ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ ಅಧ್ಯಕ್ಷ ಚುನಾವಣೆಯಲ್ಲಿ ಯಾರಿಗೆ ಜಯ? ಮಂಗ ನುಡಿದ ಭವಿಷ್ಯ

'ಕಿಂಗ್ ಆಫ್ ಪ್ರಿಡಿಕ್ಷನ್' ಎಂದೇ ಚೀನಾದಲ್ಲಿ ಕರೆಯಲ್ಪಡುವ 'ಗೆಡಾ' ಎನ್ನುವ ಮಂಗನಿಂದ ಅಮೆರಿಕಾದ ಅಧ್ಯಕ್ಷ ಚುನಾವಣೆಯ ಬಗ್ಗೆ ಭವಿಷ್ಯ ಕೇಳಲಾಗಿದೆ.

By Balaraj
|
Google Oneindia Kannada News

ಶಾಂಘೈ, ನ 5: ತೀವ್ರ ಪೈಪೋಟಿಯಲ್ಲಿ ಸಾಗುತ್ತಿರುವ ವಿಶ್ವದ ದೊಡ್ಡಣ್ಣ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಗೆಲ್ಲಲಿದ್ದಾರೋ ಅಥವಾ ಡೆಮೊಕ್ರೆಟಿಕ್ ಪಕ್ಷದ ಅಭ್ಯರ್ಥಿ ಜಯಭೇರಿ ಬಾರಿಸಲಿದ್ದಾರೋ?

ಇದರ ಬಗ್ಗೆ ಅರಸೀಕೆರೆ ಕೋಡಿಮಠದ ಶ್ರೀಗಳ ಭವಿಷ್ಯ ಇದುವರೆಗೆ ಹೊರಬೀಳದಿದ್ದರೂ, ಚೀನಾದ ಮಂಗವೊಂದು ಈ ಬಗ್ಗೆ ಭವಿಷ್ಯ ನುಡಿದಿದೆ. ಯುರೋ 2016 ಫುಟ್ಬಾಲ್ ಯಾರು ಗೆಲ್ಲಲಿದ್ದಾರೆಂದು ಕರಾರುವಕ್ಕಾಗಿ ಭವಿಷ್ಯ ನುಡಿದ ಮಂಗವಿದು ಎನ್ನುವ ಹೆಗ್ಗಳಿಕೆ ಈ ಕೋತಿರಾಯನದ್ದು. (ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಪ್ರಕ್ರಿಯೆ)

'ಕಿಂಗ್ ಆಫ್ ಪ್ರಿಡಿಕ್ಷನ್' ಎಂದೇ ಚೀನಾದಲ್ಲಿ ಕರೆಯಲ್ಪಡುವ 'ಗೆಡಾ' ಎನ್ನುವ ಈ ಮಂಗನಿಂದ ಅಮೆರಿಕಾದ ಅಧ್ಯಕ್ಷ ಚುನಾವಣೆಯ ಬಗ್ಗೆ ಭವಿಷ್ಯ ಕೇಳಲಾಗಿದೆ.

China’s ‘Monkey King’ predicts Donald Trump will win the US presidential election

ಇದಕ್ಕಾಗಿ ಎಡ ಭಾಗದಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮತ್ತು ಬಲ ಭಾಗದಲ್ಲಿ ಡೆಮೊಕ್ರೆಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಅವರ ದೊಡ್ಡ ಭಾವಚಿತ್ರಗಳನ್ನು ಇಡಲಾಗಿತ್ತು.

ಹಳದಿ ಬಣ್ಣ ತೊಟ್ಟಿದ್ದ ಗೆಡಾ ಕೈಯಲ್ಲಿ ಭವಿಷ್ಯ ಕೇಳಿಸಲಾಯಿತು. ಸ್ವಲ್ಪ ಹೊತ್ತು ಎರಡೂ ಅಭ್ಯರ್ಥಿಗಳ ಭಾವಚಿತ್ರಗಳನ್ನು ನೋಡಿದ ಮಂಗ, ಡೊನಾಲ್ಡ್ ಟ್ರಂಪ್ ಚಿತ್ರಕ್ಕೆ ಮುತ್ತಿಕ್ಕಿತು.

ಅಷ್ಟೇ ಅಲ್ಲದೇ ಚೀನಾ ಭಾಷೆಯಲ್ಲಿ ಬರೆಯಲಾಗಿದ್ದ 'ಕಂಗ್ರಾಟ್ಸ್ ಟ್ರಂಪ್' ಎನ್ನುವ ನಾಮಫಲಕವನ್ನು ಬಲಗೈಯಿಂದ ಮೇಲೆಕ್ಕೆತ್ತಿತು ಎಂದು ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ.

ಈ ಮಂಗ ಜುಲೈ 2016ರಲ್ಲಿ ನಡೆದ ಯುರೋ 2016 ಫುಟ್ಬಾಲ್ ಪಂದ್ಯಾವಳಿಯಲ್ಲಿ ಪೋರ್ಚುಗಲ್ ಜಯ ಸಾಧಿಸಲಿದೆ ಎಂದು ಭವಿಷ್ಯ ನುಡಿದಿತ್ತು.

English summary
Donald J Trump will be the next President of the United States, according to a decree by China’s ‘Monkey King’. Also known as Geda, the mystic monkey shot to fame for correctly tipping Portugal to win the Euro 2016 football championship last summer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X