ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಂಘೈ ಒಕ್ಕೂಟ ಶೃಂಗಸಭೆಯಲ್ಲಿ ಮೋದಿ, ಷರೀಫ್ ಭೇಟಿ

ಕಜಕಿಸ್ತಾನದ ಆಸ್ತಾನಾದಲ್ಲಿ ಏರ್ಪಡಿಸಲಾಗಿರುವ ಶಾಂಘೈ ಸಹಕಾರ ಒಕ್ಕೂಟ (ಎಸ್ ಸಿಒ) ಸಮ್ಮೇಳನ. ಈ ಸಮ್ಮೇಳನ ಹಿನ್ನೆಲೆಯಲ್ಲಿ ಕಜಕಿಸ್ತಾನಕ್ಕೆ ತೆರಳಿರುವ ಪ್ರಧಾನಿ ಮೋದಿಯಿಂದ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಭೇಟಿ.

|
Google Oneindia Kannada News

ಆಸ್ತಾನಾ, ಜೂನ್ 9: ಕಜಕಿಸ್ತಾನದ ರಾಜಧಾನಿಯಾದ ಆಸ್ತಾನಾದಲ್ಲಿ ಗುರುವಾರ ರಾತ್ರಿ ಭೇಟಿಯಾದ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್, ಪರಸ್ಪರ ಭೇಟಿಯಾಗಿ ಉಭಯ ಕುಶಲೋಪರಿ ನಡೆಸಿದರು.

ಶುಕ್ರವಾರದಿಂದ ಆಸ್ತಾನಾದಲ್ಲಿ ಶಾಂಘೈ ಸಹಕಾರ ಒಕ್ಕೂಟ (ಎಸ್ ಸಿಒ) ಸಮ್ಮೇಳನ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ, ಎಸ್ ಸಿಒ ಎಕ್ಸ್ ಪೋ ಎಂಬ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಾಗುತ್ತದೆ. 'ಭವಿಷ್ಯದ ಇಂಧನ' ವಿಷಯ ಕುರಿತಂತೆ ಈ ಎಕ್ಸ್ ಪೋ ರೂಪಿಸಲಾಗಿದೆ.

As Narendra Modi heads to Astana, here's what's on the itinerary

ಈ ಹಿನ್ನೆಲೆಯಲ್ಲಿಯೇ, ಒಕ್ಕೂಟದ ಸದಸ್ಯ ರಾಷ್ಟ್ರಗಳಾದ ಚೀನಾ, ಕಿರ್ಗಿಸ್ತಾನ, ಕಜಕಿಸ್ತಾನ, ರಷ್ಯಾ, ಉಜ್ಬೇಕಿಸ್ತಾನ ಹಾಗೂ ತಜಕಿಸ್ತಾನ ರಾಷ್ಟ್ರಗಳ ಪ್ರಧಾನಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿವೆ.

ಈ ಸಮ್ಮೇಳನದಲ್ಲಿ ಭಾರತವು ಎಸ್ ಸಿಒನ ಪೂರ್ಣ ಪ್ರಮಾಣದ ಸದಸ್ಯತ್ವವನ್ನು ಪಡೆಯುವ ವಿಶ್ವಾಸ ಹೊಂದಿದೆ.

ಇದೇ ಸಮ್ಮೇಳನದಲ್ಲಿ ಮೋದಿ, ಷರೀಫ್ ಮತ್ತೊಮ್ಮೆ ಭೇಟಿಯಾಗಿ ಮಾತುಕತೆ ನಡೆಸುವ ನಿರೀಕ್ಷೆಯಿದ್ದು, ಉಭಯ ದೇಶಗಳ ಗಡಿ ವಿವಾದ, ಭಯೋತ್ಪಾದನೆ ನಿಗ್ರಹ ಹಾಗೂ ಪಾಕಿಸ್ತಾನ ಜೈಲಿನಲ್ಲಿ ಬಂಧಿಯಾಗಿರುವ ಭಾರತದ ಗೂಢಾಚಾರಿ ಕುಲಭೂಷಣ್ ಜಾಧವ್ ಬಿಡುಗಡೆ ಬಗ್ಗೆ ಮಾತುಕತೆ ನಡೆಯುವ ನಿರೀಕ್ಷೆಯಿದೆ.

English summary
Prime Minister Narendra Modi exchanged pleasantries with his Pakistani counterpart Nawaz Sharif at a reception in Astana on Thursday night. The leaders who are participating in the Shanghai Cooperation Organisation (SCO) Summit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X