ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ವಸ್ತುಗಳೇ ಖರೀದಿಸಿ, ಅಮೆರಿಕನ್ನರನ್ನೇ ನೇಮಿಸಿ: ಟ್ರಂಪ್

ಅಮೆರಿಕ ಅಮೆರಿಕ ಅಮೆರಿಕ ಎಂಬ ಜಪ ಮಾಡುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕ ವಸುಗಳನ್ನೇ ಖರೀದಿಸಿ, ಅಮೆರಿಕನ್ನರನ್ನೇ ಕೆಲಸಕ್ಕೆ ನೇಮಿಸಿ ಎನ್ನುವ ಮೂಲಕ ಚುನಾವಣೆ ಪ್ರಚಾರ ವೇಳೆ ನೀಡಿದ್ದ ಉದ್ಯೋಗ ಭರವಸೆಯನ್ನು ನೆನಪಿಸುತ್ತಿದ್ದಾರೆ

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 18: "ಅಮೆರಿಕದ ವಸ್ತುಗಳೇ ಖರೀದಿಸಿ, ಕೆಲಸಕ್ಕೆ ಅಮೆರಿಕನ್ನರನ್ನೇ ನೇಮಿಸಿ"- ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ ಹೊಸ ಮಂತ್ರ. ಆ ಕಾರಣಕ್ಕೆ ವ್ಯಾಪಾರ ನಿಯಮಗಳು ಹಾಗೂ ವಿದೇಶಿ ವಸ್ತುಗಳ ಆಮದಿಗೆ ಕಠಿಣ ನಿಯಮಗಳನ್ನು ಮಾಡುತ್ತಿದ್ದಾರೆ.

"ವ್ಯಾಪಾರ ನಿಯಮಗಳನ್ನು ಕಠಿಣ ಮಾಡುತ್ತೇವೆ. ವಿದೇಶಿಯರ ಮೋಸವನ್ನು ತಡೆಯುತ್ತೇವೆ. ನಮ್ಮ ಕಾರ್ಮಿಕರು ತಯಾರು ಮಾಡಿದ, ನಮ್ಮ ಕಾರ್ಖಾನೆಯಲ್ಲಿ ಸಿದ್ಧವಾದ, ಮೇಡ್ ಇನ್ ಯುಎಸ್ ಎಂದಿರುವ ವಸ್ತುಗಳನ್ನೇ ಬಳಸೋಣ" ಎಂದು ಟ್ರಂಪ್ ಹೇಳಿದ್ದಾರೆ. ಬೋಯಿಂಗ್ 787 ಡ್ರೀಮ್ ಲೈನರ್ ವಿಮಾನ ಅನಾವರಣಗೊಳಿಸಿ ಅವರು ಮಾತನಾಡಿದರು.[ಹೊಸ ಅಧ್ಯಾಯ ತೆರೆಯಲಿರುವ ರಕ್ಷಣಾ ಕ್ಷೇತ್ರದ ಭಾರತ- ಅಮೆರಿಕ ಒಪ್ಪಂದ]

'Buy American Hire American' is the new mantra: Donald Trump

ಅಮೆರಿಕಕ್ಕೆ ಕೆಲಸ ವಾಪಸ್ ತರಲು ಏನು ಮಾಡಬೇಕೋ ಎಲ್ಲವನ್ನೂ ಮಾಡುತ್ತೇನೆ ಎಂದು ಚುನಾವಣೆ ಪ್ರಚಾರದ ವೇಳೆ ನೀಡಿದ್ದ ಮಾತನ್ನು ಕಾರ್ಯಕ್ರಮದಲ್ಲಿ ಸೇರಿದ್ದ ಜನರಿಗೆ ಅವರು ನೆನಪಿಸಿದರು. ಮತ್ತು ಆ ಮಾತು ಪೂರೈಸುವ ಕೆಲಸ ಆರಂಭವಾಗಿದೆ ಎಂದು ಅವರು ಹೇಳಿದರು.

"ನವೆಂಬರ್ ನಿಂದ ಈಚೆಗೆ ಉದ್ಯೋಗ ಸೃಷ್ಟಿ ಹೆಚ್ಚಾಗುತ್ತಿದೆ. ಅಮೆರಿಕದಲ್ಲಿ ಕಂಪೆನಿಗಳು ತೆರೆಯುತ್ತಿವೆ. ಫೋರ್ಡ್, ಜನರಲ್ ಮೋಟಾರ್ಸ್, ಫಿಯೆಟ್, ಕ್ರಿಸ್ಲರ್ -ನಾನು ಹೆಸರು ಹೇಳುತ್ತಿರುವುದು ತೀರಾ ತೀರಾ ಕಡಿಮೆ. ಹಲವಾರು ಕಂಪೆನಿಗಳು ಈಗಾಗಲೇ ಆರಂಭವಾಗಿವೆ. ಆ ಮೂಲಕ ಸಾವಿರಾರು ಕೆಲಸಗಳು ಅಮೆರಿಕಕ್ಕೆ ವಾಪಸಾಗಿವೆ. ವ್ಯಾಪಾರದ ವಾತಾವರಣ ಬದಲಾಗಿದೆ ಎಂದು ಅವರಿಗೆ ಗೊತ್ತಾಗಿ, ವಾಪಸ್ ಬಂದಿದ್ದಾರೆ" ಎಂದು ಹೇಳಿದರು.[ಹೊಸ ಅಧ್ಯಾಯ ತೆರೆಯಲಿರುವ ರಕ್ಷಣಾ ಕ್ಷೇತ್ರದ ಭಾರತ- ಅಮೆರಿಕ ಒಪ್ಪಂದ]

ನಾನು ಅಧ್ಯಕ್ಷನಾಗಿ ಇಲ್ಲಿ ನಿಂತಿದ್ದೇನೆ ಎಂದರೆ ಅದಕ್ಕೆ ಪ್ರಾಥಮಿಕ ಕಾರಣ ಉದ್ಯೋಗ. ನಾನು ಎಂದಿಗೂ ನಿಮಗೆ ನಿರಾಶೆ ಮಾಡೋದಿಲ್ಲ. ಕಂಪೆನಿಗಳು ದೇಶ ತೊರೆಯಲು ಬಿಡುವುದಿಲ್ಲ. ಉತ್ಪಾದನೆ ಮಾಡಿ, ಇಲ್ಲೇ ಮಾರಿ, ಯಾವುದೇ ತೆರಿಗೆ ಹಾಕಲ್ಲ. ಯಾವುದೇ ವ್ಯಾಪಾರಕ್ಕೆ ಇನ್ನು ತೊಂದರೆ ಆಗುವುದಕ್ಕೆ ಬಿಡಲ್ಲ ಎಂದು ಟ್ರಂಪ್ ಹೇಳಿದ್ದಾರೆ.

English summary
US President Donald Trump has said that 'Buy American and Hire American' is his new mantra as he vowed to "very strongly" enforce trade rules and stop "foreign cheating".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X