ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ ಪ್ರಶಸ್ತಿ ಪಡೆದ ಬೆಂಗಳೂರು ಮೂಲದ ಶಿಕ್ಷಕಿ

By Vanitha
|
Google Oneindia Kannada News

ವಾಷಿಂಗ್ಟನ್, ಸೆಪ್ಟಂಬರ್, 05 : ಬೆಂಗಳೂರು ಮೂಲದ ಅಮೆರಿಕಾ ಪ್ರಾಧ್ಯಾಪಕಿಗೆ ವಾಷಿಂಗ್ಟನ್ ನ ಪ್ರತಿಷ್ಠಿತ ಗೌರವ ಸಂದಿದೆ. ಪ್ರಶಸ್ತಿ ಪಡೆದ ಇವರು ವಿದೇಶ ನೆಲದಲ್ಲಿ ಭಾರತದ ಖ್ಯಾತಿಯನ್ನು ಇನ್ನಷ್ಟು ಇಮ್ಮಡಿಗೊಳಿಸಿದ್ದಾರೆ.

ಬೆಂಗಳೂರು ಮೂಲದ ಅಮೆರಿಕಾ ಪ್ರಾಧ್ಯಾಪಕಿ ಪ್ರೀತಿಕಾ ಕುಮಾರ್, ಪ್ರತಿಷ್ಠಿತ ಔಟ್ ಸ್ಟ್ಯಾಡಿಂಗ್ ಟೀಚರ್ ಪ್ರಶಸ್ತಿ-2015 ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೋಧನೆಯಲ್ಲಿ ಯಾವಾಗಲೂ ಸೃಜನಶೀಲತೆ, ಕ್ರಿಯಾಶೀಲತೆಯನ್ನು ತೋರಿದ್ದಕ್ಕಾಗಿ ಇವರ ಬೋಧನಾ ಶೈಲಿಯನ್ನು ಮೆಚ್ಚಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.[ಉಡುಪಿಯ ಮೀರಾ ಅಮೆರಿಕದ 'ಮಹಾಶಿಕ್ಷಕಿ']

Bengaluru based lecturer Preethika Kumar get America Award

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿರುವ ಇವರು,2007 ರಿಂದ ಕಾನ್ಸಾಸ್ ನ ವಿಚಿಟಾ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನವೆಂಬರ್ 19 ರ ಸೋಮವಾರದಂದು ನ್ಯೂಜೆರ್ಸಿಯ ನ್ಯೂ ಬ್ರನ್ ಸ್ವಿಕ್ ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿಶ್ವವಿದ್ಯಾಲಯ ತಿಳಿಸಿದೆ.

ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದು ಸಾಮಾನ್ಯವಾದ ಸಂಗತಿಯೇನಲ್ಲ. ಪ್ರತಿಯೊಂದು ಬೋಧನೆಯು ಯಾವಾಗಲೂ ವಿಭಿನ್ನ ರೀತಿಯಲ್ಲಿಯೇ ಮೂಡಿ ಬರಬೇಕಾಗುತ್ತದೆ. ಇದಕ್ಕೆ ಬಹಳ ಸೃಜನಶೀಲತೆ, ತಾಳ್ಮೆ, ಕ್ರಿಯಾಶೀಲತೆ,[ಪ್ರಯತ್ನ, ಶ್ರಮ, ತ್ಯಾಗ ಎಲ್ಲವೂ ಬೇಕಾಗುತ್ತದೆ ಎಂದು ಪ್ರೀತಿಕಾ ಕುಮಾರ್ ಸಾಬೀತು ಮಾಡಿ ತೋರಿಸಿ ಸಾಧನೆಯ ಪಥ ತುಳಿದಿದ್ದಾರೆ.

English summary
Preethika Kumar basically bangalore.She studied in Bangalore University. she is lecturer in america. Now Preethika get 'Out Standing Teacher Award-2015'.Congrats Preethika Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X