ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯುವ ಕ್ಷಿಪಣಿ ಪರೀಕ್ಷೆ ಮಾಡಿದ ಚೀನಾ

ಚೀನಾದ ಅಣ್ವಸ್ತ್ರ ಸಾಮರ್ಥ್ಯ ಅಂದಾಜಿಗಿಂತಲೂ ಹೆಚ್ಚಿದೆ ಎಂದು ಅಮೆರಿಕಕ್ಕೆ ಅನಿಸಿದೆ. ಅದಕ್ಕೆ ಕಾರಣವಾಗಿದ್ದು ಚೀನಾದ ಕ್ಷಿಪಣಿ ಪರೀಕ್ಷೆ. ಹತ್ತು ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಕ್ಷಿಪಣಿ ಪರೀಕ್ಷೆಯನ್ನು ಚೀನಾ ಮಾಡಿದೆ.

|
Google Oneindia Kannada News

ಬೀಜಿಂಗ್, ಫೆಬ್ರವರಿ 2: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ತನ್ನ ತಾಕತ್ತು ತೋರಿಸುವ ಕಾರಣಕ್ಕೇ ಚೀನಾ ಈ ಪರೀಕ್ಷೆ ನಡೆಸಿದೆಯಾ ಎಂಬ ಪ್ರಶ್ನೆ ಎದುರಾಗಿದೆ. ಅದೇನು ಪರೀಕ್ಷೆ ಅಂತೀರಾ? ಚೀನಾ ಹೊಸ ಕ್ಷಿಪಣಿ ಪರೀಕ್ಷೆ ನಡೆಸಿದ್ದು, ಅದು ಹತ್ತು ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ತನ್ನ ಮಿಲಿಟರಿ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ, ಅದರಲ್ಲೂ ಅಣ್ವಸ್ತ್ರ ಸಾಮರ್ಥ್ಯವನ್ನು ತೋರಿಸುವ ಕಾರಣಕ್ಕೆ ಈ ಪ್ರಮುಖ ಪರೀಕ್ಷೆ ನಡೆಸಿದೆ. DF-5C ಕ್ಷಿಪಣಿಯ ಪರೀಕ್ಷೆಯನ್ನು ಕಳೆದ ತಿಂಗಳು ಮಾಡಿದೆ. ಹತ್ತು ವಿವಿಧ ಸ್ವತಂತ್ರ ಗುರಿಗಳನ್ನು ತಲುಪಬಲ್ಲ ವಾಹನಗಳನ್ನು ಬಳಸಿ ಪರೀಕ್ಷೆ ನಡೆದಿದೆ ಎಂದು ವಾಷಿಂಗ್ಟನ್ ನ ಮಾಧ್ಯಮವೊಂದು ವರದಿ ಮಾಡಿದೆ.[ಟ್ರಂಪ್ ಎಚ್ಚರಿಕೆಗೆ ಕ್ಯಾರೇ ಅನ್ನದೆ ಇರಾನ್ ನಿಂದ ಕ್ಷಿಪಣಿ ಪರೀಕ್ಷೆ]

China tests missile with 10 nuclear warheads: Report

ಅಮೆರಿಕದ ಗುಪ್ತಚರ ದಳವು ಚೀನಾದ ಸಿಡಿತಲೆಗಳ ಪರೀಕ್ಷೆ ಮೇಲೆ ನಿಗಾ ಇರಿಸಿದೆ. ಇಬ್ಬರು ಅಧಿಕಾರಿಗಳಿಗೆ ಈ ವರದಿ ಬಗ್ಗೆ ಮಾಹಿತಿ ಇತ್ತು ಎಂದು ಗೊತ್ತಾಗಿದೆ. ಹತ್ತು ಡಮ್ಮಿ ಸಿಡಿತಲೆಗಳನ್ನು ಹೊತ್ತಿದ್ದ ಕ್ಷಿಪಣಿಯನ್ನು ಶಾಂಕ್ಸಿ ಪ್ರಾಂತ್ಯದ ತೈಯುವಾನ್ ಸ್ಪೇಸ್ ಲಾಂಚ್ ಕೇಂದ್ರದಿಂದ ಉಡಾಯಿಸಿದ್ದು, ಪಶ್ಚಿಮ ಚೀನಾದ ಮರುಭೂಮಿಯವರೆಗೆ ಹಾರಿದೆ ಎಂದು ವರದಿಯಾಗಿದೆ.

ದಶಕಗಳಿಂದ ಅಮೆರಿಕವು ಚೀನಾದ ಬಳಿ ಅಂದಾಜು 250 ಅಣ್ವಸ್ತ್ರಗಳಿವೆ ಎಂದುಕೊಂಡಿದೆ. ಆದರೆ ಈಗ ಹತ್ತು ಅಣ್ವಸ್ತ್ರ ಸಿಡಿತಲೆಗಳ ಕ್ಷಿಪಣಿ ಪ್ರಯೋಗ ಮಾಡಿದ ನಂತರ 250ಕ್ಕಿಂತ ಹೆಚ್ಚು ಅಣ್ವಸ್ತ್ರ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದೆ. ಚೀನಾವು ತನ್ನ ಮಿಲಿಟರಿ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿರುವುದು, ಅಣ್ವಸ್ತ್ರ ಸಾಮರ್ಥ್ಯದ ಬಗ್ಗೆ ಪಾರದರ್ಶಕತೆ ಇಲ್ಲದಿರುವುದು ಆ ಭಾಗದಲ್ಲಿ ಅನಿಶ್ಚಿತತೆಗೆ ಕಾರಣವಾಗಬಹುದು ಎಂದು ಅಮೆರಿಕ ಅತಂಕ ವ್ಯಕ್ತಪಡಿಸಿದೆ.[ಸ್ವದೇಶಿ ನಿರ್ವಿುತ ಅಗ್ನಿ 5 ಕ್ಷಿಪಣಿ ಯಶಸ್ವಿ ಪರೀಕ್ಷೆ]

"ಕ್ಷಿಪಣಿ ಪರೀಕ್ಷೆಗೆ ಉನ್ನತ ಮಟ್ಟದ ಅನುಮತಿ ಬೇಕಾಗುತ್ತದೆ. ಇದಕ್ಕೆ ಕನಿಷ್ಠ ಒಂದು ವರ್ಷದ ಹಿಂದೆಯೇ ಒಪ್ಪಿಗೆ ಪಡೆದಿರಬೇಕು ಮತ್ತು ಸಿದ್ಧತೆ ನಡೆಸಿರಬೇಕು" ಎಂದು ಹಾಂಕಾಂಗ್ ಮೂಲದ ಮಾಧ್ಯಮವೊಂದು ತಜ್ಞರ ಅಭಿಪ್ರಾಯವನ್ನು ಉಲ್ಲೇಖಿಸಿದೆ.

English summary
China has reportedly tested a new version of a missile that can carry up to 10 nuclear warheads, signalling a major shift in its nuclear capability as Beijing gears up for a possible military showdown with the US under Trump Presidency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X