ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ ಅಧ್ಯಕ್ಷರ ಆಯ್ಕೆ ತೀರ್ಮಾನ, ಇಂದು ಮತದಾನ

ಮಂಗಳವಾರ ಬೆಳಗ್ಗೆ 6ರಿಂದ 7 ಗಂಟೆಯೊಳಗೆ ಮತದಾನ ಶುರುವಾಗುತ್ತದೆ (ಭಾರತೀಯ ಕಾಲಮಾನದ ಪ್ರಕಾರ ಸಂಜೆ 4.30ರಿಂದ 5.30). ಅಲ್ಲಿನ ಎರಡು ರಾಜ್ಯದಲ್ಲಿ ರಾತ್ರಿ 9ರ ತನಕ (ಅಲ್ಲಿನ ಸಮಯ) ಮತದಾನ ಮುಂದುವರಿಯುತ್ತದೆ.

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ವಾಷಿಂಗ್ಟನ್‌, ನವೆಂಬರ್ 8: ಅಮೆರಿಕಾದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವವರು ಯಾರು ಎಂದು ಚಿತ್ರಣ ದೊರೆಯುವ ದಿನ ಮಂಗಳವಾರ. ಇದು ಬರೀ ಅಮೆರಿಕನ್ನರಿಗಷ್ಟೇ ಅಲ್ಲ. ಇಡೀ ಜಗತ್ತಿಗೆ ಕುತೂಹಲ ಮೂಡಿಸಿರುವ ವಿದ್ಯಮಾನ. ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಹಾಗೂ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮಧ್ಯೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.

ಇವರಿಬ್ಬರ ಪೈಕಿ ಅಮೆರಿಕಾದ 45ನೇ ಅಧ್ಯಕ್ಷರು ಯಾರಾಗಬಹುದು ಎಂಬ ರಹಸ್ಯ ಗೊತ್ತಾಗಬೇಕು ಅಂದರೆ ಇನ್ನೂ ಕೆಲ ದಿನಗಳು ಬೇಕಾಗುತ್ತದೆ. ಈ ಬಾರಿ 48ನೇ ಉಪಾಧ್ಯಕ್ಷರು ಸಹ ಆಯ್ಕೆ ಆಗಲಿದ್ದಾರೆ. ಆ ಹುದ್ದೆಗೆ ರಿಪಬ್ಲಿಕನ್ ಪಕ್ಷದ ಮೈಕ್ ಪೆನ್ಸ್, ಡೆಮಾಕ್ರಟಿಕ್ ಪಕ್ಷದಿಂದ ಟಿಮ್ ಕೇನ್ ಅಖಾಡದಲ್ಲಿದ್ದಾರೆ.[ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆ ಮುನ್ನಲೆ]

Hillary-Donald Trump

ಅಂದಹಾಗೆ ಮಂಗಳವಾರ ಬೆಳಗ್ಗೆ 6ರಿಂದ 7 ಗಂಟೆಯೊಳಗೆ ಮತದಾನ ಶುರುವಾಗುತ್ತದೆ (ಭಾರತೀಯ ಕಾಲಮಾನದ ಪ್ರಕಾರ ಸಂಜೆ 4.30ರಿಂದ 5.30). ಅಲ್ಲಿನ ಎರಡು ರಾಜ್ಯದಲ್ಲಿ ರಾತ್ರಿ 9ರ ತನಕ (ಅಲ್ಲಿನ ಸಮಯ) ಮತದಾನ ಮುಂದುವರಿಯುತ್ತದೆ. ಸುಮಾರು ಹನ್ನೆರಡು ಕೋಟಿ ಮಂದಿ ಮತ ಹಾಕುವ ನಿರೀಕ್ಷೆ ಮಾಡಲಾಗಿದೆ.[ಟ್ರಂಪ್ ಗಿಂತ 4 ಪಾಯಿಂಟ್ ಮುಂದಿದ್ದಾರೆ ಹಿಲರಿ ಕ್ಲಿಂಟನ್]

ಮತದಾನಕ್ಕೆ ಮುಂಚಿತವಾಗಿ 'ಸಿಬಿಎಸ್‌ ನ್ಯೂಸ್‌' ನಡೆಸಿದ ಸಮೀಕ್ಷೆಯಲ್ಲಿ ಹಿಲರಿ ಅವರು ಟ್ರಂಪ್‌ ಅವರಿಗಿಂತ ಶೇ 4ರಷ್ಟು ಹೆಚ್ಚು ಮತಗಳನ್ನು ಪಡೆದಿದ್ದಾರೆ. ಹಿಲರಿ ಅವರಿಗೆ ಶೇ 45 ಮತ್ತು ಟ್ರಂಪ್‌ ಅವರಿಗೆ ಶೇ 41ರಷ್ಟು ಮತಗಳು ಬಂದಿವೆ. ಕಳೆದ ವಾರದ ಸಮೀಕ್ಷೆಯ ಲ್ಲಿಯೂ ಹಿಲರಿ ಅವರಿಗೆ ಮುನ್ನಡೆ ಇತ್ತು.[ಅಮೆರಿಕಾ ಅಧ್ಯಕ್ಷ ಚುನಾವಣೆಯಲ್ಲಿ ಯಾರಿಗೆ ಜಯ? ಮಂಗ ನುಡಿದ ಭವಿಷ್ಯ]

ಪದವಿಗಿಂತ ಕಡಿಮೆ ವಿದ್ಯಾಭ್ಯಾಸದ ಬಿಳಿಯರು ಮತ್ತು ಹಿರಿಯ ನಾಗರಿಕರು ಟ್ರಂಪ್‌ ಪರವಾಗಿದ್ದಾರೆ. ಮಹಿಳೆಯರು, ಆಫ್ರಿಕಾ-ಅಮೆರಿಕನ್ನರು ಮತ್ತು ಯುವ ಜನತೆ ಬೆಂಬಲ ಹಿಲರಿಗೆ ಹೆಚ್ಚಾಗಿದೆ ಎಂದು ಸಿಬಿಎಸ್‌ ನ್ಯೂಸ್‌ ಹೇಳಿದೆ.

English summary
America presidential election voting today. There is a close competition between Democratic party candidate Hillary Clinton and Republican party candidate Donald Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X