ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಲ್ ಕ್ಲಿಂಟನ್ ವಿರುದ್ಧ ಲಂಚದ ಆರೋಪ ಹೊರಿಸಿದ ನವಾಜ್ ಷರೀಫ್

ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ವಿರುದ್ಧ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಲಂಚದ ಆರೋಪ. ಕ್ಲಿಂಟನ್ ಅವರು, 1998ರಲ್ಲಿ ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆ ನಡೆಸದಂತೆ ತಾಕೀತು ಮಾಡಿದ್ದರು. ತಮ್ಮ ಮಾತು ಕೇಳಿದರೆ, 5 ಬಿಲಿಯನ್ ಅಮೆರಿಕನ

|
Google Oneindia Kannada News

ಇಸ್ಲಾಮಾಬಾದ್, ಜುಲೈ 20: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ವಿರುದ್ಧ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು ಲಂಚದ ಆಮಿಷ ಒಡ್ಡಿದ ಆರೋಪ ಹೊರಿಸಿದ್ದಾರೆ.

ಪಾಕ್ ಉಗ್ರವಾದಿ ರಾಷ್ಟ್ರ ಎಂದು ಘೋಷಿಸಿದ ಅಮೆರಿಕಪಾಕ್ ಉಗ್ರವಾದಿ ರಾಷ್ಟ್ರ ಎಂದು ಘೋಷಿಸಿದ ಅಮೆರಿಕ

1998ರಲ್ಲಿ ಪಾಕಿಸ್ತಾನ ಸರ್ಕಾರವು ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸಲು ಸಜ್ಜಾಗಿದ್ದ ವೇಳೆಯಲ್ಲಿ, ತಮಗೆ ಅಂದಿನ ಅಮೆರಿಕ ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು, ಆ ಪರೀಕ್ಷೆ ನಡೆಸದಂತೆ ತಾಕೀತು ಮಾಡಿದ್ದರು. ಅದಕ್ಕಾಗಿ, 5 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು ಲಂಚವಾಗಿ ನೀಡುವುದಾಗಿಯೂ ತಿಳಿಸಿದ್ದರು. ಆದರೆ, ಪಾಕಿಸ್ತಾನದ ಜನತೆಯ ಸುರಕ್ಷೆಯನ್ನು ನಾನು ಗಮನದಲ್ಲಿಟ್ಟುಕೊಂಡು ಆ ಆಮಿಷವನ್ನು ತಿರಸ್ಕರಿಸಿದ್ದೆ ಎಂದು ಅವರು ತಿಳಿಸಿದ್ದಾರೆ.

Bill Clinton offered $5 billion to not conduct nuclear test in 1998: Nawaz Sharif

1998ರಲ್ಲಿ ಭಾರತವು ಅಂದಿನ ಪ್ರಧಾನಿ ವಾಜಪೇಯಿ ನೇತೃತ್ವದಲ್ಲಿ ರಾಜಸ್ಥಾನ ಪೊಖ್ರಾನ್ ನಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸಿತ್ತು. ಇದರಿಂದ ಪ್ರೇರಣೆಗೊಂಡ ಪಾಕಿಸ್ತಾನವೂ, ಕೆಲವೇ ದಿನಗಳಲ್ಲಿ ತನ್ನಲ್ಲಿದ್ದ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆ ನಡೆಸಿತ್ತು.

ಭಾರತ ನಡೆಸಿದ್ದ ಈ ಅಣ್ವಸ್ತ್ರ ಪರೀಕ್ಷೆಯು ಅಂತಾರಾಷ್ಟ್ರೀಯ ಸಮುದಾಯವನ್ನು ಬೆಚ್ಚಿಬೀಳಿಸಿತ್ತಲ್ಲದೆ, ಭಾರೀ ದೊಡ್ಡ ಸುದ್ದಿ ಹಾಗೂ ವಿವಾದಕ್ಕೆ ಕಾರಣವಾಗಿತ್ತು. ಅಭಿವೃದ್ಧಿಶೀಲ ರಾಷ್ಟ್ರವೊಂದು ಅಣ್ವಸ್ತ್ರಗಳನ್ನು ಹೊಂದುವುದನ್ನು ಕಂಡು ಕರುಬಿಕೊಂಡ ಅಮೆರಿಕ, ಭಾರತದ ಮೇಲೆ ಹಲವಾರು ಆರ್ಥಿಕ ದಿಗ್ಬಂಧನಗಳನ್ನು ಹೇರಿತ್ತು. ಆದರೆ, ಇದಕ್ಕೆ ಅಂದಿನ ಪ್ರಧಾನಿ ವಾಜಪೇಯಿ ಸೊಪ್ಪು ಹಾಕಿರಲಿಲ್ಲ.

English summary
Prime Minister Nawaz Sharif said on Wednesday that had he not cared for Pakistan, he would have accepted former US president Bill Clinton's offer of $5 billion for not carrying out nuclear tests in 1998.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X