ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

162 ಪ್ರಯಾಣಿಕರಿದ್ದ ಏರ್‌ಏಷ್ಯಾ ವಿಮಾನ ನಾಪತ್ತೆ

|
Google Oneindia Kannada News

ಇಂಡೋನೇಷಿಯಾ, ಡಿ. 28 : ಇಂಡೋನೇಷಿಯಾದಿಂದ ಸಿಂಗಪುರಕ್ಕೆ ತೆರಳುತ್ತಿದ್ದ ಏರ್‌ ಏಷ್ಯಾ ವಿಮಾನ ರಾಡಾರ್ ಸಂಪರ್ಕ ಕಡಿದುಕೊಂಡಿದೆ. ಈ ವಿಮಾನದಲ್ಲಿ ಸಿಬ್ಬಂದಿ ಮತ್ತು ಪ್ರಯಾಣಿಕರು ಸೇರಿ 162 ಜನರಿದ್ದರು. ನಾಪತ್ತೆಯಾದ QZ 8501 ಏರ್‌ ಏಷ್ಯಾ ವಿಮಾನಕ್ಕಾಗಿ ನಡೆಸಿದ ಒಂದು ದಿನದ ಹುಡುಕಾಟ ಯಾವುದೇ ಫಲ ನೀಡಿಲ್ಲ.

ಇಂಡೋನೇಷಿಯಾದ ಸುರಬಯಾ ನಗರದಿಂದ QZ 8501 ವಿಮಾನ 162 ಜನರನ್ನು ಹೊತ್ತು ಸಿಂಗಪುರಕ್ಕೆ ತೆರಳಲು ಭಾನುವಾರ ಬೆಳಗ್ಗೆ 5.30ಕ್ಕೆ ಟೇಕ್‌ಆಫ್‌ ಆಗಿತ್ತು. 8.30ಕ್ಕೆ ವಿಮಾನ ಸಿಂಗಪುರಕ್ಕೆ ತಲುಪಬೇಕಿತ್ತು. ಆದರೆ, ವಿಮಾನ ಟೇಕ್‌ ಆಫ್‌ ಆದ ಕೆಲವು ಹೊತ್ತಿನ ಬಳಿಕ ನಿಯಂತ್ರಣ ಕೊಠಡಿ ಸಂಪರ್ಕ ಕಳೆದುಕೊಂಡಿದೆ. [ಎಂಎಚ್370 ಕಣ್ಮರೆ ಪ್ರಕರಣ ದುರಂತ ಅಂತ್ಯ]

AirAsia

ಏರ್ ಏಷ್ಯಾ QZ 8501 ವಿಮಾನ ನಾಪತ್ತೆಯಾಗಿರುವುದನ್ನು ಖಚಿತಪಡಿಸಿದೆ. ಆದರೆ, ವಿಮಾನ ಅಪಹರಣವಾಗಿದೆಯೇ?, ಪತನಗೊಂಡಿದಿಯೇ? ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ನಾಪತ್ತೆಯಾದ ವಿಮಾನದಲ್ಲಿದ್ದ ಪ್ರಯಾಣಿಕರ ಸಂಬಂಧಿಕರು ಸುರಬಯಾ ಏರ್‌ಪೋರ್ಟ್‌ನಲ್ಲಿ ಮಾಹಿತಿ ಪಡೆಯಲು ಕಾದು ಕುಳಿತಿದ್ದಾರೆ.

ಪ್ರಯಾಣಿಕರ ವಿವರ : ಇಂಡೋನೇಷಿಯಾದ ಸುರಬಯಾ ನಗರದಿಂದ ನಾಪತ್ತೆಯಾದ QZ 8501 ಏರ್‌ ಏಷ್ಯಾ ವಿಮಾನದಲ್ಲಿ ಸಿಂಗಪುರದ 1, ಮಲೇಷ್ಯಾದ 1, ದಕ್ಷಿಣ ಕೋರಿಯಾದ 3 ಮತ್ತು ಇಂಡೋನೇಷಿಯಾದ 157 ಪ್ರಯಾಣಿಕರಿದ್ದರು. [ಕ್ಷಿಪಣಿ ದಾಳಿಗೆ ಮಲೇಷ್ಯಾ ವಿಮಾನ ಪತನ, 295 ಸಾವು]

AirAsia

ಒಂದು ದಿನದ ಹುಡುಕಾಟಕ್ಕೆ ತೆರೆ : ಏರ್‌ ಏಷ್ಯಾ ವಿಮಾನ ಜಾವಾ ಸಮುದ್ರದಲ್ಲಿ ಪತನಗೊಂಡಿರಬಹುದು ಎಂದು ಶಂಕಿಸಲಾಗಿದೆ. ಭಾನುವಾರ ಮುಂಜಾನೆಯಿಂದ ನಡೆದ ಹುಡುಕಾಟವನ್ನು ರಾತ್ರಿಯಾದ ಕಾರಣ ನಿಲ್ಲಿಸಲಾಗಿದ್ದು, ಸೋಮವಾರ ಪುನಃ ಕಾರ್ಯಾಚರಣೆ ಆರಂಭಿಸಲಾಗುತ್ತದೆ.

2014ರ ಮಾರ್ಚ್ ತಿಂಗಳಿನಲ್ಲಿ ಮಲೇಷ್ಯಾ ಏರ್ ಲೈನ್ ವಿಮಾನ ಎಂಎಚ್370 ನಿಗೂಢವಾಗಿ ಕಣ್ಮರೆಯಾಗಿತ್ತು. ಮಾ. 25ರಂದು ವಿಮಾನದ ಹುಡುಕಾಟಕ್ಕೆ ತೆರೆಬಿದ್ದಿತ್ತು. ಐವರು ಭಾರತೀಯರು ಸೇರಿದಂತೆ 239 ಜನರಿದ್ದ, ಮಲೇಷ್ಯಾ ಏರ್ ಲೈನ್ ವಿಮಾನ ಎಂಎಚ್370 ವಿಮಾನ ಹಿಂದೂ ಮಹಾಸಾಗರದಲ್ಲಿ ಮುಳುಗಿದೆ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿತ್ತು.

English summary
QZ 8501 an AirAsia flight from the Indonesian city of Surabaya to Singapore lost contact with air traffic control on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X