾಂತ್ಯದ ಒಂದು ಗಟಾರದಲ್ಲಿ ಸಂಸಾರ ನಡೆಸುತ್ತಿರುವ ಮರಿಯಾ ಗಾರ್ಸಿನಾ ಹಾಗೂ ಆಕೆಯ ಪತಿ ಮಿಗ್ಯುಯೆಲ್ ರೆಸ್ಟ್ರೋಪೊ ಅವರಿಬ್ಬರ ಇಚ್ಛಾಶಕ್ತಿಗೆ ಅಚ್ಚರಿಯಾಗದಿರದು.

ಒಂದಾನೊಂದು ಕಾಲದಲ್ಲಿ ಪೇಮಿಸಿ ಮದುವೆಯಾಗಿ ತಮ್ಮ ಬಂಧುಗಳಿಂದ ತ್ಯಜಿಸಲ್ಪಟ್ಟ ಈ ಪ್ರೇಮಿಗಳು ಪುಟ್ಟ ಗಟಾರಿನಲ್ಲಿ ಸಂಸಾರ ಹೂಡಿ ಬದುಕು ಕಟ್ಟಿಕೊಂಡಿರುವುದು ಒಂದು ಧನ್ಯತಾ ಭಾವವನ್ನು ಮೂಡಿಸದಿರದು.

Columbian couple Has Been Living In The Gutter For 22 Years

ಅಂದಹಾಗೆ, ಈ ಇಬ್ಬರೂ ಮಾಜಿ ಡ್ರಗ್ಸ್ ವ್ಯಸನಿಗಳು. ಸುಮಾರು 25 ವರ್ಷಗಳ ಹಿಂದೆ ಮೆಡಿಲಿನ್ ಪ್ರಾಂತ್ಯ ಡ್ರಗ್ಸ್ ಗೆ ಕುಖ್ಯಾತಿಯಾಗಿತ್ತು. ಅದೇ ವೇಳೆ, ಮರಿಯಾ ಹಾಗೂ ಮಿಗ್ಯುಯೆಲ್ ಭೇಟಿಯಾಗಿದ್ದರು. ಆ ಪರಿಚಯ ಸ್ನೇಹ, ಪ್ರೇಮಗಳಾಗಿ ಟಿಸಿಲೊಡೆದು ಕೊನೆಗೆ ವಿವಾಹದಲ್ಲಿ ಪರಿವರ್ತನೆಗೊಂಡಿತು.

ಆದರೆ, ಇಬ್ಬರಲ್ಲಿದ್ದ ಡ್ರಗ್ಸ್ ಗೀಳು ಅವರ ಜೀವನವನ್ನೇ ಕಿತ್ತುಕೊಳ್ಳುವ ಹಂತಕ್ಕೆ ಬಂದಿತ್ತು. ಆಗ, ಅವರಿಬ್ಬರೂ ಡ್ರಗ್ಸ್ ಸಹವಾಸ ತೊರೆಯಲು ನಿರ್ಧರಿಸಿದರು.

ಅವರೇನೋ ಬದಲಾದರು. ಆದರೆ, ಅವರ ಸಂಬಂಧಿಗಳಲ್ಲಿ, ಸ್ನೇಹಿತರಲ್ಲಿ ಅವರ ಮೇಲಿದ್ದ ಅಭಿಪ್ರಾಯ ಬದಲಾಗಲಿಲ್ಲ. ಹೊಸ ಜೀವನವನ್ನು ಆರಂಭಿಸುವ ಹುಮ್ಮಸ್ಸಿನಲ್ಲಿದ್ದ ಅವರಿಗೆ ಯಾರಿಂದಲೂ ಆಶ್ರಯವಾಗಲೀ, ಹಣಕಾಸಿನ ಸಹಾಯವಾಗಲೀ ಸಿಗಲಿಲ್ಲ.

ಆದರೂ, ಛಲ ಬಿಡದ ಈ ಇಬ್ಬರೂ ಖಾಲಿಯಿದ್ದ ಗಟರಿನಲ್ಲಿ ಜೀವನ ಸಾಗಿಸಲು ಶುರು ಮಾಡಿದರು. ಹೀಗೆ, ತಾತ್ಕಾಲಿಕ ವಸತಿ ಎಂದುಕೊಂಡು ಅವರು ಈ ಗಟಾರಿನ ಮೇಲೆ ಅವರಿಗೆ ಅತ್ಯಂತ ವ್ಯಾಮೋಹ ಹುಟ್ಟಿಬಿಟ್ಟಿದೆ.

ದಂಪತಿ ಅಲ್ಲಿಇಲ್ಲಿ ಸಣ್ಣ, ಪುಟ್ಟ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಮನೆ ಕಾವಲಿಗೆ ಅವರ ಬಳಿ ನಾಯಿಯೂ ಒಂದಿದೆ. ಆ ಪುಟ್ಟ ಗಟಾರಿನಲ್ಲೇ ನಿತ್ಯ ಜೀವನ ನಡೆಸುವ ಅವರಿಗೆ, ಈಗ ಅಲ್ಲಿನ ಸರ್ಕಾರ ವಿದ್ಯುತ್ ಸೌಕರ್ಯ ಕಲ್ಪಿಸಿದೆ. ಹಾಗಾಗಿ, ಒಳಗೆ ಪುಟ್ಟ ಲೈಟು ದೀಪಗಳು, ಪುಟ್ಟ ಟಿವಿಗಳನ್ನಿಟ್ಟುಕೊಂಡು ಅಡುಗೆ ಮಾಡಿಕೊಂಡು ಅಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ.

English summary
This happy Colombian couple lives in a sewer and despite no means of luxury or worldly comforts, they're content with their lives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X