ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲೂ ಊಬರ್ ಕಂಪನಿ ಚಾಲಕನಿಂದ ಅತ್ಯಾಚಾರ

By Kiran B Hegde
|
Google Oneindia Kannada News

ಬಾಸ್ಟನ್, ಡಿ. 19: ಅಮೆರಿಕ ಮೂಲದ ಊಬರ್ ಟ್ಯಾಕ್ಸಿ ಸಂಸ್ಥೆ ಚಾಲಕರನ್ನು ನೇಮಿಸಿಕೊಳ್ಳುವಾಗ ಅವರ ಪೂರ್ವಾಪರ ವಿಚಾರಿಸುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಮೆರಿಕದ ಬಾಸ್ಟನ್ ನಗರದಲ್ಲಿ ಕೂಡ ಊಬರ್ ಟ್ಯಾಕ್ಸಿ ಚಾಲಕನೋರ್ವನನ್ನು ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿದೆ.

ಊಬರ್ ಸಂಸ್ಥೆಯ ಅಲೆಜಾಂಡ್ರೊ ಟ್ಯಾಕ್ಸಿ (46) ಎಂಬ ಚಾಲಕ ಓರ್ವ ಕೇಂಬ್ರಿಡ್ಜ್ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ. ಟ್ರೆಮೊಂಟ್ ಸ್ಟ್ರೀಟ್‌ನಿಂದ ಮನೆಗೆ ಟ್ಯಾಕ್ಸಿ ಮೂಲಕ ಹೋಗುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಅಪಹರಣಕ್ಕೆ ಯತ್ನಿಸಿದ್ದಾನೆಂದು ಮಿಡಲ್‌ಸೆಕ್ಸ್ ಡಿಸ್ಟ್ರಿಕ್ಟ್ ಅಟಾರ್ನಿ ಅವರ ಕಚೇರಿ ಮೂಲಗಳು ತಿಳಿಸಿವೆ.

uber

ಟ್ಯಾಕ್ಸಿ ಮೂಲಕ ಸಾಗುತ್ತಿದ್ದ ಮಹಿಳೆ ಎಟಿಎಂ ಯಂತ್ರದ ಎದುರು ನಿಂತು ಹಣ ಪಡೆದು ವಾಪಸ್ ಟ್ಯಾಕ್ಸಿ ಹತ್ತಿದ್ದಳು. ಆಗ ಟ್ಯಾಕ್ಸಿಯನ್ನು ಚಾಲಕನು ಅಪರಿಚಿತ ಸ್ಥಳಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಕಾರ್ ನಿಲ್ಲಿಸಿ ಹಿಂದಿನ ಸೀಟ್‌ಗೆ ನೆಗೆದು ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆಂದು ಮಹಿಳೆ ದೂರು ನೀಡಿದ್ದಾಳೆ. [ದೇಶಾದ್ಯಂತ ಊಬರ್ ಸೇವೆ ನಿಷೇಧಿಸಿ ಕೇಂದ್ರ ಆದೇಶ]

ತನಿಖೆಯಲ್ಲಿ ಅತ್ಯಾಚಾರ ನಡೆಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಆದ್ದರಿಂದ ಚಾಲಕನ ಮೇಲೆ ಅತ್ಯಾಚಾರ, ಅಪಹರಣ ಹಾಗೂ ದೈಹಿಕ ದಾಳಿ ನಡೆಸಿದ ಪ್ರಕರಣ ದಾಖಲಿಸಲಾಗಿದೆ.

ಇದೇ ವರ್ಷದ ಆರಂಭದಲ್ಲಿ ಲಾಸ್ ಏಂಜೆಲೀಸ್‌ ನಗರದಲ್ಲಿ ಊಬರ್ ಕಂಪನಿಯ ಚಾಲಕನು ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದ. ನಂತರ ದೆಹಲಿಯಲ್ಲಿ ಇದೇ ಸಂಸ್ಥೆಯ ಚಾಲಕ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ. ಆಗ ನಡೆದ ತನಿಖೆಯಲ್ಲಿ ಊಬರ್ ಕಂಪನಿಯು ಅನೇಕ ನಿಯಮಗಳನ್ನು ಉಲ್ಲಂಘಿಸಿರುವುದು ಬೆಳಕಿಗೆ ಬಂದಿತ್ತು. [ದೆಹಲಿ ಅತ್ಯಾಚಾರಕ್ಕೆ ಊಬರ್ ಕಂಪನಿಯೇ ಹೊಣೆ]

ಈಗ ಬಾಸ್ಟನ್ ನಗರದಲ್ಲಿ ಕೂಡ ಮತ್ತೋರ್ವ ಚಾಲಕ ಅತ್ಯಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಉಗ್ರನೋರ್ವ ಕಾಫಿ ಶಾಪ್‌ನಲ್ಲಿ ಜನರನ್ನು ಒತ್ತೆಯಿಟ್ಟುಕೊಂಡಿದ್ದಾಗ ಊಬರ್ ಕಂಪನಿಯ ಟ್ಯಾಕ್ಸಿಗಳಲ್ಲಿ ಎಂದಿಗಿಂತ ಹೆಚ್ಚಿನ ಬಾಡಿಗೆ ಪಡೆಯಲು ಯತ್ನಿಸಲಾಗಿತ್ತು. ಇದು ವ್ಯಾಪಕ ಟೀಕೆಗೊಳಗಾಗಿತ್ತು.

English summary
Boston police arrested a Uber taxi driver accusing of raping a passenger. After an investigation, the victim identified Done as the rapist. He’s now facing charges of rape, kidnapping, assault to rape.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X