ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಿ ಕಾಯುವ ಅತ್ಯಾಧುನಿಕ ಡ್ರೋನ್: ಭಾರತಕ್ಕೆ ಅಮೆರಿಕದ ಕೊಡುಗೆ

ಅಮೆರಿಕದಿಂದ ಭಾರತಕ್ಕೆ ಗಡಿ ಕಾವಲು ಡ್ರೋನ್ ಗಳ ನೀಡಿಕೆ. ಸುಮಾರು 12 ಸಾವಿರ ಕೋಟಿ ರು. ಒಪ್ಪಂದಕ್ಕೆ ಪ್ರಸ್ತಾವನೆ ಸಲ್ಲಿಸಿದ್ದ ಭಾರತ. ಸೋಮವಾರ ನಡೆದ ಮೋದಿ- ಟ್ರಂಪ್ ಮಾತುಕತೆ ವೇಳೆ ಅಮೆರಿಕದಿಂದ ಹಸಿರು ನಿಶಾನೆ.

|
Google Oneindia Kannada News

ವಾಷಿಂಗ್ಟನ್, ಜೂನ್ 27: ಭಾರತ ಹಾಗೂ ಅಮೆರಿಕ ನಡುವಿನ ರಕ್ಷಣಾ ವಲಯದ ಸ್ನೇಹ- ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸಲು ನಿರ್ಧರಿಸಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್, ತಮ್ಮ ಮೊದಲ ಭೇಟಿಯ ವೇಳೆ ಈ ಕುರಿತಂತೆ ಮಾತುಕತೆ ನಡೆಸಿದ್ದಾರೆ.

ಇದರ ಫಲವಾಗಿ, ಅಮೆರಿಕ ಸರ್ಕಾರವು ಭಾರತೀಯ ವಾಯುಸೇನೆಗೆ ಗಡಿ ಕಾಯಲು ಉಪಯೋಗಿಸುವ, ಹೊಚ್ಚ ಹೊಸ ತಂತ್ರಜ್ಞಾನದ ಡ್ರೋನ್ ಗಳನ್ನು ನೀಡಲು ನಿರ್ಧರಿಸಿದೆ.

As Prime Minister Narendra Modi Meets Donald Trump, US Clears Rs. 12,000 crore Drone Deal

ಸುಮಾರು 12 ಸಾವಿರ ಕೋಟಿ ರು. ಮೌಲ್ಯದ ಈ ಯೋಜನೆಯ ಒಪ್ಪಂದದ ಪ್ರಸ್ತಾವನೆಯನ್ನು ಭಾರತ ಸರ್ಕಾರ ಈ ಹಿಂದೆಯೇ ಅಮೆರಿಕಕ್ಕೆ ಸಲ್ಲಿಸಿತ್ತು. ಇದೀಗ, ಮೋದಿ- ಟ್ರಂಪ್ ಮಾತುಕತೆ ವೇಳೆ ಆ ಒಪ್ಪಂದಕ್ಕೆ ಅಮೆರಿಕದ ವತಿಯಿಂದ ಹಸಿರು ನಿಶಾನೆ ಸಿಕ್ಕಿದೆ.

ಭೂ ಗಡಿಗಳನ್ನಷ್ಟೇ ಅಲ್ಲದೆ, ಕರಾವಳಿ ಭಾಗದ ಒಳ ನುಸುಳುವಿಕೆ ಹಾಗೂ ಶಿಸ್ತು ಉಲ್ಲಂಘನೆಯಂಥ ಪ್ರಕರಣಗಳನ್ನು ಪತ್ತೆ ಹಚ್ಚಲು ಈ ಡ್ರೋನ್ ಗಳು ನೆರವಾಗುತ್ತವೆ. ಈ ಡ್ರೋನ್ ಗಳ ಸೇರ್ಪಡೆಯಿಂದಾಗಿ, ಭಾರತೀಯ ವಾಯು ಸೇನೆಗೆ ಆನೆಬಲ ಬಂದಂತಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.

ಇದಷ್ಟೇ ಅಲ್ಲದೆ, ಅಮೆರಿಕ, ಭಾರತ ಹಾಗೂ ಜಪಾನ್ ದೇಶಗಳ ನೌಕಾ ಪಡೆಗಳು, ಈ ಮೂರೂ ದೇಶಗಳಿಗೆ ಸಂಬಂಧಿಸಿದ ಕಡಲ ತೀರದಲ್ಲಿ ಕವಾಯತು, ಶಸ್ತ್ರಾಭ್ಯಾಸ ಮುಂತಾದ ಸೇನಾ ತಯಾರಿ, ಕೌಶಲ್ಯಾಭಿವೃದ್ಧಿಯ ಚಟುವಟಿಕೆಗಳನ್ನು ನಡೆಸಲು ಸಮ್ಮತಿಸಲಾಗಿದೆ. ಇದರಿಂದ, ಭಾರತ ದೇಶದ ನೌಕಾಪಡೆಯಲ್ಲಿರುವ ಸೈನಿಕರಿಗೆ ಅಮೆರಿಕ, ಜಪಾನ್ ದೇಶಗಳ ಸೈನಿಕರು ಉಪಯೋಗಿಸುವ ಶಸ್ತ್ರಾಸ್ತ್ರಗಳ ಪರಿಚಯ, ಯುದ್ಧ ತಂತ್ರಗಾರಿಕೆ ಮುಂತಾದ ವಿಚಾರಗಳಲ್ಲಿ ಅಪಾರವಾದ ಜ್ಞಾನ ಲಭ್ಯವಾಗಲು ನೆರವಾಗುತ್ತದೆ.

English summary
The US has cleared the sale of predator Guardian drones to India, as President Donald Trump and Prime Minister Narendra Modi pledged today to deepen their defence and security cooperation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X