ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಲಿಫೋರ್ನಿಯಾ ವಿವಿಯಲ್ಲಿ ದೀಪಾವಳಿ ಆಚರಣೆಗೆ ಸಿದ್ಧತೆ

|
Google Oneindia Kannada News

ಕ್ಯಾಲಿಫೋರ್ನಿಯಾ, ಅ,20: ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಭಾರತೀಯ ವಿದ್ಯಾರ್ಥಿಗಳ ಕೂಟ (ಎಐಎಸ್) ದೀಪಾವಳಿ ಸಂಭ್ರಮಾಚರಣೆಗೆ ಭರದ ಸಿದ್ಧತೆ ಮಾಡಿಕೊಂಡಿದೆ. ಗಾರ್ಬಾ, ದಂಡಿಯಾ ನೈಟ್‌ ನಂತರ ಇದೀಗ ದೀಪಾವಳಿ ಆಚರಿಸಲು ವಿದ್ಯಾರ್ಥಿಗಳು ಮುಂದಾಗಿದ್ದಾರೆ.

ಅಕ್ಟೋಬರ್ 26, ಭಾನುವಾರ ವಿದ್ಯಾರ್ಥಿಗಳು ದೀಪಾವಳಿ ಆಚರಿಸಲು ತಯಾರಾಗಿದ್ದಾರೆ. ಶೈಕ್ಷಣಿಕ ವರ್ಷದ ಆರಂಭವನ್ನು ಗಾರ್ಬಾ ಮತ್ತು ದಂಡಿಯಾದ ಮೂಲಕ ಸ್ವಾಗತಿಸಿದ ವಿದ್ಯಾರ್ಥಿಗಳು ಭಾರತೀಯ ಸಂಪ್ರದಾಯವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಮನುಕ್ಷ ಘೇಲಾನಿ ಮತ್ತು ತಂಡದವರ ನೇತೃತ್ವದಲ್ಲಿ ನಡೆದ ಗಾರ್ಬಾ-2014 ಉತ್ತಮ ಮನರಂಜನೆ ನೀಡದ್ದಲ್ಲದೇ ಎಲ್ಲರ ಮೆಚ್ಚುಗೆ ಗಳಿಸಿತು.[ಕ್ಯಾಲಿಫೋರ್ನಿಯಾ ವಿವಿಯಲ್ಲಿ ಭಾರತೀಯರ ಗಣೇಶೋತ್ಸವ]

america

ದೇವಿ ಪೂಜೆಯೊಂದಿಗೆ ಆರಂಭವಾದ ಗಾರ್ಬಾ ನೃತ್ಯ ಮನ ಸೆಳೆಯಿತು. ಅಮೆರಿಕದಲ್ಲೂ ಭಾರತೀಯ ಪರಂಪರೆಯ ವಾತಾವರಣ ನಿರ್ಮಾಣವಾಗಿತ್ತು. ವಿಶ್ವವಿದ್ಯಾಲಯದ ರೋನಾಲ್ಡ್ ಟುಟೋರ್ ಕ್ಯಾಂಪಸ್ ಸಂಪೂರ್ಣ ರಂಗು ರಂಗಿನಿಂದ ಕೂಡಿದ್ದು ವಿದ್ಯಾರ್ಥಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ವೇಷಭೂಷಣ ಸ್ಪರ್ಧೆ ಉತ್ಸವದ ಮತ್ತೊಂದು ವಿಶೇಷ. ಯಾರಿಗೆ ಬಹುಮಾನ ನೀಡಬೇಕು ಎಂಬ ಗೊಂದಲ ನಿರ್ಣಾಯಕರಲ್ಲಿ ಮನೆಮಾಡಿದ್ದರೆ ಸಂಭ್ರಮವನ್ನು ಕಣ್ಣು ತುಂಬಿಕೊಂಡ ವಿದ್ಯಾರ್ಥಿಗಳಲ್ಲಿ ಅದೇನೋ ಪುಳಕ.

ಆಹಾರ ವ್ಯವಸ್ಥೆಯೂ ಅಷ್ಟೇ ಅಚ್ಚುಕಟ್ಟಾಗಿ ಮೂಡಿಬಂದಿತು. ವಿದ್ಯಾರ್ಥಿಗಳು, ಉಪನ್ಯಾಸಕರು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು.[ಅಕ್ಕ ಸಮ್ಮೇಳನ ಅತಿಥಿಯಾಗಿ ಎಸ್ಎಲ್ ಭೈರಪ್ಪ 'ಯಾನ']

ಜಮ್ಮು ಕಾಶ್ಮೀರದ ಪ್ರವಾಹ ಸಂತ್ರಸ್ತರಿಗೆ ದೇಣಿಗೆ ನೀಡಲಾಯಿತು. ಭಾರತ ಪಕೃತಿ ವಿಕೋಪ ಪರಿಹಾರ ನಿಧಿಗೆ ಎಐಎಸ್ ತಾನು ಸಂಗ್ರಹಿಸಿದ ದೇಣಿಗೆಯನ್ನು ನೀಡಿತು. ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದವರಿಂದ ಸಂಗ್ರಹಿಸಿದ ದೇಣಿಗೆಯನ್ನು ಅಮೆರಿಕದ ಸ್ವಯಂ ಸೇವಾ ಸಂಸ್ಥೆಯೊಂದರ ಮೂಲಕ ಭಾರತದ ಪಕೃತಿ ವಿಕೋಪ ಪರಿಹಾರ ನಿಧಿಗೆ ಕಳುಹಿಸಿಕೊಡಲಾಯಿತು.

america
English summary
After Garba, dandiya night, now Association of Indian Students (AIS) at University of Southern California is all set to celebrate Diwali. The AIS will celebrate Diwali, the festival of lights, on Sunday, Oct 26. AIS began its academic year with much awaited Garba and Dandiya Night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X