ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ಭೀಕರ ಬಸ್ ಅಪಘಾತ; 36 ಜನರು ಬಲಿ

ಚೀನಾದಲ್ಲಿ ಸಂಭವಿಸಿದ ಬಸ್ ದುರಂತದಲ್ಲಿ 36 ಸಾವು. ಗುರುವಾರ ಮಧ್ಯರಾತ್ರಿ ಸಂಭವಿಸಿದ ಅಪಘಾತ. ಶಾಂಕ್ಸಿ ಪ್ರಾಂತ್ಯದಲ್ಲಿರುವ ಸುರಂಗದಲ್ಲಿ ಹಾದು ಹೋಗುವಾಗ ಸಂಭವಿಸಿದ ಅಪಘಾತ.

|
Google Oneindia Kannada News

ಬೀಜಿಂಗ್, ಆಗಸ್ಟ್ 11: ಇಲ್ಲಿನ ಶಾಂಕ್ಸಿ ಪ್ರಾಂತ್ಯದಲ್ಲಿ ಗುರುವಾರ (ಆಗಸ್ಟ್ 10) ಮಧ್ಯರಾತ್ರಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ ಕನಿಷ್ಠ 36 ಪ್ರಯಾಣಿಕರು ಸಾವನ್ನಪ್ಪಿದ್ದು, 13 ಜನರು ಗಾಯಗೊಂಡಿದ್ದಾರೆ.

ಚೀನಾ ವಿರುದ್ಧದ ಯುದ್ಧಕ್ಕೆ ತಯಾರಿ ಆರಂಭಿಸಿತೇ ಭಾರತ?ಚೀನಾ ವಿರುದ್ಧದ ಯುದ್ಧಕ್ಕೆ ತಯಾರಿ ಆರಂಭಿಸಿತೇ ಭಾರತ?

ಚೀನಾದ ವಾಯುವ್ಯ ಭಾಗದಲ್ಲಿರುವ ಚೆಂಗ್ಡು ಎಂಬ ಊರಿನಿಂದ ಹೊರಟಿದ್ದ ಬಸ್, ಚೀನಾದ ಕೇಂದ್ರ ಭಾಗದಲ್ಲಿರುವ ಲ್ಯೂಯೋಯಾಂಗ್ ನಗರಕ್ಕೆ ಪ್ರಯಾಣ ಬೆಳೆಸಿತ್ತು.

At least 36 killed, 13 injured in bus crash in northern China

ಮಾರ್ಗ ಮಧ್ಯೆ, ಶಾಂಕ್ಸಿ ಪ್ರಾಂತ್ಯದಲ್ಲಿರುವ ಸುರಂಗ ಮಾರ್ಗದ ಮೂಲಕ ಹಾದು ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿದ ಬಸ್, ಸುರಂಗದ ಗೋಡೆಗೆ ರಭಸವಾಗಿ ಢಿಕ್ಕಿ ಹೊಡೆದು ಪಲ್ಟಿಯಾಯಿತೆಂದು, ಅಪಘಾತದಲ್ಲಿ ಬದುಕುಳಿದ ಪ್ರಯಾಣಿಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಚೀನಾದಲ್ಲಿ 7ರಷ್ಟು ತೀವ್ರತೆಯ ಪ್ರಬಲ ಭೂಕಂಪಚೀನಾದಲ್ಲಿ 7ರಷ್ಟು ತೀವ್ರತೆಯ ಪ್ರಬಲ ಭೂಕಂಪ

ಚೀನಾದ ಸಿಯುಚುವಾನ್ ಪ್ರಾಂತ್ಯದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ್ದ ಭೂಕಂಪಕ್ಕೆ 20 ಜನರು ಮೃತರಾಗಿದ್ದ ದುರ್ಘಟನೆ ಮರೆಯುವ ಮುನ್ನವೇ ಈ ಬಸ್ ದುರಂತವಾಗಿರುವುದು ಚೀನಾದ ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ.

English summary
At least 36 people were killed and 13 injured when a bus slammed into a tunnel wall on an expressway in China. The coach crashed in Shaanxi province on Thursday night after departing from Chengdu in southwest Sichuan province en route to the central city of Luoyang.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X