ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುವೈತ್, ಫ್ರಾನ್ಸ್, ಟ್ಯೂನೇಷಿಯಾದಲ್ಲಿ ಉಗ್ರರ ಅಟ್ಟಹಾಸ

By Mahesh
|
Google Oneindia Kannada News

ಕುವೈತ್, ಜೂ.26: ಇರಾಕಿ ಉಗ್ರರ ಕರಾಳ ಹಸ್ತ ಈಗ ಕುವೈತಿನವರೆಗೂ ಚಾಚಿದೆ. ಶಿಯಾ ಮುಸ್ಲಿಮರು ಶುಕ್ರವಾರ ರಮ್ಜಾನ್ ಪ್ರಾರ್ಥನೆ ಸಲ್ಲಿಸುವ ವೇಳೆಗೆ ಆತ್ಮಾಹುತಿ ದಾಳಿ ನಡೆಸಿದ ಐಎಸ್ ಐಎಸ್ ಸುಮಾರು 13ಜನರನ್ನು ಬಲಿ ತೆಗೆದುಕೊಂಡಿದೆ. 26ಕ್ಕೂ ಅಧಿಕ ಜನರಿಗೆ ತೀವ್ರಗಾಯಗಳಾಗಿವೆ. ಇದೇ ವೇಳೆ ಫ್ರಾನ್ಸ್ ಹಾಗೂ ಟ್ಯೂನೇಷಿಯಾದಲ್ಲೂ ಉಗ್ರರ ದಾಳಿ ನಡೆದಿದೆ.

ಸೌದಿ ಅರೇಬಿಯಾ, ಯೆಮನ್ ಗಳಲ್ಲಿ ಶಿಯಾ ಮಸೀದಿಯ ಮೇಲೆ ದಾಳಿ ನಡೆಸಿದ ಮಾದರಿಯಲ್ಲೇ ಕುವೈತಿನ ಮಸೀದಿಯ ಮೇಲೂ ದಾಳಿ ನಡೆದಿದೆ.

Kuwait

ಪ್ರಾಥಮಿಕ ವರದಿಗಳ ಪ್ರಕಾರ ಸುಮಾರು 13 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅನೇಕ ಮಂದಿ ಗಾಯಗೊಂಡಿದ್ದಾರೆ. ಕುವೈತಿನ ಅಲ್ ಸವಾಬಿರ್ ಜಿಲ್ಲೆಯ ಸಾದಿಕ್ ಮಸೀದಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ರಮ್ಜಾನ್ ವೇಳೆಯಲ್ಲಿ ಕುವೈತ್ ನಲ್ಲಿ ದಾಳಿ ಜೊತೆಗೆ ಫ್ರಾನ್ಸ್ ಹಾಗೂ ಟ್ಯುನೇಷಿಯಾದಲ್ಲೂ ಇರಾಕಿ ಉಗ್ರರ ನರ್ತನ ಮುಂದುವರೆದಿದೆ.


ಆಗ್ನೇಯ ಫ್ರಾನ್ಸ್ ನ ಫಾಕ್ಟರಿಯೊಂದರ ಮೇಲೆ ನಡೆದ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯಗಳಾಗಿವೆ ಎಂದು ಅಧ್ಯಕ್ಷ ಫ್ರಾನ್ಕೊಯಿಸ್ ಹೊಲ್ಲಾಂಡೆ ಹೇಳಿದ್ದಾರೆ.

ಫ್ಯಾಕ್ಟರಿ ಮೇಲೆ ದಾಳಿ ನಡೆಸಿದ ಶಂಕಿತನನ್ನು ಫ್ರೆಂಚ್ ಪೊಲೀಸರು ಗುರುತಿಸಿದ್ದು, ಐಎಸ್ ಐಎಸ್ ಬಾವುಟ ಹಿಡಿದುಕೊಂಡಿದ್ದ ಎಂದು ತಿಳಿದು ಬಂದಿದೆ.

ಟ್ಯೂನೇಷಿಯಾದ ಸೂಹಾದ ಹೋಟೆಲ್ ರಿಯು ಇಂಪೀರಿಯಲ್ ಮರ್ಹಬಾದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಸುಮಾರು 19 ಜನ ಪ್ರವಾಸಿಗರು ಹೋಟೆಲ್ ನಲ್ಲಿ ಸಾವನ್ನಪ್ಪಿರುವ ವರದಿಗಳು ಬಂದಿದೆ.

English summary
A bomb blast killed several worshippers at a Shia mosque in Kuwait on Friday, coming days after similar attacks on Shiite mosques in Saudi Arabia and Yemen, and Isis claimed responsibility for the latest attack as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X