ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನದಲ್ಲಿ ಕಾರ್ ಬಾಂಬ್ ಸ್ಪೋಟ, 24 ಸಾವು, 60 ಜನರಿಗೆ ಗಾಯ

By Sachhidananda Acharya
|
Google Oneindia Kannada News

ಲಷ್ಕರ್ ಘಾ, ಜೂನ್ 22: ಅಫ್ಘಾನಿಸ್ತಾನದ ಲಷ್ಕರ್ ಘಾನಲ್ಲಿ ಕಾರ್ ಬಾಂಬ್ ಸ್ಪೋಟಕ್ಕೆ ಕನಿಷ್ಟ 24 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ದಕ್ಷಿಣ ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದ ರಾಜಧಾನಿ ಲಷ್ಕರ್ ಘಾ ನಲ್ಲಿ ಬ್ಯಾಂಕ್ ಕಚೇರಿಯೊಂದರ ಹೊರಗೆ ಈ ಬಾಂಬ್ ಸ್ಪೋಟ ಸಂಭವಿಸಿದೆ. ಸ್ಥಳಕ್ಕೆ ರಕ್ಷಣಾ ಪಡೆಗಳು ಧಾವಿಸಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

At least 24 killed and 60 wounded as car bomb hits bank in Afghanistan

ಸಾವಿಗೀಡಾದವರಲ್ಲಿ ಸೇನಾ ಸಿಬ್ಬಂದಿಗಳು, ನಾಗರೀಕರು, ನ್ಯೂ ಕಾಬೂಲ್ ಬ್ಯಾಂಕಿನ ಸಿಬ್ಬಂದಿಗಳೂ ಸೇರಿದ್ದಾರೆ. ಇವರೆಲ್ಲಾ ಬ್ಯಾಂಕ್ ಕಚೇರಿಯಿಂದ ತಮ್ಮ ಸಂಬಳ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ.

ಸದ್ಯಕ್ಕೆ ಯಾವುದೇ ಭಯೋತ್ಪಾದನಾ ಸಂಘಟನೆಗಳು ಘಟನೆಯ ಹೊಣೆ ಹೊತ್ತುಕೊಂಡಿಲ್ಲ.

English summary
A car bomb exploded outside a New Kabul Bank in Lashkar Gah, capital of the southern Afghan province of Helmand. At least 24 people killed and nearly 60 others wounded in this car bomb blast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X